ETV Bharat / bharat

ಭಾರತದ ಶೇ. 69ರಷ್ಟು ಜೈಲು ಕೈದಿಗಳ ವಿಚಾರಣೆ ಬಾಕಿ: ವರದಿ - Number of Prisoners in India Prison

ಸಿಎಚ್‌ಆರ್‌ಐ ವರದಿ ಪ್ರಕಾರ, 2019 ರಲ್ಲಿ ಒಟ್ಟಾರೆ ಜೈಲುವಾಸದ ಪ್ರಮಾಣವು ರಾಷ್ಟ್ರೀಯ ಮಟ್ಟದಲ್ಲಿ ಶೇ 118.5 ರಷ್ಟಿದ್ದು, ಕಳೆದ ಐದು ವರ್ಷಗಳಲ್ಲಿ ಇದು ಅತ್ಯಧಿಕ ಪ್ರಮಾಣದಲ್ಲಿ ಇದೆ. ಜಿಲ್ಲಾ ಕಾರಾಗೃಹಗಳು ಮತ್ತು ಕೇಂದ್ರ ಕಾರಾಗೃಹಗಳ ಜೈಲು ಬಳಕೆ ದರ ಕ್ರಮವಾಗಿ ಶೇ 129.7 ಮತ್ತು ಶೇ 123.9 ರಷ್ಟು ಇತ್ತು.ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ದೆಹಲಿಯಲ್ಲಿ ಅತಿ ಹೆಚ್ಚು ಜೈಲು ದಟ್ಟಣೆ ಇದೆ, ಇಲ್ಲಿ ಶೇ 174.9 ರಷ್ಟು ಜೈಲುವಾಸಿಗಳಿದ್ದಾರೆ.

dssd
ಭಾರತದ ಶೇ 69ರಷ್ಟು ಜೈಲು ಕೈದಿಗಳ ವಿಚಾರಣೆ ಬಾಕಿ
author img

By

Published : Sep 5, 2020, 1:05 PM IST

ನವದೆಹಲಿ : ಕಾರಾಗೃಹಗಳು ಪ್ರತಿ ಕೈದಿಗೆ ದಿನವೊಂದಕ್ಕೆ 118 ರೂಪಾಯಿ ವಿನಿಯೋಗ ಮಾಡಬೇಕಾಗಿದ್ದು, 2019 ರ ಹೊತ್ತಿಗೆ ಭಾರತೀಯ ಜೈಲುಗಳಲ್ಲಿರುವ ಕೈದಿಗಳ ಪೈಕಿ ಶೇ 69.05 ರಷ್ಟು ಮಂದಿಯ ವಿಚಾರಣೆ ಬಾಕಿ ಉಳಿದಿದೆ. ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಯೊಂದು ನಡೆಸಿದ ಇತ್ತೀಚಿನ ಅಧ್ಯಯನದ ವೇಳೆ ಈ ಸಂಗತಿ ಬೆಳಕಿಗೆ ಬಂದಿದೆ.

ಪ್ರಿಸನ್ ಸ್ಟ್ಯಾಟಿಸ್ಟಿಕ್ಸ್ ಇಂಡಿಯಾದ 2019ರ ವರದಿ ಆಧಾರದ ಮೇಲೆ, ಕಾಮನ್ವೆಲ್ತ್ ಮಾನವ ಹಕ್ಕುಗಳ ಸಂಸ್ಥೆ ( ಸಿ ಎಚ್‌ ಆರ್‌ ಐ ) ಜೈಲುಲೋಕದ 10 ಸಂಗತಿಗಳ ಕುರಿತಂತೆ ವಿಶ್ಲೇಷಣೆ ನಡೆಸಿದೆ. ಜೈಲು ಜನಸಂಖ್ಯೆ ಮತ್ತು ಸೆರೆಮನೆಗಳ ಬಳಕೆ, ವಿಚಾರಣಾಧೀನ ಕೈದಿಗಳ ಪ್ರಮಾಣ, ಸೆರೆವಾಸಿಗಳ ಬಂಧನ ಅವಧಿ, ಮಹಿಳೆಯರು ಮತ್ತು ಕಾರಾಗೃಹಗಳು (ಕೈದಿಗಳು ಮತ್ತು ಸಿಬ್ಬಂದಿ ಸೇರಿದಂತೆ), ಶಿಕ್ಷಣ, ಬಂಧಿತರ ಜಾತಿ ಮತ್ತು ಧರ್ಮ, ಜೈಲು ಸಿಬ್ಬಂದಿ, ಅಪರಾಧವಾರು ಕೈದಿಗಳ ಸಂಖ್ಯೆ, ಜೈಲು ತಪಾಸಣೆ, ಕೈದಿಗಳ ಖರ್ಚುವೆಚ್ಚ ಮತ್ತು ಕಾರಾಗೃಹಗಳಲ್ಲಿನ ಸಾವುಗಳಂತಹ ಪ್ರಮುಖ ಸಂಗತಿಗಳ ಸುತ್ತ ವರದಿ ರೂಪುಗೊಂಡಿದೆ.

2019ರ ಹೊತ್ತಿಗೆ ಭಾರತದಲ್ಲಿ ಕೈದಿಗಳ ಸ್ಥಿತಿಗತಿ ಹೇಗಿತ್ತು ಎಂಬುದನ್ನು ಸಿಎಚ್‌ಆರ್‌ಐ ವಿಶ್ಲೇಷಣೆ ಎತ್ತಿ ತೋರಿಸಿದೆ. ಅದರ ಮುಖ್ಯಾಂಶಗಳು ಹೀಗಿವೆ.:

4.78 ಲಕ್ಷ ಕೈದಿಗಳು ಜೈಲಿನಲ್ಲಿದ್ದರು ಮತ್ತು ಸೆರೆಮನೆಗಳಲ್ಲಿ ಜನದಟ್ಟಣೆ ಪ್ರಮಾಣ ಶೇ 18.5 ರಷ್ಟಿತ್ತು.

18.8 ಲಕ್ಷ ಕೈದಿಗಳನ್ನು ಕಾರಾಗೃಹಕ್ಕೆ ದಾಖಲಿಸಲಾಗಿದ್ದು, ಅದರಲ್ಲಿ ಶೇ 4.3 ರಷ್ಟು ಮಂದಿ ಮಹಿಳೆಯರು ಇದ್ದಾರೆ.

19,913 ಮಹಿಳಾ ಕೈದಿಗಳಿದ್ದು, ಅವರಲ್ಲಿ 1,543 ಮಹಿಳೆಯರು 1,779 ಮಕ್ಕಳೊಂದಿಗೆ ಇದ್ದಾರೆ.

ಭಾರತದಲ್ಲಿ 69.05 ರಷ್ಟು ಕೈದಿಗಳ ವಿಚಾರಣೆ ಬಾಕಿ ಇತ್ತು, ಇದರಲ್ಲಿ ನಾಲ್ಕನೇ ಒಂದು ಭಾಗದಷ್ಟು ಜನರು ಈಗಾಗಲೇ ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿದ್ದಾರೆ.

116 ಕೈದಿಗಳು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದರೆ, 7,394 ಕೈದಿಗಳು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ.

5,608 ವಿದೇಶಿ ಪ್ರಜೆಗಳು ಕೈದಿಗಳಾಗಿದ್ದು, ಅವರಲ್ಲಿ 832 ಮಹಿಳೆಯರು ಇದ್ದಾರೆ.

ಜೈಲಿನಲ್ಲಿ ಒಟ್ಟು 1,775 ಕೈದಿಗಳು ಸಾವಿಗೆ ತುತ್ತಾಗಿದ್ದು, ಅದರಲ್ಲಿ 1,544 ಸಾವುಗಳು "ಅನಾರೋಗ್ಯ" ಮತ್ತು "ವೃದ್ಧಾಪ್ಯದ" ಕಾರಣದಿಂದಾಗಿವೆ.

ಶೇ. 30 ಕ್ಕೂ ಹೆಚ್ಚು ಸಿಬ್ಬಂದಿ ಹುದ್ದೆಗಳು ಖಾಲಿ ಇವೆ. ಒಟ್ಟು ಜೈಲು ಸಿಬ್ಬಂದಿಯಲ್ಲಿ ಕೇವಲ 12.8 ರಷ್ಟು ಮಾತ್ರ ಮಹಿಳಾ ನೌಕರರು ಇದ್ದಾರೆ.

ಪ್ರತಿ ಬಂದೀಖಾನೆ ಸಿಬ್ಬಂದಿ ನಿಗಾ ವಹಿಸಬೇಕಾಗಿರುವ ಕೈದಿಗಳ ಅನುಪಾತ 7: 1 ರಷ್ಟು, ಪ್ರತಿ ಕರೆಕ್ಷನಲ್ ಸಿಬ್ಬಂದಿಗೆ ಇರುವ ಕೈದಿಗಳ ಅನುಪಾತ 628: 1 ರಷ್ಟು ಮತ್ತು ಪ್ರತಿ ವೈದ್ಯಕೀಯ ಸಿಬ್ಬಂದಿ 243 ಕೈದಿಗಳ ಆರೋಗ್ಯ ಮೇಲ್ವಿಚಾರಣೆ ನೋಡಿಕೊಳ್ಳಬೇಕು. ( 243: 1 ).

ಕಾರಾಗೃಹಗಳು ಪ್ರತಿ ಕೈದಿಗೆ 118 ರೂ ಭರಿಸಬೇಕು.

ಸಿಎಚ್‌ಆರ್‌ಐ ವರದಿ ಪ್ರಕಾರ, 2019 ರಲ್ಲಿ ಒಟ್ಟಾರೆ ಜೈಲುವಾಸದ ಪ್ರಮಾಣವು ರಾಷ್ಟ್ರೀಯ ಮಟ್ಟದಲ್ಲಿ ಶೇ 118.5 ರಷ್ಟಿದ್ದು, ಕಳೆದ ಐದು ವರ್ಷಗಳಲ್ಲಿ ಇದು ಅತ್ಯಧಿಕ ಪ್ರಮಾಣದಲ್ಲಿ ಇದೆ. ಜಿಲ್ಲಾ ಕಾರಾಗೃಹಗಳು ಮತ್ತು ಕೇಂದ್ರ ಕಾರಾಗೃಹಗಳ ಜೈಲು ಬಳಕೆ ದರ ಕ್ರಮವಾಗಿ ಶೇ 129.7 ಮತ್ತು ಶೇ 123.9 ರಷ್ಟು ಇತ್ತು.ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ದೆಹಲಿಯಲ್ಲಿ ಅತಿ ಹೆಚ್ಚು ಜೈಲು ದಟ್ಟಣೆ ಇದೆ, ಇಲ್ಲಿ ಶೇ 174.9 ರಷ್ಟು ಜೈಲುವಾಸಿಗಳಿದ್ದಾರೆ.

ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜೈಲು ಬಳಕೆ ದರ ಶೇ 150 ಕ್ಕಿಂತ ಹೆಚ್ಚಿದೆ: ದೆಹಲಿ (ಶೇ 174.9), ಉತ್ತರ ಪ್ರದೇಶ (ಶೇ 167.9), ಉತ್ತರಾಖಂಡ (ಶೇ 159), ಮೇಘಾಲಯ (ಶೇ 157.4), ಮಧ್ಯಪ್ರದೇಶ (ಶೇ 155.3), ಸಿಕ್ಕಿಂ (ಶೇ 153.8), ಮಹಾರಾಷ್ಟ್ರ (ಶೇ 152.7) ಮತ್ತು ಛತ್ತೀಸ್ ಗಡ (ಶೇ 150.1) .

ಕಳೆದ ಐದು ವರ್ಷಗಳಲ್ಲಿ, ಒಟ್ಟು ಜೈಲುವಾಸಿಗಳ ಪ್ರಮಾಣ ಶೇ 14.1 ರಷ್ಟು ಹೆಚ್ಚಾಗಿದೆ ಮತ್ತು ಜೈಲು ಭರ್ತಿಯ ಸಾಮರ್ಥ್ಯದಲ್ಲಿ ಶೇ 10.1 ರಷ್ಟು ವೃದ್ಧಿಯಾಗಿದೆ. ಈ ವರ್ಷಗಳಲ್ಲಿ, ಕೈದಿಗಳ ಜನಸಂಖ್ಯೆಯು ಶೇ 17.2 ರಷ್ಟು ಹೆಚ್ಚಾಗಿದೆ.

2019 ರ ಕೊನೆಯಲ್ಲಿ, ದೇಶದ 1350 ಕಾರಾಗೃಹಗಳಲ್ಲಿ 4,78,600 ಕೈದಿಗಳಿದ್ದು, ಅವರಲ್ಲಿ 3,30,487 ಮಂದಿ ವಿಚಾರಣಾಧೀನ ಕೈದಿಗಳಾಗಿದ್ದಾರೆ.2015 ರಿಂದ 2018 ರವರೆಗೆ ವಿಶ್ವಮಟ್ಟದಲ್ಲಿ ಸೆರೆವಾಸಿಗಳ ಸಂಖ್ಯೆ ಶೇ 3.7 ರಷ್ಟು ಹೆಚ್ಚಳವಾಗಿದೆ ( 2019 ರ ವಿಶ್ವದ ಜೈಲು ಜನಸಂಖ್ಯೆಯ ಮಾಹಿತಿ ಲಭ್ಯವಿಲ್ಲ ) " ಎಂದು ಸಿಹೆಚ್ಆರ್​ಐ ವರದಿ ತಿಳಿಸಿದೆ. 2015 ರಿಂದ 2018 ರವರೆಗೆ, ಜಾಗತಿಕವಾಗಿ ಕೈದಿಗಳ ಸಂಖ್ಯೆ 3,86,485ರಷ್ಟಿದ್ದು, ಈ ಪೈಕಿ 46,461 (ಶೇ 12) ಮಂದಿ ಭಾರತಕ್ಕೆ ಸಂಬಂಧಿಸಿದವರಾಗಿದ್ದಾರೆ, ಸೆರೆವಾಸದ ದರಕ್ಕೆ ಸಂಬಂಧಿಸಿದಂತೆ, ಒಂದು ಲಕ್ಷ ಜನಸಂಖ್ಯೆಗೆ 35 ಕೈದಿಗಳಿದ್ದು ಭಾರತವು 223 ದೇಶಗಳಲ್ಲಿ 211ನೇ ಸ್ಥಾನದಲ್ಲಿದೆ. ಜಾಗತಿಕ ಕೈದಿಗಳ ಸಂಖ್ಯೆಯಲ್ಲಿ ಭಾರತ ಪ್ರಮುಖ ಪಾಲನ್ನು ಹೊಂದಿದ್ದರೂ ಕೂಡ ಅದರ ಸೆರೆವಾಸದ ಪ್ರಮಾಣ ವಿಶ್ವದಲ್ಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇದೆ ಎಂದು ಇದು ತೋರಿಸುತ್ತದೆ.

ವರದಿಯ ಪ್ರಕಾರ, ಕಳೆದ ಐದು ವರ್ಷಗಳಲ್ಲಿ, ಆಂಧ್ರಪ್ರದೇಶ ಮತ್ತು ನಾಗಾಲ್ಯಾಂಡ್​ನಲ್ಲಿ ಮಾತ್ರ ಸೆರೆವಾಸದ ಪ್ರಮಾಣ ಕಡಿಮೆ ಆಗಿದೆ. 2015 ರಿಂದ 2019 ರವರೆಗೆ ಹದಿಮೂರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೈದಿಗಳ ಸಂಖ್ಯೆ ಶೇ. 20 ಕ್ಕಿಂತ ಹೆಚ್ಚಿದೆ. ಸಿಕ್ಕಿಂ (59.4 ಶೇ) ಮತ್ತು ಜಮ್ಮು ಕಾಶ್ಮೀರದಲ್ಲಿ (ಶೇ 57.6) ಜೈಲು ಜನಸಂಖ್ಯೆಯಲ್ಲಿ ಅತಿ ಹೆಚ್ಚಳ ಕಂಡುಬಂದಿದೆ.

ಸಿಎಚ್‌ಆರ್‌ಐ ವಿಶ್ಲೇಷಣೆಯ ಪ್ರಕಾರ ಸೆರೆವಾಸ ಅನುಭವಿಸುತ್ತಿರುವ ಒಟ್ಟು ಕೈದಿಗಳಲ್ಲಿ ಹಿಂದೂಗಳ ಪ್ರಮಾಣ ಶೇ 68.3 ರಷ್ಟಿದೆ. ಸಾಮಾನ್ಯ ಜನಸಂಖ್ಯೆಗೆ ಹೋಲಿಸಿದರೆ ಈ ಸಮುದಾಯದ ಪಾಲು 79.8 ರಷ್ಟಿದೆ, ಮುಸ್ಲಿಮರ ಪ್ರಮಾಣ ಶೇ.18.3ರಷ್ಟಿದ್ದು ಸಾಮಾನ್ಯ ಜನಸಂಖ್ಯೆಯಲ್ಲಿ ಶೇ.14.2 ರಷ್ಟು ಕಂಡುಬಂದಿದ್ದಾರೆ, ಸೆರೆವಾಸಿಗಳಾಗಿರುವ ಕ್ರಿಶ್ಚಿಯನ್ನರ ಪ್ರಮಾಣ ಶೇ 2.9 ರಷ್ಟಿದೆ. ಸಾಮಾನ್ಯ ಜನಸಂಖ್ಯೆಯಲ್ಲಿ ಇವರ ಪಾಲು ಶೇ. 2.3ರಷ್ಟು, ಮತ್ತು ಸಿಖ್ಖರ ಪ್ರಮಾಣ ಶೇ. 3.8ರಷ್ಟು ಇದ್ದು ಅದರಲ್ಲಿ ಸಾಮಾನ್ಯ ಜನಸಂಖ್ಯೆಗೆ ಹೋಲಿಸಿದರೆ ಶೇ.1.7 ರಷ್ಟು ಮಂದಿ ಇದ್ದಾರೆ.

‘ಇತರ ’ ಧರ್ಮಗಳಿಗೆ ಸೇರಿದ ವ್ಯಕ್ತಿಗಳು ಒಟ್ಟು ಜೈಲು ಜನಸಂಖ್ಯೆಯ ಶೇ 1 ರಷ್ಟು ಇದ್ದಾರೆ.

"ಕಳೆದ ಐದು ವರ್ಷಗಳಲ್ಲಿ, ಮುಸ್ಲಿಂ ಸಮುದಾಯಕ್ಕೆ ಸೇರಿದ ಕೈದಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ. ಅವರ ಪಾಲು ಶೇ. 12.1ರಷ್ಟು ಹೆಚ್ಚಳವಾಗಿದೆ" ಎಂದು ಸಿಎಚ್‌ಆರ್‌ಐ ವರದಿ ತಿಳಿಸಿದೆ.

"ಜೈಲು ಜನಸಂಖ್ಯೆಯಲ್ಲಿ ಹಿಂದೂಗಳ ಪಾಲು ಶೇ 12.7 ರಷ್ಟು ಕಡಿಮೆಯಾಗಿದೆ. ಒಂದು ನಿರ್ದಿಷ್ಟ ಧರ್ಮಕ್ಕೆ ಸಂಬಂಧಿಸಿ ಹೇಳುವುದಾದರೆ ವಿಚಾರಣಾಧೀನ ಕೈದಿಗಳ ಪೈಕಿ ಮುಸ್ಲಿಮರ ಸಂಖ್ಯೆ ಶೇ. 70.8 ರಷ್ಟಿದೆ.

ಜಾತಿಯ ವಿಷಯಕ್ಕೆ ಬಂದರೆ, ಶೇ 21.2 ಕೈದಿಗಳು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು ಒಟ್ಟು ಜನಸಂಖ್ಯೆಯಲ್ಲಿ ಇವರ ಪ್ರಮಾಣ ಶೇ 20ರಷ್ಟು ಇದೆ. ಶೇ 11.4 ಕೈದಿಗಳು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದು ಸಾಮಾನ್ಯ ಜನಸಂಖ್ಯೆಯಲ್ಲಿ ಇವರ ಪಾಲು ಶೇ 9 ರಷ್ಟಿದೆ.

ಈಟಿವಿ ಭಾರತ್ ಜೊತೆ ಮಾತನಾಡಿದ ಸಿಎಚ್‌ಆರ್‌ಐ ನಿರ್ದೇಶಕ ಸಂಜಯ್ ಹಜಾರಿಕ, “ ಭಾರತದಲ್ಲಿ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ನಿರಂತರ ಅಸಮತೋಲನ ಇರುವುದನ್ನು ವಿಶ್ಲೇಷಣೆ ತೋರಿಸುತ್ತದೆ. ಸಾಕಷ್ಟು ಪ್ರಕರಣಗಳು ಪೂರ್ಣಗೊಂಡಿಲ್ಲ ಎಂದು ಇದು ತೋರಿಸುತ್ತದೆ. ವಿಚಾರಣಾ ನ್ಯಾಯಾಲಯಗಳ ಮೇಲಿನ ಹೊರೆ ಇಡೀ ವ್ಯವಸ್ಥೆ ಮೇಲೆ ಪರಿಣಾಮ ಬೀರಿದ್ದು ಪ್ರಕರಣಗಳ ಭಾರದಲ್ಲಿ ತಿಣುಕುವಂತೆ ಆಗಿದೆ ಎನ್ನುತ್ತಾರೆ.

ಆದರೆ, ವರದಿಯನ್ನು ಸಿದ್ಧಪಡಿಸಿದ ಸಿಎಚ್‌ಆರ್‌ಐ ಯೋಜನಾ ಅಧಿಕಾರಿ ಸಿದ್ದಾರ್ಥ್ ಲಾಂಬಾ, ಗುರುತು ಮಾಡಲಾದ 10 ಸಂಗತಿಗಳಿಗೆ ಸಂಬಂಧಿಸಿದಂತೆ ಕೆಲವು ರಾಜ್ಯಗಳಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಹೇಳಿದ್ದಾರೆ

"ರಾಷ್ಟ್ರಮಟ್ಟದಲ್ಲಿ, 10 ಜನರಲ್ಲಿ ಏಳು ಮಂದಿಗೆ ಇನ್ನೂ ಅಪರಾಧ ನಿಗದಿ ಬಾಕಿ ಇದೆ. ಆದರೆ ಕೆಲವು ರಾಜ್ಯಗಳಲ್ಲಿ ಈ ಪ್ರಮಾಣ ಏಳು ಜನರಿಗಿಂತಲೂ ಕಡಿಮೆ ಇದೆ " ಎಂದು ಅಭಿಪ್ರಾಯಪಡುತ್ತಾರೆ ಲಾಂಬಾ.

“ಉದಾಹರಣೆಗೆ, ಅರುಣಾಚಲ ಪ್ರದೇಶದಲ್ಲಿ 10 ಕೈದಿಗಳಲ್ಲಿ ನಾಲ್ವರು ಶಿಕ್ಷೆಗೆ ಒಳಗಾಗುವುದಿಲ್ಲ. ತ್ರಿಪುರ, ಮಧ್ಯಪ್ರದೇಶ ಮತ್ತು ಛತ್ತೀಸ್​ಗಡದಲ್ಲಿ 10 ಕೈದಿಗಳ ಪೈಕಿ ಐವರು ಅಪರಾಧಿಗಳಲ್ಲ ” ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.