1990ರ ದಶಕದ ಬಳಿಕ ಜಗತ್ತು ಗಮನಾರ್ಹ ಪ್ರಗತಿ ಸಾಧಿಸಿದೆ. ಆದರೆ, ಹೆಚ್‌ಐವಿ ಪ್ರಮುಖ ಜಾಗತಿಕ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಉಳಿದಿದೆ. ಇತರ ಅನೇಕ ಪ್ರಮುಖ ಆರೋಗ್ಯ ಸಮಸ್ಯೆಗಳಂತೆ, ಇದು ಕೂಡ ಕೋವಿಡ್ ಸಂದರ್ಭದಲ್ಲಿ ಹೆಚ್ಚುವರಿ ಸವಾಲುಗಳನ್ನು ಎದುರಿಸಿದೆ. ಹೆಚ್‌ಐವಿ ತಡೆಗಟ್ಟುವಿಕೆ, ಪರೀಕ್ಷೆ, ಚಿಕಿತ್ಸೆ ಮತ್ತು ಆರೈಕೆ ಎಲ್ಲವೂ ಹಿಂದುಳಿದ ದೇಶಗಳಲ್ಲಿ ಒಂದು ಸವಾಲಾಗಿದೆ. ಕೋವಿಡ್ ಕಾರಣದಿಂದಾಗಿ ಅಗತ್ಯವಾದ ಹೆಚ್‌ಐವಿ ಸೇವೆಗಳ ಸ್ಥಗಿತವು, ಜೀವಕ್ಕೆ ಅಪಾಯವನ್ನುಂಟು ಮಾಡುತ್ತಿದೆ.
ವಿಶ್ವ ಏಡ್ಸ್ ದಿನ ಎಂದರೇನು?
ಪ್ರತಿ ವರ್ಷ, ಡಿಸೆಂಬರ್ 1ರಂದು ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತಿದೆ. ಹೆಚ್‌ಐವಿ ಪೀಡಿತ ಜನರನ್ನು ಬೆಂಬಲಿಸುವ ಸಲುವಾಗಿ ಮತ್ತು ಏಡ್ಸ್ ಸಂಬಂಧಿತ ಕಾಯಿಲೆಗಳಿಂದ ಮರಣ ಹೊಂದಿದವರನ್ನು ಸ್ಮರಿಸುವ ಸಲುವಾಗಿ ವಿಶ್ವದಾದ್ಯಂದ ಜನರು ಒಂದುಗೂಡುತ್ತಾರೆ.
1988ರಲ್ಲಿ ಪ್ರಾರಂಭವಾದ ವಿಶ್ವ ಏಡ್ಸ್ ದಿನ, ಜಾಗತಿಕವಾಗಿ ಘೋಷಿಸಿದ ಮೊದಲ ಆರೋಗ್ಯ ಸಂಬಂಧಿ ದಿನವಾಗಿದೆ. ಪ್ರತಿ ವರ್ಷ ವಿಶ್ವಸಂಸ್ಥೆಯ ಏಜೆನ್ಸಿಗಳು, ಸರ್ಕಾರಗಳು ಮತ್ತು ನಾಗರಿಕರು ಒಟ್ಟಾಗಿ ಹೆಚ್‌ಐವಿಗೆ ಸಂಬಂಧಿಸಿದ ನಿರ್ದಿಷ್ಟ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಾರೆ.
ಪ್ರತಿ ವಿಶ್ವ ಏಡ್ಸ್ ದಿನವನ್ನೂ ಒಂದು ನಿರ್ದಿಷ್ಟ ಘೋಷವಾಕ್ಯದ ಮೂಲಕ ಆಚರಿಸಲಾಗುತ್ತದೆ. ಜಾಗತಿಕ ಒಗ್ಗಟ್ಟು, ಹಂಚಿಕೆಯ ಜವಾಬ್ದಾರಿ (ಗ್ಲೋಬಲ್ ಸೋಲಿಡಾರಿಟಿ, ಶೇರ್ಡ್ ರೆಸ್ಪಾನ್ಸಿಬಿಲಿಟಿ) 2020ರ ಘೋಷವಾಕ್ಯವಾಗಿದೆ.
ವಿಶ್ವ ಸಂಸ್ಥೆ/ಹೆಚ್ಐವಿ ಏಡ್ಸ್:
- ಹೆಚ್‌ಐವಿ ಪ್ರಮುಖ ಜಾಗತಿಕ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಮುಂದುವರೆದಿದೆ. ಇದುವರೆಗೆ ಸುಮಾರು 33 ಮಿಲಿಯನ್ ಜೀವಗಳನ್ನು ಬಲಿ ಪಡೆದಿದೆ-ಡಬ್ಲ್ಯುಹೆಚ್‌ಒ
- 2019ರ ಕೊನೆಯಲ್ಲಿ ವಿಶ್ವದ 38 ದಶಲಕ್ಷ ಜನರು ಹೆಚ್‌ಐವಿ ಪೀಡಿತರಾಗಿದ್ದಾರೆ - ಡಬ್ಲ್ಯುಹೆಚ್‌ಒ
ಹೆಚ್ಐವಿ ಅಂದರೇನು?
ಹೆಚ್‌ಐವಿ (ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್) ವೈರಸ್ ಆಗಿದ್ದು, ಅದು ದೇಹವನ್ನು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುವ ಕೋಶಗಳ ಮೇಲೆ ದಾಳಿ ಮಾಡುತ್ತದೆ. ಇದರಿಂದಾಗಿ ಒಬ್ಬ ವ್ಯಕ್ತಿಯು ಇತರ ಸೋಂಕುಗಳು ಮತ್ತು ರೋಗಗಳಿಗೆ ಹೆಚ್ಚು ಗುರಿಯಾಗುತ್ತಾನೆ. ಹೆಚ್‌ಐವಿ ಸೋಂಕು ಕೆಲವು ದೈಹಿಕ ದ್ರವಗಳ ಸಂಪರ್ಕದಿಂದ ಹರಡುತ್ತದೆ, ಸಾಮಾನ್ಯವಾಗಿ ಅಸುರಕ್ಷಿತ ಲೈಂಗಿಕ ಕ್ರಿಯೆ (ಕಾಂಡೋಮ್ ಬಳಸದೆ ಲೈಂಗಿಕ ಕ್ರಿಯೆ) ಅಥವಾ ಇಂಜೆಕ್ಷನ್, ಡ್ರಗ್ಸ್ ಸಾಧನಗಳನ್ನು ಹಂಚಿಕೊಳ್ಳುವ ಮೂಲಕ ಹರಡುತ್ತದೆ.
ಏಡ್ಸ್ ಎಂದರೇನು?
ಹೆಚ್‌ಐವಿ ವೈರಸ್‌ನಿಂದಾಗಿ ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ, ಕೊನೆಯದಾಗಿ ಬಾಧಿಸುವುದೇ ಏಡ್ಸ್. ಹೆಚ್ಐವಿಗೆ ಚಿಕಿತ್ಸೆ ನೀಡದಿದ್ದರೆ, ಏಡ್ಸ್ಗೆ ತಿರುಗುವ ಸಾಧ್ಯತೆಗಳಿರುತ್ತವೆ. ಹೆಚ್ಐವಿ, ಏಡ್ಸ್ಗಿಂತ ಭಿನ್ನವಾಗಿದೆಯೇ?
ಅಕ್ವೈರ್ಡ್ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೋಮ್ (ಏಡ್ಸ್) ಎನ್ನುವುದು ಹೆಚ್‌ಐವಿ ಸೋಂಕಿನ ಮುಂದುವರೆದ ಭಾಗ. ಇದು ಒಬ್ಬ ವ್ಯಕ್ತಿಯ ದೇಹಕ್ಕೆ 20 ತರಹದ ಕ್ಯಾನ್ಸರ್ ಬಾಧಿಸುವುದಕ್ಕೆ ಸಮಾನವಾಗಿದೆ. ಏಡ್ಸ್ ದೇಹದ ರೋಗ ನಿರೋಧಕ ಶಕ್ತಿಯ ದುರ್ಬಲತೆಯ ಲಾಭ ಪಡೆದುಕೊಳ್ಳುತ್ತದೆ.
ಆ್ಯಂಟಿರೆಟ್ರೋವೈರಲ್ ಥೆರಪಿ (ಎಆರ್‌ಟಿ) ಬರುವುದಕ್ಕಿಂತ ಮೊದಲು, ಹೆಚ್ಐವಿ ಬಾಧಿತರು ಏಡ್ಸ್ಗ್ ತುತ್ತಾಗುವುದು ಸಾಮಾನ್ಯವಾಗಿತ್ತು. ಆದರೆ, ಈಗ ಹೆಚ್ಚಿನ ಹೆಚ್ಐವಿ ಸೋಂಕಿತರು, ಎಆರ್‌ಟಿ ಪರೀಕ್ಷೆಗೆ ಒಳಗಾಗುವುದರಿಂದ ಏಡ್ಸ್ಗೆ ತುತ್ತಾಗುತ್ತಿಲ್ಲ. ಹೆಚ್ಐವಿಗೆ ಸರಿಯಾಗಿ ಚಿಕಿತ್ಸೆ ಪಡೆಯದವರು ಮತ್ತು ಸೋಂಕಿನ ಕೊನೆಯ ಹಂತ ತಲುಪಿದವರು ಏಡ್ಸ್ಗೆ ತುತ್ತಾಗುತ್ತಾರೆ.
ಭಾರತದಲ್ಲಿ ಹೆಚ್ಐವಿಯ ಸ್ಥಿತಿ
- ರಾಷ್ಟ್ರೀಯ ನೆರವು ನಿಯಂತ್ರಣ ಸಂಸ್ಥೆ, ಐಸಿಎಂಆರ್ ಮತ್ತು ರಾಷ್ಟ್ರೀಯ ವೈದ್ಯಕೀಯ ಅಂಕಿ-ಅಂಶಗಳ ಸಂಸ್ಥೆ ಸಹಯೋಗದೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಬಿಡುಗಡೆ ಮಾಡಿದ ಇತ್ತೀಚಿನ ಹೆಚ್‌ಐವಿ ಅಂದಾಜು ವರದಿಯ ಪ್ರಕಾರ
- 2019ರಲ್ಲಿ ದೇಶದಲ್ಲಿ ಅಂದಾಜು 23.49 ಲಕ್ಷ ಜನರು ಹೆಚ್‌ಐವಿ (ಪಿಎಲ್‌ಹೆಚ್‌ವಿ) ಬಾಧಿತರಾಗಿ ಬದುಕುತ್ತಿದ್ದಾರೆ.
- ಭಾರತದಲ್ಲಿ ದಿನೇದಿನೆ ಹೆಚ್ಐವಿ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. 2010 ಮತ್ತು 2019ರ ನಡುವೆ ವಾರ್ಷಿಕ ಹೊಸ ಹೆಚ್‌ಐವಿ ಸೋಂಕುಗಳ ಪ್ರಮಾಣದಲ್ಲಿ ಶೇ.37ರಷ್ಟು ಇಳಿಕೆ ಕಂಡಿದೆ.
- ವಯಸ್ಕರಲ್ಲಿ (15 ರಿಂದ 49 ವರ್ಷದವರು) ಹೆಚ್ಐವಿ ಹರಡುವಿಕೆ 0.22% ಇದೆ.
- ಹೆಚ್‌ಐವಿ (ಸಿಎಲ್‌ಹೆಚ್‌ಐವಿ) ಬಾಧಿತರಾಗಿ ಜೀವಿಸುತ್ತಿರುವ ಮಕ್ಕಳು ಒಟ್ಟು ಸೋಂಕು ಬಾಧಿತರ ಪೈಕಿ ಶೇ.3.4%ರಷ್ಟಿದ್ದಾರೆ.
- ಹೆಚ್‌ಐವಿ ಸೋಂಕಿತ ಮಹಿಳೆಯರು (15 ವರ್ಷ ಮೇಲ್ಪಟ್ಟವರು) ಒಟ್ಟು ಸೋಂಕಿತರ ಪೈಕಿ, ಶೇ.44%ರಷ್ಟಿದ್ದಾರೆ.
ಹೆಚ್ಐವಿ ಲಕ್ಷಣಗಳು :
- ಹೆಚ್ಐವಿ ಸೋಂಕು ದೇಹಕ್ಕೆ ತಗುಲಿದರೂ, ಆರಂಭಿಕ ಕೆಲ ತಿಂಗಳು ಅನೇಕ ಜನರಲ್ಲಿ ಅವುಗಳ ಲಕ್ಷಣಗಳು ಕಂಡು ಬರುವುದಿಲ್ಲ. ಕೆಲವರಿಗೆ ತಾನು ಸೋಂಕಿಗೆ ತುತ್ತಾಗಿದ್ದೇನೆ ಎನ್ನುವುದೇ ತಿಳಿದಿರುವುದಿಲ್ಲ.
- ಇತರರು ಜ್ವರ, ತಲೆನೋವು, ದದ್ದು ಮತ್ತು ನೋಯುತ್ತಿರುವ ಗಂಟಲು ಸೇರಿದಂತೆ ಇನ್ಫ್ಲುಯೆನ್ಸದಂತಹ ರೋಗಲಕ್ಷಣಗಳನ್ನು ಅನುಭವಿಸಬಹುದು. ಆದಾಗ್ಯೂ, ಈ ಮೊದಲ ಕೆಲವು ತಿಂಗಳುಗಳು ವೈರಸ್ ಹೆಚ್ಚು ಸಾಂಕ್ರಾಮಿಕವಾಗಿದ್ದಾಗ.
- ದೇಹಕ್ಕೆ ತಗುಲಿದ ವೈರಸ್ ಹೆಚ್ಚು ಪರಿಣಾಮಕಾರಿಯಾಗಿದ್ದರೆ ಸಾಮಾನ್ಯವಾಗಿ ಆರಂಭದ ಹಂತದಲ್ಲಿ, ಜ್ವರ, ತಲೆನೋವು, ಗಂಟಲು ನೋವಿನಂತಹ ಲಕ್ಷಣಗಳು ಕಂಡು ಬರುತ್ತವೆ.
- ದಿನಗಳೆದಂತೆ ರೋಗ ಲಕ್ಷಣಗಳು ಹೆಚ್ಚಾಗುತ್ತದೆ. ತೂಕ ಕಡಿಮೆಯಾಗುವುದು, ಜ್ವರ, ಅತಿಸಾರ ಮತ್ತು ಕೆಮ್ಮು ಪ್ರಮುಖ ಲಕ್ಷಣಗಳಾಗಿವೆ. ಹೆಚ್ಐವಿ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ. ಸರಿಯಾಗಿ ಚಿಕಿತ್ಸೆ ಪಡೆದುಕೊಳ್ಳದಿದ್ದರೆ, ಜನರು ಕ್ಷಯ ರೋಗ, ಕ್ರಿಪ್ಟೋಕೊಕಲ್ ಮೆನಿಂಜೈಟಿಸ್,ಲಿಂಫೋಮಾಸ್,ಕಪೋಸಿಯ ಸಾರ್ಕೋಮಾ ಸೇರಿದಂತೆ ಹಲವು ರೀತಿಯ ಕ್ಯಾನ್ಸರ್ಗೆ ತುತ್ತಾಗುವ ಸಾಧ್ಯತೆಯಿರುತ್ತದೆ.
ಹೆಚ್ಐವಿಗೆ ಚಿಕಿತ್ಸೆ
- ಪರಿಣಾಮಕಾರಿ ಆ್ಯಂಟಿರೆಟ್ರೋವೈರಲ್ ಟ್ರೀಟ್ಮೆಂಟ್ (ಎಆರ್‌ಟಿ)ನಿಂದ ಗರ್ಭಧಾರಣೆ, ಹೆರಿಗೆ ಮತ್ತು ಸ್ತನಪಾನ ಸಮಯದಲ್ಲಿ ತಾಯಿಯಿಂದ ಮಗುವಿಗೆ ಹೆಚ್ಐವಿ ಹರಡುವುದನ್ನು ತಡೆಯಬಹುದು.
- ಆ್ಯಂಟಿರೆಟ್ರೋವೈರಲ್ ಚಿಕಿತ್ಸೆಗೆ ಒಳಗಾದವರು ಮತ್ತು ಸೂಕ್ತ ಸುರಕ್ಷಾ ಕ್ರಮಗಳನ್ನು ಕೈಗೊಂಡವರಿಂದ, ಇನ್ನೊಬ್ಬರಿಗೆ ಲೈಂಗಿಕ ಕ್ರಿಯೆಯ ಮೂಲಕ ಹೆಚ್ಐವಿ ಹರಡುವುದಿಲ್ಲ.
- ಕಾಂಡೋಮ್ ಬಳಸುವುದರಿಂದ ಲೈಂಗಿಕ ಸಂಬಂಧದ ಮೂಲಕ ಹೆಚ್ಐವಿ ಹರಡುವುದನ್ನು ತಡೆಗಟ್ಟಬಹುದು.
- ಕಾಂಡೋಮ್ಗಳು ಹೆಚ್ಐವಿ ಮತ್ತು ಇತರ ಲೈಂಗಿಕವಾಗಿ ಹರಡುವ ಸೋಂಕುಗಳನ್ನು ತಡೆಯುತ್ತದೆ.
- ಚುಚ್ಚು ಮದ್ದಿನ ವೇಳೆ ಸೂಜಿ, ಸಿರಿಂಜ್ಗಳನ್ನು ಬದಲಿಸಿ ಚಿಕಿತ್ಸೆ ನೀಡುವುದರಿಂದ ಹೆಚ್ಐವಿ ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಯಬಹುದು.
- ಹಲವು ಬಾರಿ ಎಆರ್‌ಟಿ ಚಿಕಿತ್ಸೆ ನೀಡುವುದರಿಂದ ಹೆಚ್ಐವಿಯ ಪುನರಾವರ್ತನೆಯನ್ನು ಕಡಿಮೆ ಮಾಡಬಹುದು. ಆದರೆ, ಹೆಚ್ಐವಿಯನ್ನು ಸಂಪೂರ್ಣವಾಗಿ ಗುಣಪಡಿಸಲು ಆಗುವುದಿಲ್ಲ. ಎಆರ್‌ಟಿ ಚಿಕಿತ್ಸೆಯಿಂದ ಸೋಂಕಿನ ಪ್ರಮಾಣವನ್ನು ಕಡಿಮೆ ಮಾಡಬಹುದು.
- ಹೆಚ್ಐವಿಗೆ ತುತ್ತಾದವರು ಎಆರ್‌ಟಿ ಚಿಕಿತ್ಸೆಯನ್ನು ಜೀವನದುದ್ದಕ್ಕೂ ತೆಗೆದುಕೊಳ್ಳುತ್ತಿರಬೇಕಾಗುತ್ತದೆ. ಒಂದು ವೇಳೆ ಎಆರ್‌ಟಿ ಚಿಕಿತ್ಸೆ ಪರಿಣಾಮ ಬೀರದಿದ್ದರೆ ಜನರು ಇತರ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಅನಿವಾರ್ಯವಾಗುತ್ತದೆ.