ಚೆನ್ನೈ(ತಮಿಳುನಾಡು) : ಪೆರಂಬೂರ್‌ನ ರಾಘವನ್ ರಸ್ತೆಯಲ್ಲಿ 5 ತಿಂಗಳ ಭ್ರೂಣವೊಂದು ಕಸದ ತೊಟ್ಟಿಯಲ್ಲಿ ಪತ್ತೆಯಾಗಿದೆ. ಕಸದಲ್ಲಿದ್ದ ಭ್ರೂಣವನ್ನು ನಾಯಿಗಳು ರಸ್ತೆಗೆ ಎಳೆದಿರುವುದು ಸಾರ್ವಜನಿಕರ ಕಣ್ಣಿಗೆ ಬಿದ್ದಿದೆ. ತಕ್ಷಣ ಅವರು ಸ್ಥಳೀಯ ಪೊಲೀಸರಿಗೆ ಮಾಹಿತಿ ತಲುಪಿಸಿದ್ದಾರೆ.
ಭ್ರೂಣವನ್ನು ಪೊಲೀಸರು ಆಸ್ಪತ್ರೆಗೆ ಕಳುಹಿಸಿದ್ದು, ಅದು ಗಂಡು ಮಗುವಿನ ಭ್ರೂಣವೆಂದು ತಿಳಿದುಬಂದಿದೆ.
ಪ್ಲಾಸ್ಟಿಕ್ ಕವರ್ನಲ್ಲಿ ಸುತ್ತಿ ಭ್ರೂಣವನ್ನು ಕಸದ ತೊಟ್ಟಿಗೆ ಎಸೆಯಲಾಗಿತ್ತು.