ETV Bharat / bharat

ಮತ್ತೊಂದು 'ಧ್ರುವ ತಲುಪಿದ ಹೆಚ್ಎ‌ಎಲ್‌ : 300ನೇ ಸುಧಾರಿತ ಹಗುರ ಹೆಲಿಕಾಪ್ಟರ್‌ ಹಸ್ತಾಂತರ

author img

By

Published : Sep 29, 2020, 5:53 PM IST

ಹೆಚ್‌ಎಲ್‌ ಹೊಸ ಮೈಲುಗಲ್ಲಿಗೆ ಸಾಕ್ಷಿಯಾಗಿದ್ದು, ಇಂದು 300ನೇ ಸುಧಾರಿತ ಹಗುರ ಹೆಲಿಕಾಪ್ಟರ್‌ ಧ್ರುವವನ್ನು ಹೆಲಿಕಾಪ್ಟರ್‌ ಸಂಕೀರ್ಣದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಹಸ್ತಾಂತರಿಸಿದೆ.

300th-alh-dhruv-rolls-out-from-hal-hangar
ಹೆಚ್ಎ‌ಎಲ್‌ ಹೊಸ ಮೈಲುಗಲ್ಲು : 300ನೇ ಸುಧಾರಿತ ಅಗುರ ಹೆಲಿಕಾಪ್ಟರ್‌ ಧ್ರುವ ಹಸ್ತಾಂತರ

ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್‌ ಲಿಮಿಟೆಡ್‌ (ಹೆಚ್‌ಎಎಲ್‌) ತನ್ನ 300ನೇ ಸುಧಾರಿತ ಹಗುರ ಹೆಲಿಕಾಪ್ಟರ್‌ (ಎಎಲ್‌ಹೆಚ್‌) ಧ್ರುವವನ್ನು ಇಂದು ವೈಮಾನಿಕ ವಿಭಾಗಕ್ಕೆ ಹಸ್ತಾಂತರಿಸಿದೆ.

ಹೆಚ್‌ಎಎಲ್‌ನ ಹೆಲಿಕಾಪ್ಟರ್‌ ವಿಭಾಗದಲ್ಲಿ ನಡೆದ ಹಸ್ತಾಂತರದ ಕಾರ್ಯಕ್ರಮದಲ್ಲಿ ಮಾತನಾಡಿದ ಹೆಚ್‌ಎಎಲ್‌ನ ಸಿಎಂಡಿ ಆರ್‌.ಮಾಧವನ್‌, ಎಎಲ್‌ಹೆಚ್‌ 1992ರ ಆಗಸ್ಟ್‌ 30 ರಂದು ತನ್ನ ಮೊದಲ ಹೆಲಿಕಾಪ್ಟರ್‌ಅನ್ನು ನಿರ್ಮಾಣ ಮಾಡಿತ್ತು. ಅಂದಿನಿಂದ ಇಂದಿನ ವರೆಗೆ ವಿಶ್ವದರ್ಜೆಯ ಹೆಲಿಕಾಪ್ಟರ್‌ಗಳನ್ನು ನಿರ್ಮಾಣ ಮಾಡುತ್ತಿದ್ದು, ಸರಿಸಾಟಿಇಲ್ಲದ ಕಾರ್ಯಕ್ಷಮತೆಯನ್ನು ಹೆಲಿಕಾಪ್ಟರ್‌ಗಳು ಹೊಂದಿವೆ ಎಂದು ಹೇಳಿದ್ದಾರೆ.

ಮಾರ್ಕ್‌-ಐ, ಮಾರ್ಕ್‌-IV ಅಸಾಧಾರಣವಾದವು ಮತ್ತು ಹೆಲಿಕಾಪ್ಟರ್‌ಗಳ ಅಭಿವೃದ್ಧಿ ಮತ್ತು ವಿನ್ಯಾಸಕ್ಕೆ ಶಕ್ತಿ ತುಂಬಿವೆ ಎಂದರು. ಇದೇ ವೇಳೆ 300ನೇ ಸುಧಾರಿತ ಈ ಹಗುರ ಹೆಲಿಕಾಪ್ಟರ್‌ ಅನ್ನು ಡಿಜಿಎಕ್ಯೂಎ ದಕ್ಷಿಣ ವಲಯದ ಹೆಚ್ಚುವರಿ ಪ್ರಧಾನ ನಿರ್ದೇಶಕರಾದ ವೈಕೆ ಶರ್ಮಾ ಅವರು ಹೆಲಿಕಾಪ್ಟರ್‌ ಸಂಕೀರ್ಣದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿವಿಎಸ್‌ ಭಾಸ್ಕರ್‌ ಅವರಿಗೆ ಹಸ್ತಾಂತರಿಸಿದರು.

ಜಿವಿಎಸ್‌ ಭಾಸ್ಕರ್‌ ಮಾತನಾಡಿ, ಹೆಚ್‌ಎಎಲ್‌ನ ಉದ್ಯೋಗಿಗಳು ಮತ್ತು ಗ್ರಾಹಕರ ಬೆಂಬಲದಿಂದ 300 ಸುಧಾರಿತ ಹಗುರ ಹೆಲಿಕಾಪ್ಟರ್‌ಗಳನ್ನು ನಿರ್ಮಿಸಲು ಸಾಧ್ಯವಾಯಿತು. ಸೇವೆಗೆ ನಾವು ಹೆಚ್ಚಿನ ಆದ್ಯತೆ ನೀಡುತ್ತೇವೆ. ಹೀಗಾಗಿ ನಮಗೆ ಗ್ರಾಹಕರ ಬೆಂಬಲ ಹೆಚ್ಚುತ್ತಲೇ ಇದೆ. 2,80,000 ಹಾರಾಟದ ಗಂಟೆಗಳನ್ನು ಹೊಂದಿರುವ ಎಎಲ್‌ಹೆಚ್‌, ಯಾವುದೇ ಸ್ಥಳ, ಸಮಯದಲ್ಲಿ ಬಹುಮುಖ ಕಾರ್ಯ ನಿರ್ವಹಿಸುತ್ತದೆ ಎಂದಿದ್ದಾರೆ.

ಪ್ರಸ್ತುತ ಹೆಚ್‌ಎಎಲ್‌ 73 ಎಎಲ್‌ಹೆಚ್‌ಎಸ್‌ ನಿರ್ಮಾಣಕ್ಕಾಗಿ ಒಪ್ಪಂದ ಮಾಡಿಕೊಂಡಿದ್ದು, ಇದರಲ್ಲಿ ಸೇನೆಗೆ 41, ನೌಕಾದಳಕ್ಕೆ 16 ಮತ್ತು ಕರಾವಳಿ ಕಾವಲು ಪಡೆಗೆ 16 ಹೆಲಿಪಾಕ್ಟರ್‌ಗಳನ್ನು ನೀಡಲಿದೆ. ಇದನ್ನು ಹೊರತುಪಡಿಸಿದ ಈಗಾಗಲೇ 38 ಸುಧಾರಿತ ಹಗುರ ಹೆಲಿಕಾಪ್ಟರ್‌ಗಳನ್ನು ನಿರ್ಮಿಸಲಾಗಿದೆ. ಉಳಿದ ಕಾಪ್ಟರ್‌ಗಳ ನಿರ್ಮಾಣದ ಕಾರ್ಯವನ್ನು 2022ಕ್ಕೆ ಮುಕ್ತಾಯಗೊಳಿಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.