ETV Bharat / bharat

ಹೋಳಿ ಆಡಿ ನದಿಗೆ ಸ್ನಾನಕ್ಕೆಂದು ತೆರಳಿದ್ದ ನಾಲ್ವರು ಮಕ್ಕಳು ನೀರುಪಾಲು - ನಾಲ್ವರು ಮಕ್ಕಳು ಸಾವು

ಹೋಳಿ ಹಬ್ಬದ ಬಣ್ಣದಾಟದಲ್ಲಿ ಭಾಗಿಯಾಗಿ ಸ್ನಾನ ಮಾಡಲು ತೆರಳಿದ್ದ ನಾಲ್ವರು ಮಕ್ಕಳು ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

4 children drown in pond after playing with colours

author img

By

Published : Mar 10, 2020, 1:29 PM IST

ಕೃಷ್ಣನಗರ(ಪಶ್ಚಿಮ ಬಂಗಾಳ): ಹೋಳಿ ಹಬ್ಬದ ಸಂಭ್ರಮದಲ್ಲಿ ಬಣ್ಣದಾಟವಾಡಿ ನದಿಗೆ ಸ್ನಾನ ಮಾಡಲು ತೆರಳಿದ್ದ ನಾಲ್ವರು ಮಕ್ಕಳು ನೀರುಪಾಲಾಗಿರುವ ಘಟನೆ ಪಶ್ಚಿಮ ಬಂಗಾಳದ ಕೃಷ್ಣ ನಗರದಲ್ಲಿ ನಡೆದಿದೆ.

9ರಿಂದ 13 ವರ್ಷದೊಳಗಿನ ನಾಲ್ವರು ಮಕ್ಕಳು ಡೋಲ್​ ಜಾತ್ರೆಯಲ್ಲಿ ಭಾಗಿಯಾಗಿ ನಂತರ ಸ್ನಾನಕ್ಕಾಗಿ ನದಿಗೆ ತೆರಳಿದ್ದಾರೆ. ಈ ವೇಳೆ ಈಜಲು ಬಾರದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮಕ್ಕಳು ನೀರಿನಲ್ಲಿ ಮುಳುಗಿರುವ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಅವರನ್ನ ಹೊರ ತೆಗೆದು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಆದಾಗಲೇ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಸನ್ನಿ ಪ್ರಮಾನಿಕ್​, ಆತನ ಸಹೋದರಿ ಸ್ನೇಹಾ, ಸುಭ್ಜಿತ್​ ಹಲ್ದಾರ್​ ಹಾಗೂ ರಾಕಿ ಹಲ್ದಾರ್ ಮೃತಪಟ್ಟಿರುವ ಮಕ್ಕಳು​ ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.