ದೆಹಲಿ: ದೆಹಲಿ ಬಳಿಯ ಚಾವ್ಲಾದಲ್ಲಿರುವ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) ಶಿಬಿರದಲ್ಲಿ ಇರಿಸಿಕೊಂಡಿದ್ದ ಒಂದು ಮಗು ಸೇರಿ ಏಳು ಮಂದಿ ಮಾಲ್ಡೀವ್ಸ್ ಪ್ರಜೆಗಳನ್ನು ಸೋಮವಾರ ರಾತ್ರಿ ಬಿಡುಗಡೆ ಮಾಡಲಾಗಿದೆ ಎಂದು ಐಟಿಬಿಪಿ ತಿಳಿಸಿದೆ.
ಕರೋನೊ ವೈರಸ್ನಿಂದ ರಕ್ಷಿಸಲು ಚೀನಾದಲ್ಲಿದ್ದ ಭಾರತೀಯರನ್ನು ಸ್ಥಳಾಂತರಿಸುವ ವೇಳೆ ಏಳು ಮಂದಿ ಮಾಲ್ಡೀವಿಯನ್ನರು 323 ಭಾರತೀಯರೊಂದಿಗೆ ವಿಶೇಷ ಏರ್ ಇಂಡಿಯಾ ವಿಮಾನದಲ್ಲಿ ಭಾರತಕ್ಕೆ ಆಗಮಿಸಿದ್ದರು. ಎರಡು ವಿಶೇಷ ಕಾರ್ಯಾಚರಣೆಗಳಲ್ಲಿ 600 ಕ್ಕೂ ಹೆಚ್ಚು ಭಾರತೀಯರನ್ನು ಚೀನಾದಿಂದ ಸ್ಥಳಾಂತರಿಸಲಾಗಿತ್ತು.
ಚೀನಾದಿಂದ ದೆಹಲಿಗೆ ಬಂದ ಕೂಡಲೇ ಕರೋನಾ ವೈರಸ್ನಿಂದ ರಕ್ಷಿಸಲು ಮಾಲ್ಡೀವಿಯನ್ನರು ಮತ್ತು ಭಾರತೀಯರನ್ನು ಭಾರತೀಯ ಸೇನೆ ಮತ್ತು ಐಟಿಬಿಪಿ ಕರೋನೋ ವೈರಸ್ ಸೋಂಕು ತಡೆ ಶಿಬಿರಕ್ಕೆ ಅವರನ್ನು ಕಳುಹಿಸಲಾಗಿತ್ತು. ಅಲ್ಲಿ ಅವರು ಎರಡು ವಾರಗಳಿಗಿಂತ ಹೆಚ್ಚು ಕಾಲ ಇದ್ದರು.
ಕರೋನಾ ವೈರಸ್ ಪರೀಕ್ಷೆ ನಡೆಸಿ 200 ಮಂದಿಯನ್ನು ಐಟಿಬಿಪಿ ಶಿಬಿರದಿಂದ ಬಿಡುಗಡೆ ಮಾಡಲಾಗಿದೆ. ಇನ್ನುಳಿದವರನ್ನು ಮಂಗಳವಾರ ಸಂಜೆ ವೇಳೆಗೆ ಬಿಡುಗಡೆ ಮಾಡಬಹುದು ಎಂದು ಐಟಿಬಿಪಿ ತಿಳಿಸಿದೆ. ಸದ್ಭಾವನೆಯ ಸೂಚಕವಾಗಿ, ಐಟಿಬಿಪಿ ಶಿಬಿರದಿಂದ ಹೊರಗಡೆ ಬಂದ ಪ್ರತಿಯೊಬ್ಬರಿಗೂ ಗುಲಾಬಿ ಮತ್ತು ಕ್ಯಾಲೆಂಡರ್ ನೀಡಿ ಬೀಳ್ಕೊಡಲಾಯಿತು.
ಕೊರೊನಾ ವೈರಸ್ ಮೊದಲು ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡಿತು. ಅಂದಿನಿಂದ 1,800 ಜನ ಕರೋನಾ ವೈರಸ್ನಿಂದಾಗಿ ಚೀನಾದಲ್ಲಿ ಸಾವನ್ನಪ್ಪಿದ್ದಾರೆ. ಕನಿಷ್ಠ 11,741 ಜನರು ಸೋಂಕಿನಿಂದ ತೀವೃವಾಗಿ ಅಸ್ವಸ್ಥರಾಗಿದ್ದಾರೆ. ಚೀನಾದ ಹೊರಗಿನ 25 ದೇಶಗಳಲ್ಲಿ ಸುಮಾರು 800 ಕೊರೊನಾ ವೈರಸ್ ಪ್ರಕರಣಗಳು ದೃಡಪಟ್ಟಿದ್ದು, ಮೂರು ಸಾವು ಸಂಭವಿಸಿದೆ.
ಯುಎಸ್ ಸೇರಿದಂತೆ ಡಬ್ಲ್ಯುಎಚ್ಒ ವೈದ್ಯಕೀಯ ತಜ್ಞರ ತಂಡವು ಬೀಜಿಂಗ್ ಮತ್ತು ದಕ್ಷಿಣ ಮತ್ತು ನೈರುತ್ಯ ಚೀನಾದ ಪ್ರಾಂತ್ಯಗಳಾದ ಗುವಾಂಗ್‌ಡಾಂಗ್ ಮತ್ತು ಸಿಚುವಾನ್‌ಗೆ ಭೇಟಿ ನೀಡಿ ಕೋವಿಡ್ -19 ಹರಡುವಿಕೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ.