ಭೋಪಾಲ್ (ಮಧ್ಯಪ್ರದೇಶ): ಭೋಪಾಲ್‌ನ ಸುಂದರ್ ನಗರ ಪ್ರದೇಶದ ಡೈರಿ ಫಾರಂನಲ್ಲಿ ಹಸುವಿನ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 55 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 4 ರಂದು ಈ ಘಟನೆ ನಡೆದಿದ್ದು, ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಶೋಕ್ ಗಾರ್ಡನ್ ಪೊಲೀಸ್ ಠಾಣೆ ಉಸ್ತುವಾರಿ ಅಲೋಕ್ ಶ್ರೀವಾಸ್ತವ ತಿಳಿಸಿದ್ದಾರೆ.
"ಜುಲೈ 4 ರಂದು, 55 ರ ಸಬೀರ್ ಅಲಿ ಎಂಬ ವ್ಯಕ್ತಿ ಸುಂದರ್ ನಗರದ ಡೈರಿ ಫಾರ್ಮ್ನಲ್ಲಿ ಈ ಕೃತ್ಯ ಎಸಗಿದ್ದ. ಆರೋಪಿಯನ್ನ ನೋಡಿದ್ದ ಡೈರಿ ಮಾಲೀಕ ರಾಮ್ ಯಾದವ್ ಅವನನ್ನು ಹಿಡಿದುಕೊಂಡಿದ್ದ. ಆದರೆ, ನಂತರ ಆರೋಪಿ ಮಾಲೀಕನಿಗೆ ಕಾಡಿ ಬೇಡಿ ಅಲ್ಲಿಂದ ಬಿಡಿಸಿಕೊಂಡು ಹೋಗಿದ್ದ.
ಅಲಿ ತಪ್ಪಾಗಿ ಡೈರಿಗೆ ಪ್ರವೇಶಿಸಿದ್ದಾನೆ ಎಂದು ತಿಳಿದು ಮಾಲೀಕ ಅವನನ್ನ ಕ್ಷಮಿಸಿ ಬಿಟ್ಟು ಕಳುಹಿಸಿದ್ದ. ಆದರೆ, ಆರೋಪಿ ಮೇಲೆ ಮಾಲೀಕ ರಾಮ್ ಯಾದವ್ ಮೇಲೆ ಅನುಮಾನ ಕಾಡತೊಡಗಿತ್ತು. ಹೀಗಾಗಿ "ಮರುದಿನ, ಯಾದವ್ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಲಿ ಹಸುವಿನೊಂದಿಗೆ ಅಸ್ವಾಭಾವಿಕ ಕೃತ್ಯವನ್ನು (ಲೈಂಗಿಕ) ಮಾಡುತ್ತಿರುವುದು ಕಂಡುಬಂದಿತ್ತು.
ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಯಾದವ್, ಸಬೀರ್ ಅಲಿ ವಿರುದ್ಧ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡಿರುವ ಪೊಲೀಸರು ಅವರನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.