ನಾರಾಯಣಪೇಟೆ : ಕೊಳದಲ್ಲಿ ಈಜಲು ಹೋಗಿ ಒಂದೇ ಕುಟುಂಬದ ನಾಲ್ವರು ಮಕ್ಕಳು ನೀರಿನಲ್ಲಿ ಮುಳುಗಿ ಸಾವಿಗೀಡಾದ ಘಟನೆ ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯಲ್ಲಿ ಸಂಭವಿಸಿದೆ.
ಗಣೇಶ್, ಅರ್ಜುನ್, ಅರುಣ್ ಮತ್ತು ಪ್ರವೀಣ್ ಎಂಬ ಮಕ್ಕಳು ಮೃತಪಟ್ಟವರು. ಇವರೆಲ್ಲ 7ರಿಂದ 11 ವರ್ಷದೊಳಗಿನವರಾಗಿದ್ದಾರೆ. ನಾರಾಯಣಪೇಟೆ ಜಿಲ್ಲೆಯ ದಾಮರಗಿದ್ದ ವಲಯದ ನಂದಾಯನಾಯಕ ತಾಂಡಾದಲ್ಲಿ ಈ ದುರಂತ ನಡೆದಿದೆ.
ಕೊಳದಲ್ಲಿ ಮಕ್ಕಳ ಮೃತದೇಹ ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.