ETV Bharat / bharat

ರಾಂಚಿ ಪೊಲೀಸರ ದಾಳಿ; ನಕ್ಸಲ್​ ಚಟುವಟಿಕೆಯಲ್ಲಿ ತೊಡಗಿದ್ದ ಐವರ ಬಂಧನ

ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಐವರು ನಕ್ಸಲರನ್ನ ರಾಂಚಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರೆಲ್ಲರೂ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.

5 naxals of PLFI held in Ranchi
ನಕ್ಸಲರ್​ಗಳ ಬಂಧನ (ಸಂಗ್ರಹ ಚಿತ್ರ)
author img

By

Published : Oct 9, 2020, 4:18 PM IST

ರಾಂಚಿ: ನಗರದ ವಿವಿಧೆಡೆ ದಾಳಿ ನಡೆಸಿದ ಇಲ್ಲಿನ ಪೊಲೀಸರು, ಪೀಪಲ್ಸ್​ ಲಿಬರೇಶನ್​ ಫ್ರಂಟ್​ ಆಫ್​ ಇಂಡಿಯಾ (ಪಿಎಲ್ಎಫ್​ಐ) ಗೆ ಸೇರಿದ ಐದು ನಕ್ಸಲರ್​ರನ್ನ ಬಂಧಿಸಿದ್ದಾರೆ. ಬಂಧಿತರೆಲ್ಲರೂ ವಿದ್ಯಾರ್ಥಿಗಳಾಗಿದ್ದು, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.

ವಿಜಯ್ ಮುಂಡಾ, ವಿಶಾಲ್ ಶರ್ಮಾ, ವಿಶಾಲ್ ಕುಮಾರ್ ಸ್ವಾನ್ಸಿ, ಆಕಾಶ್ ಸಿಂಗ್ ಮತ್ತು ಸುಶೀಲ್ ವರ್ಮಾ ಬಂಧಿತ ನಕ್ಸಲರಾಗಿದ್ದಾರೆ. ಬಂಧಿತರಿಂದ ದೇಶಿ ನಿರ್ಮಿತ ಎರಡು ಲೋಡೆಡ್​ ಪಿಸ್ತೂಲ್​, ಅರ್ಧ ಡಜನ್​ ಜೀವಂತ ಸಿಡಿಮದ್ದುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರತ್ಯೇಕ ಸ್ಥಳಗಳಲ್ಲಿ ಬಾಡಿಗೆ ಮನೆ ಪಡೆದು ಅಲ್ಲಲ್ಲಿ ಅಡಗಿರುವ ಮಾಹಿತಿ ತಿಳಿದು ಬಂದಿತ್ತು. ಈ ಖಚಿತ ಸುಳಿವಿನ ಹಿನ್ನೆಲೆ ದಾಳಿ ಮಾಡಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಂಧಿತ ನಕ್ಸಲರ್​ಗಳ ಮೇಲೆ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.