ನವದೆಹಲಿ: ಯುಎಸ್ಎ, ಯುಕೆ (ಆಕ್ಸ್ಫರ್ಡ್ ವಿಶ್ವವಿದ್ಯಾಲಯ) ಹಾಗೂ ಚೀನಾದ ಲಸಿಕೆಗಳು ಕೊನೆಯ ಹಂತದ ಪರೀಕ್ಷೆಯಲ್ಲಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
24 ವ್ಯಾಕ್ಸಿನ್ ಕ್ಲಿನಿಕಲ್ ಪ್ರಯೋಗದ ಹಂತದಲ್ಲಿದ್ದು, 141 ವ್ಯಾಕ್ಸಿನ್ ಪ್ರಯೋಗಕ್ಕೂ ಮೊದಲ ಹಂತದ ಪರೀಕ್ಷೆಯಲ್ಲಿವೆ. ಮೂರನೇ ಹಂತದ ಪ್ರಯೋಗದಲ್ಲಿರುವ ಮೂರು ವ್ಯಾಕ್ಸಿನ್ ಪ್ರಯೋಗದಲ್ಲಿ ತೇರ್ಗಡೆಯಾಗುತ್ತಿದ್ದಂತೆ ಹೆಚ್ಚಿನ ರೀತಿಯಲ್ಲಿ ಉತ್ಪಾದನೆಗೊಂಡು ಎಲ್ಲೆಡೆ ಬಿಡುಗಡೆಯಾಗಲಿವೆ. ಕೋವಿಡ್ ಔಷಧಿ ತಯಾರು ಮಾಡುವಲ್ಲಿ ಭಾರತವೂ ಮಹತ್ವದ ಪಾತ್ರ ನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶದಲ್ಲಿ ಇದೇ ವೇಳೆ 1,81,90,000 ಕೋವಿಡ್ ಟೆಸ್ಟ್ ನಡೆಸಲಾಗಿದ್ದು, ದೇಶದಲ್ಲಿ ಸಾವಿನ ಪ್ರಮಾಣ ಶೇ 2.21 ರಷ್ಟಿದೆ ಎಂದು ತಿಳಿಸಿದೆ. ಚೇತರಿಕೆ ಪ್ರಮಾಣ, ದೆಹಲಿಯಲ್ಲಿ ಶೇ 88, ಲಡಾಖ್ ಶೇ 80, ಹರಿಯಾಣ ಶೇ.78, ಅಸ್ಸೋಂ ಶೇ 76, ತೆಲಂಗಾಣ ಶೇ.74, ತಮಿಳುನಾಡು ಮತ್ತು ಗುಜರಾತ್ ಶೇ 73, ರಾಜಸ್ಥಾನ ಶೇ 70, ಮಧ್ಯಪ್ರದೇಶ ಶೇ.69 ಹಾಗೂ ಗೋವಾದಲ್ಲಿ ಶೇ.68ರಷ್ಟಿದೆ ಆರೋಗ್ಯ ಇಲಾಖೆ ಹೇಳಿದೆ.