ETV Bharat / bharat

ಮನೆಯಲ್ಲಿ ಪಟಾಕಿ ಸ್ಫೋಟ: 6 ಮಂದಿ ದುರ್ಮರಣ - ಮನೆ ಸ್ಫೋಟ ಪ್ರಕರಣ

ಮನೆಯಲ್ಲಿ ಭಾರೀ ಸ್ಫೋಟ ಸಂಭವಿಸಿ 6 ಮಂದಿ ಮೃತಪಟ್ಟ ಘಟನೆ ಉತ್ತರ ಪ್ರದೇಶದಲ್ಲಿ ಸಂಭವಿಸಿದೆ.

ಪಟಾಕಿ ಸ್ಫೋಟ
author img

By

Published : Sep 21, 2019, 5:41 PM IST

Updated : Sep 21, 2019, 6:10 PM IST

ಎತಾಹ್​ (ಉತ್ತರ ಪ್ರದೇಶ): ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಪಟಾಕಿ ಸ್ಫೋಟಗೊಂಡು 6 ಮಂದಿ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಎತಾಹ್​ ಜಿಲ್ಲೆಯ ಮಿರಹಚಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಿರಹಚಿ ಪಟ್ಟಣದಲ್ಲಿ ನೆಲೆಸಿದ್ದ ಮುನ್ನಿ ದೇವಿ ಎಂಬ ಮಹಿಳೆಯೋರ್ವರ ಮನೆಯಲ್ಲಿ ದುರ್ಘಟನೆ ಸಂಭವಿಸಿದೆ. ಪಟಾಕಿ ಸ್ಫೋಟಗೊಂಡು ಮನೆಗೆ ಬೆಂಕಿ ಹೊತ್ತಿಕೊಂಡಿದ್ದು, 6 ಮಂದಿ ಸಾವನ್ನಪ್ಪಿದ್ದಲ್ಲದೆ ಇತರ 8 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮನೆಯಲ್ಲಿ ಸಂಗ್ರಹಿಸಿಡಲಾಗಿದ್ದ ಪಟಾಕಿ ಸ್ಫೋಟಗೊಂಡಿರುವುದೇ ದುರ್ಘಟನೆಗೆ ಕಾರಣ ಎನ್ನಲಾಗಿದೆ.

ಮನೆಯಲ್ಲಿ ಪಟಾಕಿ ಸ್ಫೋಟ

ಸ್ಫೋಟದ ತೀವ್ರತೆಗೆ ಮನೆಯ ಗೋಡೆಗಳು ಸಂಪೂರ್ಣ ಛಿದ್ರಗೊಂಡು, ಕುಸಿತಗೊಂಡಿದೆ. ಅಲ್ಲದೆ ಮೃತಪಟ್ಟವರು ಗುರುತು ಸಿಗದ ಸ್ಥಿತಿಯಲ್ಲಿ ಸುಟ್ಟುಕರಕಲಾಗಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಹಿರಿಯ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

6 dead, several injured after blast in house storing illegal cracker

Conclusion:
Last Updated : Sep 21, 2019, 6:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.