ಮುರ್ಷಿದಾಬಾದ್ (ಪಶ್ಚಿಮ ಬಂಗಾಳ): ಆಟವಾಡುತ್ತ ನೀರಿನ ಹೊಂಡದಲ್ಲಿ ಬಿದ್ದು ಐವರು ಮಕ್ಕಳು ಸಾವಿಗೀಡಾದ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನಲ್ಲಿ ಸಂಭವಿಸಿದೆ.
ಮುರ್ಷಿದಾಬಾದ್‌ನ ರಣಿತಾಲಾ ಎಂಬಲ್ಲಿ ದುರಂತ ಸಂಭವಿಸಿದ್ದು, ಸಕಿಲ್ ಶೇಖ್ (5), ಮಿಂಟು ಶೇಖ್ (8), ಇಬ್ರಾಹಿಂ ಶೇಖ್ (6), ಯೂನಿಸ್ ಶೇಖ್ (8) ಮತ್ತು ಅಜ್ಮಲ್ ಶೇಖ್ (6) ಎಂಬುವರೆ ಮೃತ ಮಕ್ಕಳಾಗಿದ್ದಾರೆ.
ಇಟ್ಟಿಗೆ ಕಾರ್ಖಾನೆಯೊಂದರ ಸಮೀಪದ ನೀರಿನ ಹೊಂಡದ ಪಕ್ಕದಲ್ಲಿ ಆಟವಾಡುತ್ತಿದ್ದರು. ಕೆಲ ಸಮಯದ ಬಳಿಕ ಸ್ಥಳದಲ್ಲಿದ್ದ ಮಕ್ಕಳು ಕಾಣೆಯಾಗಿದ್ದು, ಮಕ್ಕಳ ಮೃತದೇಹಗಳು ಹೊಂಡದ ನೀರಿನಲ್ಲಿ ತೇಲುತ್ತಿದ್ದವು. ಇಟ್ಟಿಗೆ ಕೆಲಸಗಾರರು ಕಂದಮ್ಮಗಳ ಮೃತದೇಹಗಳನ್ನು ಕಂಡಿದ್ದಾರೆ. ಮಕ್ಕಳು ಆಟವಾಡುತ್ತ ಆಕಸ್ಮಿಕವಾಗಿ ನೀರಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.