ETV Bharat / bharat

ರಾಷ್ಟ್ರೀಯ ನಾಗರಿಕ ನೋಂದಣಿ: ಅಸ್ಸೋಂನ 37 ಲಕ್ಷ ಜನರಿಗೆ ಮಾನಸಿಕ ಹಿಂಸೆ, ಸಮೀಕ್ಷೆ - ರಾಷ್ಟ್ರೀಯ ನಾಗರಿಕ ನೋಂದಣಿ

ಮಾನವ ಹಕ್ಕುಗಳಿಗೆ ಸಂಬಂಧಿಸಿದ ಹಿಂಸೆ ವಿರುದ್ಧದ ರಾಷ್ಟ್ರೀಯ ಆಂದೋಲನ (ಎನ್​ಸಿಟಿಎ) ಈ ಸಮೀಕ್ಷೆ ನಡೆಸಿದ್ದು, 41 ಲಕ್ಷ ಅಸ್ಸೋಂ ಜನರಲ್ಲಿ ಶೇ 89ರಷ್ಟು ಅಥವಾ 37 ಲಕ್ಷ ಜನರು ಎನ್​ಆರ್​ಸಿ ಕರಡು ಪ್ರಕ್ರಿಯೆಯು ಮಾನಸಿಕ ಹಿಂಸೆಯಂತಿದೆ ಎಂದು ದೂರಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Aug 29, 2019, 9:16 PM IST

Updated : Aug 29, 2019, 9:39 PM IST

ನವದೆಹಲಿ: ಅಸ್ಸೋಂ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್​ಆರ್​ಸಿ) ವಿಚಾರ ಭಾರಿ ವಿವಾದಕ್ಕೆ ಗ್ರಾಸವಾಗಿದ್ದು, ಭಾರತೀಯ ನಾಗರಿಕರು ಎಂದೆನಿಸಿಕೊಳ್ಳುವ ನೋಂದಣಿ ಪ್ರಕ್ರಿಯೆ ಜನರನ್ನು ಮಾನಸಿಕ ಹಿಂಸೆಗೆ ಗುರಿಮಾಡುತ್ತಿದೆ ಎಂಬುದು ಸಮೀಕ್ಷಾ ವರದಿಯೊಂದು ತಿಳಿಸಿದೆ.

ಮಾನವ ಹಕ್ಕುಗಳಿಗೆ ಸಂಬಂಧಿಸಿದ ಹಿಂಸೆ ವಿರುದ್ಧದ ರಾಷ್ಟ್ರೀಯ ಆಂದೋಲನ (ಎನ್​ಸಿಟಿಎ) ಈ ಸಮೀಕ್ಷೆ ನಡೆಸಿದ್ದು 41 ಲಕ್ಷ ಅಸ್ಸೊಂ ಜನರಲ್ಲಿ ಶೇ 89ರಷ್ಟು ಅಥವಾ 37 ಲಕ್ಷ ಜನರು ಎನ್​ಆರ್​ಸಿ ಕರಡು ಪ್ರಕ್ರಿಯೆಯು ಮಾನಸಿಕ ಹಿಂಸೆಯಂತಿದೆ ಎಂದು ದೂರಿದ್ದಾರೆ.

ಎನ್​ಆರ್​ಸಿ ಕರಡು ಜಾರಿ ಬಳಿಕ ಎನ್​ಸಿಟಿಎಯು ಅಸ್ಸೊಂನ ಬಕ್ಸ, ಗೊಲ್ಪರ ಮತ್ತು ಕಮ್​ರುಪ್​ ಜಿಲ್ಲೆಗಳಲ್ಲಿ ಜುಲೈ 16-20ರಂದು ಸಮೀಕ್ಷೆ ನಡೆಸಿದೆ.

ಸುಪ್ರೀಂಕೋರ್ಟ್​ನ ಮೇಲ್ವಿಚಾರಣೆ ಮತ್ತು ನಿರ್ದೇಶನದ ಅನ್ವಯವೇ ವರದಿಯನ್ನು ಪ್ರಕಟಿಸಲಾಗುವುದು. ಕಾನೂನಿನ ದೃಷ್ಟಿಕೋನದ ಹೊರತಾಗಿಯೂ ಇಂತಹ ನೀತಿಗಳನ್ನು ಜಾರಿಗೆ ತರುವಾಗ ಸರ್ಕಾರವು ಮಾನವೀಯ ವಿಧಾನ ಅನುಸರಿಸಬೇಕು ಎಂದು ರಾಜಕೀಯ ಮತ್ತು ಕಾರ್ಯತಂತ್ರದ ವ್ಯವಹಾರ ತಜ್ಞ ಸುಬೀಮಲ್ ಭಟ್ಟಾಚಾರ್ಜಿ ಹೇಳಿದ್ದಾರೆ.

Intro:Body:Conclusion:
Last Updated : Aug 29, 2019, 9:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.