ETV Bharat / bharat

ಮದುವೆ ಮೆರವಣಿಗೆ ವೇಳೆ ಪಟಾಕಿ ಅವಘಡ: ಐವರು ಮಕ್ಕಳಿಗೆ ಗಂಭೀರ ಗಾಯ

author img

By

Published : Nov 2, 2020, 10:51 AM IST

ಮದುವೆ ಮೆರವಣಿಗೆ ವೇಳೆ ಪಟಾಕಿ ತುಂಬಿದ್ದ ಚೀಲಕ್ಕೆ ಬೆಂಕಿ ತಗುಲಿದ ಪರಿಣಾಮ ಸಂಭವಿಸಿದ ಸ್ಫೋಟದಿಂದಾಗಿ ಐವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.

firecracker blast in wedding procession
ಮದುವೆ ಮೆರವಣಿಗೆ ವೇಳೆ ಪಟಾಕಿ ಅವಘಡ

ಮುಜಫರ್​ನಗರ (ಉತ್ತರ ಪ್ರದೇಶ): ಮದುವೆ ಮೆರವಣಿಗೆ ವೇಳೆ ಪಟಾಕಿ ಸ್ಫೋಟದ ವೇಳೆ ಐವರು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಮುಜಫರ್​ನಗರದಲ್ಲಿ ನಡೆದಿದೆ.

ಗಾಯಾಳುಗಳನ್ನು ಸವನ್, ಉಮ್ಮದ್, ರಿಹಾನ್, ಅಂಕಿತ್, ಮತ್ತು ಅಮೀರ್ ಎಂದು ಗುರುತಿಸಲಾಗಿದೆ. ಶಹಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಪಾಲ್ಡಾ ಗ್ರಾಮದಲ್ಲಿ ವರನ ಕಡೆಯವರಿಂದ ನಡೆಯುತ್ತಿದ್ದ ಮೆರವಣಿಗೆ ವೇಳೆ ಈ ಘಟನೆ ನಡೆದಿದೆ.

ಪಟಾಕಿ ತುಂಬಿದ್ದ ಚೀಲಕ್ಕೆ ಬೆಂಕಿ ತಗುಲಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ವೃತ್ತ ಅಧಿಕಾರಿ ವಿರ್ಜಾ ಶಂಕರ್ ತ್ರಿಪಾಠಿ ತಿಳಿಸಿದ್ದಾರೆ. ಮಕ್ಕಳು ಮದುವೆ ಮೆರವಣಿಗೆಯನ್ನು ನೋಡುತ್ತಾ ಹತ್ತಿರದಲ್ಲೇ ನಿಂತಿದ್ದರು. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಮಧ್ಯೆ, ಮೀರತ್ ಪೊಲೀಸರು ಭಾನುವಾರ ಮನೆಯೊಂದರ ಮೇಲೆ ದಾಳಿ ನಡೆಸಿ ಅಕ್ರಮ ಪಟಾಕಿ ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ಮೂರ್ನಾಲ್ಕು ಮನೆಗಳಲ್ಲಿ ಪಟಾಕಿಗಳನ್ನು ತಯಾರಿಸಲಾಗುತ್ತಿದೆ ಎಂಬ ಮಾಹಿತಿ ಸಿಕ್ಕ ನಂತರ ದಾಳಿ ನಡೆಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.