ETV Bharat / bharat

2020ರ ಮೊದಲ ತ್ರೈಮಾಸಿಕದಲ್ಲೇ ಭಾರತ ಸೈಬರ್​ ದಾಳಿಯ ಪ್ರಮಾಣ ಶೇ.37 ಹೆಚ್ಚಳ

author img

By

Published : May 24, 2020, 3:41 PM IST

ಭಾರತದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷದ ಆರಂಭದಲ್ಲೇ ಸೈಬರ್ ದಾಳಿಗಳ ಪ್ರಮಾಣ ಶೇ. 37 ರಷ್ಟು ಹೆಚ್ಚಾಗಿದೆ. ರಿಮೂವೇಬಲ್ ಹಾರ್ಡ್​ವೇರ್​​ಗಳಾದ ಯುಎಸ್​ಬಿ ಡ್ರೈವ್​ಗಳು, ಹಾರ್ಡ್​ ಡಿಸ್ಕ್​ ಮತ್ತು ಡಿವಿಡಿಗಳು ಮತ್ತು ಇತರ ಆಫ್​ಲೈನ್​ ಟೂಲ್​ಗಳಿಂದದೂ ಹೆಚ್ಚಿನ ಪ್ರಮಾಣದಲ್ಲಿ ಸೈಬರ್​ ದಾಳಿಗಳು ನಡೆಯುತ್ತಿವೆ ಎಂದು ವರದಿಯೊಂದು ತಿಳಿಸಿದೆ.

37-percent-increase-in-cyberattacks-in-india-in-q1-2020-report
ಭಾರತ ಸೈಬರ್​ ದಾಳಿಯ ಪ್ರಮಾಣ ಶೇ.37 ಹೆಚ್ಚಳ

ನವದೆಹಲಿ : ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕಕ್ಕೆ ಹೋಲಿಸಿದರೆ, 2020 ರ ಮೊದಲ ತ್ರೈಮಾಸಿಕದಲ್ಲಿ ಭಾರತದಲ್ಲಿ ಸೈಬರ್ ದಾಳಿಗಳ ಪ್ರಮಾಣ ಶೇ. 37 ರಷ್ಟು ಹೆಚ್ಚಳ ಕಂಡಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ.

ಕಾಸ್ಪರ್​ ಸ್ಕೈ ನೆಟ್ವರ್ಕ್ (ಕೆಎಸ್ಎನ್) ಬಿಡುಗಡೆ ಮಾಡಿರುವ ವರದಿ ಪ್ರಕಾರ ಈ ವರ್ಷದ ಜನವರಿಯಿಂದ ಮಾರ್ಚ್​ವರೆಗೆ ಭಾರತದಲ್ಲಿ 52,820,874 ಸ್ಥಳೀಯ ಸೈಬರ್ ಬೆದರಿಕೆಗಳನ್ನು ಕೆಎಸ್​​ಎನ್​ ಉತ್ಪನ್ನಗಳು ಪತ್ತೆ ಹಚ್ಚಿವೆ ಮತ್ತು ಅದರಿಂದಾಗುವ ದಾಳಿಯನ್ನು ತಡೆದಿವೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲೇ ಭಾರತ ಸೈಬರ್​ ದಾಳಿಯಲ್ಲಿ ಜಗತ್ತಿನಲ್ಲಿ 27ನೇ ಸ್ಥಾನಕ್ಕೆ ಬಂದು ತಲುಪಿದೆ. ಕಳೆದ ವರ್ಷ ನಾಲ್ಕನೇ ತ್ರೈಮಾಸಿಕದ ಅಂತ್ಯದ ವೇಳೆ 32ನೇ ಸ್ಥಾನದಲ್ಲಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಸ್ಪರ್​ ಸ್ಕೈ ಗ್ರೇಟ್​ ಎಷ್ಯಾ ಫೆಸಿಫಿಕ್​ ಹಿರಿಯ ಭದ್ರತಾ ಸಂಶೋಧಕ ಸೌರ​ ಶರ್ಮಾ, ಈ ವರ್ಷ ಮೊದಲನೇ ತ್ರೈ ಮಾಸಿಕದಲ್ಲೇ ಸೈಬರ್​ ದಾಳಿಯಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದ್ದು, ಇದು ಎರಡನೇ ತ್ರೈಮಾಸಿಕಕ್ಕೆ ಮತ್ತಷ್ಟು ಏರಿಕೆಯಾಗಬಹುದು. ಪ್ರಸ್ತುತ ಸಂದರ್ಭದಲ್ಲಿ ಸೈಬರ್​ ದಾಳಿಗಳು ಹೆಚ್ಚಾಗುತ್ತಿದ್ದು, ವಿಶೇಷವಾಗಿ ಏಷ್ಯಾ ಫೆಸಿಫಿಕ್​ ಪ್ರದೇಶದಲ್ಲಿ ಏರಿಕೆ ಕಾಣುತ್ತಿದೆ. ಮೊದಲನೆ ತ್ರೈಮಾಸಿಕದಲ್ಲಿ ಭಾರತದಲ್ಲಿ ಕಂಡು ಬಂದ ಸೈಬರ್​ ದಾಳಿಯ ಪ್ರಕರಣಗಳು ಹೆಚ್ಚಾಗಿ ರಿಮೂವೇಬಲ್ ಹಾರ್ಡ್​ವೇರ್​​ಗಳಾದ ಯುಎಸ್​ಬಿ ಡ್ರೈವ್​ಗಳು, ಹಾರ್ಡ್​ ಡಿಸ್ಕ್​ ಮತ್ತು ಡಿವಿಡಿಗಳು ಮತ್ತು ಇತರ ಆಫ್​ಲೈನ್​ ಟೂಲ್​ಗಳಿಂದ ನಡೆದಿವೆ ಎಂದಿದ್ಧಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.