ETV Bharat / bharat

ಜಾರ್ಖಂಡ್​ನಲ್ಲಿ ನಾಲ್ವರು ನಕ್ಸಲರ ಬಂಧನ: ಶಸ್ತ್ರಾಸ್ತ್ರಗಳು ವಶಕ್ಕೆ - ಜಾರ್ಖಂಡ್​ನಲ್ಲಿ ನಕ್ಸಲರ ಬಂಧನ ಲೇಟೆಸ್ಟ್​ ಸುದ್ದಿ

ಜಾರ್ಖಂಡ್​ನ ಬಾನೋ ಪೊಲೀಸ್​ ಠಾಣಾ ವ್ಯಾಪ್ತಿಯ ಕನರೋವನ್​ ಅರಣ್ಯ ಪ್ರದೇಶದಲ್ಲಿ ನಾಲ್ವರು ನಕ್ಸಲರನ್ನು ಬಂಧಿಸಲಾಗಿದೆ. ಪೊಲೀಸರು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ನಾಲ್ವರು ನಕ್ಸಲರ ಹೆಡೆಮುರಿ ಕಟ್ಟಿದ್ದಾರೆ.

Naxals arrested in Jharkhand
ಜಾರ್ಖಂಡ್​ನಲ್ಲಿ ನಾಲ್ವರು ನಕ್ಸಲರ ಬಂಧನ
author img

By

Published : Nov 2, 2020, 12:02 PM IST

ಸಿಮ್ಡೆಗಾ/ಜಾರ್ಖಂಡ್​: ನಿಷೇಧಿಸಲ್ಪಟ್ಟಿರುವ ಪೀಪಲ್​ ಲಿಬರೇಶನ್​ ಫ್ರಂಟ್​ ಆಫ್​ ಇಂಡಿಯಾ (PLFI) ಸಂಘಟನೆಗೆ ಸೇರಿದ ನಾಲ್ವರು ನಕ್ಸಲರನ್ನು ಜಾರ್ಖಂಡ್​ನ ಸಿಮ್ಡೆಗಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಬಂಧಿಸಲಾಗಿದೆ.

ಬಂಧಿತರಿಂದ ದೇಶಿ ನಿರ್ಮಿತ 8 ರೈಫಲ್​ಗಳು ಹಾಗೂ ಕಾಟ್ರಿಡ್ಜ್​ಗಳು ಸೇರಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಕ್ಸಲರ ಸುಳಿವು ಸಿಕ್ಕ ಹಿನ್ನೆಲೆ ಪೊಲೀಸ್ ಸಿಬ್ಬಂದಿ ಭಾನುವಾರ ಬಾನೊ ಪೊಲೀಸ್ ಠಾಣೆ ಪ್ರದೇಶದ ಕನರೋವನ್ ಅರಣ್ಯದಲ್ಲಿ ಶೋಧ ಕಾರ್ಯಾಚರಣೆ ನಡೆಸಿ 4 ಜನ ನಕ್ಸಲರನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶಮ್ಸ್ ತಬ್ರೆಜ್ ಮಾಹಿತಿ ನೀಡಿದ್ದಾರೆ.

ನಕ್ಸಲರು ಪೊಲೀಸರನ್ನು ಕಂಡ ಕೂಡಲೇ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಅವರನ್ನು ಬೆನ್ನತ್ತಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.