ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ಕಲ್ಪಿಸುವ ಆರ್ಟಿಕಲ್ 370 ರದ್ದುಗೊಂಡಿದ್ದು, ಇದೇ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಸುಮಾರು 40ಕ್ಕೂ ಹೆಚ್ಚು ನಿಮಿಷಗಳ ಕಾಲ ಭಾಷಣ ಮಾಡಿದರು. ಈ ವೇಳೆ ಜಮ್ಮು-ಕಾಶ್ಮೀರ ಭೂಲೋಕದ ಮೇಲಿನ ಸ್ವರ್ಗ ಎಂದ ಪ್ರಧಾನಿ ಲಡಾಕ್ನಲ್ಲೂ ಅನೇಕ ಸಾಹಸ ಪ್ರವಾಸಿ ತಾಣಗಳಿವೆ ಎಂದು ತಿಳಿಸಿದರು.
ಶ್ಯಾಮ್ ಪ್ರಸಾದ್ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸು ಇದೀಗ ನಾವು ನನಸು ಮಾಡಿದ್ದು, ಇನ್ಮುಂದೆ ಜಮ್ಮು-ಕಾಶ್ಮೀರ ಅಭಿವೃದ್ಧಿ ಕಾಣಲಿದೆ ಎಂದರು. ಎಲ್ಲ ರಾಜ್ಯಗಳಲ್ಲಿರುವಂತೆ ಏಮ್ಸ್,ಐಐಟಿ,ಐಐಎಂ ಇಲ್ಲೂ ಸಹ ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಎಲ್ಲ ಮಕ್ಕಳಂತೆ ಇಲ್ಲಿನ ಮಕ್ಕಳಿಗೂ ಶಿಕ್ಷಣ ಸಿಗಲಿದೆ ಎಂದು ಮೋದಿ ತಿಳಿಸಿದರು. ಪ್ರಮುಖವಾಗಿ ಅವರು ಮಾತನಾಡಿದ ಅಂಶಗಳು ಇಂತಿವೆ.