ನವದೆಹಲಿ: ಅನಾರೋಗ್ಯದ ಕಾರಣ ಬರೋಬ್ಬರಿ 21 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದು ಕೊನೆಯುಸಿರೆಳೆದಿದ್ದಾರೆ. ದೇಶದ 13ನೇ ರಾಷ್ಟ್ರಪತಿ, ಕಾಂಗ್ರೆಸ್ನ ಟ್ರಬಲ್ ಶೂಟರ್, ಚಾಣಾಕ್ಷ ರಾಜಕಾರಣಿ ಎಂಬ ಹೆಸರು ಗಳಿಸಿದ್ದ ಅವರ ನಿಧನಕ್ಕೆ ದೇಶವೇ ತೀವ್ರ ಸಂತಾಪ ಸೂಚಿಸಿದೆ.
-
Seven-day state mourning will be observed throughout India from 31 August to 6 September, both days inclusive: Govt of India #PranabMukherjee
— ANI (@ANI) August 31, 2020 " class="align-text-top noRightClick twitterSection" data="
">Seven-day state mourning will be observed throughout India from 31 August to 6 September, both days inclusive: Govt of India #PranabMukherjee
— ANI (@ANI) August 31, 2020Seven-day state mourning will be observed throughout India from 31 August to 6 September, both days inclusive: Govt of India #PranabMukherjee
— ANI (@ANI) August 31, 2020
ಭಾರತ ರತ್ನ ಪುರಸ್ಕೃತ ಪ್ರಣಬ್ ಮುಖರ್ಜಿ ನಿಧನಕ್ಕೆ ಗೌರವಾರ್ಥವಾಗಿ ದೇಶಾದ್ಯಂತ ಏಳು ದಿನಗಳ ಕಾಲ ಶೋಕಾಚರಣೆ ಘೋಷಣೆ ಮಾಡಲಾಗಿದೆ. ಈ ಕುರಿತಂತೆ ಕೇಂದ್ರ ಸರ್ಕಾರ ಮಾಹಿತಿ ನೀಡಿದ್ದು, ಹೀಗಾಗಿ ದೇಶದೆಲ್ಲೆಡೆ ರಾಷ್ಟ್ರಧ್ವಜವನ್ನು ಅರ್ಧ ಮಟ್ಟಕ್ಕೆ ಹಾರಿಸಲಾಗುತ್ತಿದೆ. ಇಂದಿನಿಂದ ಸೆಪ್ಟಂಬರ್ 6ರವರೆಗೆ ಶೋಕಾಚರಣೆ ಜಾರಿಯಲ್ಲಿರಲಿದೆ.
ಸಂಸತ್ ಭವನದಲ್ಲಿನ ರಾಷ್ಟ್ರ ಧ್ವಜವನ್ನ ಅರ್ಧಕ್ಕೆ ಇಳಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಪ್ರಣಬ್ ಮುಖರ್ಜಿ ಅವರ ಅಂತಿಮ ವಿಧಿ-ವಿಧಾನಗಳು ಮಂಗಳವಾರ ದೆಹಲಿಯಲ್ಲಿ ನಡೆಯಲಿವೆ ಎಂದು ತಿಳಿದು ಬಂದಿದೆ.