ನವದೆಹಲಿ: ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯ ಕ್ಷಮದಾನ ಅರ್ಜಿ ರಾಷ್ಟ್ರಪತಿಗಳಿಂದ ತಿರಸ್ಕೃತಗೊಂಡಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಸಲ್ಲಿಕೆಯಾಗಿದ್ದ ಅರ್ಜಿ ಇದೀಗ ಸುಪ್ರೀಂನಿಂದಲೂ ವಜಾಗೊಂಡಿದೆ.
-
Supreme Court also said in its order, that the medical reports said that Vinay is psychologically fit and his medical condition is stable.
— ANI (@ANI) February 14, 2020 " class="align-text-top noRightClick twitterSection" data="
The Apex Court dismissed his petition, finding it devoid of merit. https://t.co/uQEv1iM9OL
">Supreme Court also said in its order, that the medical reports said that Vinay is psychologically fit and his medical condition is stable.
— ANI (@ANI) February 14, 2020
The Apex Court dismissed his petition, finding it devoid of merit. https://t.co/uQEv1iM9OLSupreme Court also said in its order, that the medical reports said that Vinay is psychologically fit and his medical condition is stable.
— ANI (@ANI) February 14, 2020
The Apex Court dismissed his petition, finding it devoid of merit. https://t.co/uQEv1iM9OL
ನಾಲ್ವರು ಅಪರಾಧಿಗಳಲ್ಲಿ ಒಬ್ಬನಾಗಿರುವ ವಿನಯ್ ಕುಮಾರ್ ಶರ್ಮಾ, ಮರಣದಂಡನೆ ಶಿಕ್ಷೆಯನ್ನ ಜೀವಾವಧಿ ಶಿಕ್ಷೆಯಾಗಿ ಬದಲಾಯಿಸಬೇಕು. ಜೈಲಿನಲ್ಲಿ ನೀಡುತ್ತಿರುವ ಹಿಂಸೆಯಿಂದ ನನ್ನ ಆರೋಗ್ಯ ಸಂಪೂರ್ಣವಾಗಿ ಹಾಳಾಗಿದ್ದು, ಮರಣದಂಡನೆಯನ್ನ ಜೀವಾವಧಿ ಶಿಕ್ಷೆಗೆ ಪರಿವರ್ತನೆ ಮಾಡಬೇಕು ಎಂದು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು.
ಈ ಸಂಬಂಧದ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ ಈ ಅರ್ಜಿಯನ್ನ ತಿರಸ್ಕರಿಸಿದೆ. ಇದೇ ವೇಳೆ, ವೈದ್ಯಕೀಯ ವರದಿ ಪ್ರಕಾರ ಅವರು ಆರೋಗ್ಯವಾಗಿದ್ದು, ದೈಹಿಕವಾಗಿ ಫಿಟ್ ಆಗಿದ್ದಾರೆ ಎಂಬ ಮಾಹಿತಿಯನ್ನು ನೀಡಿದೆ.
ಫೆಬ್ರವರಿ 1ರಂದು ವಿನಯ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿರಸ್ಕರಿಸಿದ್ದರು. ಅರ್ಜಿ ತಿರಸ್ಕೃತವಾದ ಕಾರಣಕ್ಕೆ ಮಂಗಳವಾರ ವಿನಯ್ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ. ಸುಪ್ರೀಂ ನ್ಯಾಯಮೂರ್ತಿ ಆರ್. ಭಾನುಮತಿ ನೇತೃತ್ವದ ಪೀಠವು ಅರ್ಜಿ ವಿಚಾರಣೆ ನಡೆಸಿ, ಈ ಆದೇಶ ನೀಡಿದೆ.