ETV Bharat / bharat

ನಿಜಾಮುದ್ದೀನ್​ ಗಂಡಾಂತರ: ದೆಹಲಿಯಲ್ಲಿ 24 ಮಂದಿಗೆ ಸೋಂಕು; ಆಯೋಜಕರ ಮೇಲೆ ಕಠಿಣ ಕ್ರಮ

author img

By

Published : Mar 31, 2020, 12:48 PM IST

Updated : Mar 31, 2020, 1:22 PM IST

ದೆಹಲಿಯ ನಿಜಾಮುದ್ದೀನ್​ ಪ್ರದೇಶದಲ್ಲಿ ತಬ್ಲೀಘಿ​ ಜಮಾತ್​ ಆಯೋಜಿಸಿದ್ದ ಬೃಹತ್‌ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು 25 ಮಂದಿಗೆ ಸೋಂಕು ಹರಡಲು ಕಾರಣಕರ್ತರಾದ ಆಯೋಜಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ದೆಹಲಿ ಆರೋಗ್ಯ ಸಚಿವರು ತಿಳಿಸಿದ್ದಾರೆ.

24 people who attended Nizamuddin religious congregation test COVID-19 positive
ನಿಜಾಮುದ್ದೀನ್​ ಗಂಡಾಂತರಕ್ಕೆ ದೆಹಲಿಯಲ್ಲಿ 24 ಮಂದಿಗೆ ಸೋಂಕು

ನವದೆಹಲಿ: ನಿಜಾಮುದ್ದೀನ್​​ ಪ್ರದೇಶದ ಮರ್ಕಾಜ್​ ಕಟ್ಟಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 24 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್​ ಜೈನ್​ ಸ್ಪಷ್ಟಪಡಿಸಿದ್ದಾರೆ.

ಮಾರ್ಚ್​ 1ರಿಂದ 15ರವರೆಗೆ ತಬ್ಲೀಘಿ ಜಮಾತ್​​ನ ಅಂಗವಾಗಿ ನಿಜಾಮುದ್ದೀನ್​ ಪ್ರದೇಶದ ಕಟ್ಟಡವೊಂದರಲ್ಲಿ ಬೃಹತ್ ಧಾರ್ಮಿಕ ಕಾರ್ಯಕ್ರಮ ಜರುಗಿತ್ತು. ಈ ಕಾರ್ಯಕ್ರಮದಲ್ಲಿ ಇಂಡೋನೇಷ್ಯಾ, ಮಲೇಷಿಯಾ ಹಾಗೂ ದೇಶದ ವಿವಿಧೆಡೆಗಳಿಂದ 1,500ರಿಂದ 1,700ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಇವರಲ್ಲಿ 1,033 ಮಂದಿಯನ್ನು ಇದೀಗ ಸ್ಥಳಾಂತರ ಮಾಡಲಾಗಿದೆ. 700 ಮಂದಿಯನ್ನು ಕ್ವಾರಂಟೈನ್​​ ಕೇಂದ್ರಕ್ಕೆ ಕಳಿಸಲಾಗಿದೆ. 334 ಮಂದಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಎಲ್ಲರಿಗೂ ಕೂಡಾ ಸ್ಕ್ರೀನಿಂಗ್​ ಮಾಡಲಾಗಿದೆ ಎಂದು ಜೈನ್​ ಸ್ಪಷ್ಟಪಡಿಸಿದ್ದಾರೆ.

ಈ ಕಾರ್ಯಕ್ರಮ ಕಾನೂನುಬಾಹಿರವಾಗಿದ್ದು ಆಯೋಜಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ವಿಪತ್ತು ಕಾಯ್ದೆ ಮತ್ತು ಸಾಂಕ್ರಾಮಿಕ ವಿಪತ್ತು ಕಾಯ್ದೆಯನ್ನು ದೆಹಲಿಯಲ್ಲಿ ಜಾರಿಗೊಳಿಸಲಾಗಿದೆ. ಈ ಕಾಯ್ದೆಯಂತೆ 5 ಮಂದಿಗೂ ಹೆಚ್ಚು ಮಂದಿ ಒಂದೆಡೆ ಸೇರುವಂತಿಲ್ಲ ಎಂಬ ಕಾನೂನಿದೆ. ಆದರೂ ಕೂಡಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಕುರಿತು ಕ್ರಮ ಕೈಗೊಳ್ಳಲು ಲೆಫ್ಟಿನೆಂಟ್​ ಗವರ್ನರ್​ಗೆ ಪತ್ರ ಬರೆಯಲಾಗಿದೆ ಎಂದು ಜೈನ್​ ಹೇಳಿದ್ದಾರೆ.

ವೀಸಾ ಉಲ್ಲಂಘನೆ ಮಾಡಿದ್ದವರು ಕಪ್ಪುಪಟ್ಟಿಗೆ..!

ಕೆಲವು ಮಂದಿ ವಿದೇಶಿಗರು ವೀಸಾ ಉಲ್ಲಂಘಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಅವರನ್ನು ಕೇಂದ್ರ ಗೃಹ ಇಲಾಖೆ ಗುರ್ತಿಸಿ ಕಪ್ಪುಪಟ್ಟಿಗೆ ಸೇರಿಸಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ನಿಜಾಮುದ್ದೀನ್​ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸೋಂಕು ಹರಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ ನಿವಾಸದಲ್ಲಿ ಉನ್ನತಾಧಿಕಾರಿಗಳ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ಉಪಮುಖ್ಯಮಂತ್ರಿ ಮನಿಷ್ ಸಿಸೋಡಿಯಾ, ಆರೋಗ್ಯ ಸಚಿವ ಸತ್ಯೇಂದರ್ ಜೈನ್​ ಹಾಗೂ ಇತರ ಅಧಿಕಾರಿಗಳು ಭಾಗಿಯಾಗಿದ್ದಾರೆ.

ಕರ್ನಾಟಕದ 45 ಮಂದಿ ಭಾಗಿ: ಅಂಡಮಾನ್​ ನಿಕೋಬಾರ್​ನಿಂದ ಪಾಲ್ಗೊಂಡವರಲ್ಲಿ 10 ಮಂದಿಗೆ ಸೋಂಕು

ಈ ಧಾರ್ಮಿಕ ಸಮಾರಂಭದಲ್ಲಿ ಕರ್ನಾಟಕದಿಂದ 45 ಮಂದಿ ಭಾಗಿಯಾಗಿದ್ದರು. ಅಂಡಮಾನ್​ ನಿಕೋಬಾರ್​ನಿಂದಲೂ ಕೂಡಾ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಲ್ಲಿ 10 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ. ತುಮಕೂರಿನ ಶಿರಾದಲ್ಲಿ ಸೋಂಕಿನಿಂದ ಮೃತಪಟ್ಟಿದ್ದ ವ್ಯಕ್ತಿ ಕೂಡಾ ಇಲ್ಲಿ ಭಾಗವಹಿಸಿದ್ದ ಎಂದು ಹೇಳಲಾಗಿದೆ.

Last Updated : Mar 31, 2020, 1:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.