ETV Bharat / bharat

ಕಂದಹಾರ್‌ ವಿಮಾನ ಅಪಹರಣದ ಕಹಿ ನೆನಪಿಗೆ 20 ವರ್ಷ! - 20 years for Kandahar flight hijack,

1999ರಲ್ಲಿ ಕಂದಹಾರ್‌ ವಿಮಾನ ಅಪಹರಣ ಪ್ರಕರಣ ಎಂದೇ ಕರೆಯಲಾದ ಐಸಿ 814 ವಿಮಾನ ಅಪಹರಣ ಪ್ರಕರಣದ ನಂತರದ ದಿನಗಳಲ್ಲಿ ನಾವು ಯಾವ ಪಾಠ ಕಲಿತಿದ್ದೇವೆ ಎಂಬುದನ್ನು ವಿಶ್ಲೇಷಿಸುವ ಸಮಯವಿದು. ನೇಪಾಳದಿಮದ ಭಾರತಕ್ಕೆ ಹೊರಟಿದ್ದ ಏರ್‌ ಇಂಡಿಯಾ ವಿಮಾನವನ್ನು ಆಗ ತಾಲಿಬಾನ್‌ ಆಡಳಿತಕ್ಕೆ ಒಳಪಟ್ಟಿದ್ದ ಅಫ್ಘಾನಿಸ್ತಾನದ ಕಂದಹಾರ್‌ನಲ್ಲಿ ಇಳಿಸಿಕೊಂಡಿದ್ದ ಉಗ್ರರು 188 ಪ್ರಯಾಣಿಕರನ್ನು ಒತ್ತೆಯಾಳಾಗಿಸಿಕೊಂಡು ಭಾರತದ ಜೈಲಿನಿಂದ ಮೂವರು ಕುಖ್ಯಾತ ಉಗ್ರರನ್ನು ಬಿಡುಗಡೆ ಮಾಡಿಸಿಕೊಂಡಿದ್ದರು. ಈ ದುರ್ಘಟನೆ ಈಗಲೂ ಜನರ ಮನಸಿನಲ್ಲಿ ಅಚ್ಚಳಿಯದಂತೆ ಉಳಿದುಕೊಂಡೇ ಇದೆ.

Kandahar flight hijack, 20 years for Kandahar flight hijack, Kandahar flight hijack news, Kandahar flight hijack latest news, ಕಂದಹಾರ್‌ ವಿಮಾನ ಅಪಹರಣ, ಕಂದಹಾರ್‌ ವಿಮಾನ ಅಪಹರಣಕ್ಕೆ 20 ವರ್ಷಗಳು, ಕಂದಹಾರ್‌ ವಿಮಾನ ಅಪಹರಣ ಸುದ್ದಿ, ಕಂದಹಾರ್‌ ವಿಮಾನ ಅಪಹರಣ ಮಾಹಿತಿ,
ಸಾಂದರ್ಭಿಕ ಚಿತ್ರ
author img

By

Published : Dec 24, 2019, 7:16 PM IST

ಈ ಮೂವರು ಉಗ್ರರ ಪೈಕಿ ಇಬ್ಬರು ಇನ್ನೂ ಪಾಕಿಸ್ತಾನದಲ್ಲಿ ರಾಜಾರೋಷವಾಗಿ ತಿರುಗಾಡುತ್ತಲೇ ಇದ್ದಾರೆ. ಇವರೇ ಮುಷ್ತಾಖ್‌ ಅಹಮದ್‌ ಝರ್ಗಾರ್‌ ಅಲಿಯಾಸ್‌ ಮುಷ್ತಾಖ್ ಲತ್ರಮ್‌. ಈತ ಕಾಶ್ಮೀರ ಮೂಲಕ ಉಗ್ರ ಸಂಘಟನೆ ಅಲ್‌ ಉಮರ್ ಮುಜಾಹಿದೀನ್‌ ನೇತೃತ್ವ ವಹಿಸಿದ್ದಾನೆ. ಇನ್ನೊಬ್ಬ ಮೌಲಾನಾ ಮಸೂದ್ ಅಜರ್. ಈತ ಭಾರತದ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೆ ಜೈಶ್‌ ಎ ಮೊಹಮದ್ ಎಂಬ ಉಗ್ರ ಸಂಘಟನೆಯನ್ನೇ ಹುಟ್ಟುಹಾಕಿದ್ದಾನೆ. ಇನ್ನೊಬ್ಬ ಉಗ್ರ ಶೇಖ್‌ ಉಮರ್‌ ಇಂಗ್ಲೆಂಡ್ ಮೂಲದವನಾಗಿದ್ದ. ಈತನನ್ನು ಅಮೆರಿಕದ ಪತ್ರಕರ್ತ ಡೇನಿಯಲ್ ಪರ್ಲ್‌ ಅವರನ್ನು ಹತ್ಯೆಗೈದ ಆರೋಪದಲ್ಲಿ ಪಾಕಿಸ್ತಾನವೇ ಬಂಧಿಸಿತ್ತು. ಕೊನೆಗೆ ಪಾಕಿಸ್ತಾನದ ನ್ಯಾಯಾಲಯ ಈತನಿಗೆ ಮರಣದಂಡನೆ ವಿಧಿಸಿ ಆದೇಶ ಹೊರಡಿಸಿದೆ. ಆದರೆ ಮುಷ್ತಾಖ್‌ ಅಹಮದ್ ಮತ್ತು ಮೌಲಾನಾ ಮಸೂದ್ ಅಜರ್ ಇನ್ನೂ ಪಾಕಿಸ್ತಾನದಲ್ಲಿದ್ದು, ಭಾರತದ ಮೇಲೆ ಉಗ್ರ ದಾಳಿಗೆ ಸಂಚು ರೂಪಿಸುತ್ತಲೇ ಇದ್ದಾರೆ.

ಐಸಿ 184 ವಿಮಾನವನ್ನು ಅಪಹರಣ ಮಾಡಿ ಜೈಲಿನಿಂದ ಬಿಡಿಸಿಕೊಂಡ ನಂತರದಿಂದಲೂ ಮುಷ್ತಾಕ್‌ ಹೊರಗೆ ಕಾಣಿಸಿಕೊಂಡಿಲ್ಲ. ಅಷ್ಟೇ ಅಲ್ಲ, ಆತ ಬಹಿರಂಗವಾಗಿ ಯಾವುದೇ ಸಂಚು ಹೂಡಿಲ್ಲ. ಬದಲಿಗೆ ಇದಕ್ಕೆ ತದ್ವಿರುದ್ಧವಾಗಿ ಮಸೂದ್ ಅಜರ್‌ ಕಾರ್ಯನಿರ್ವಹಿಸುತ್ತಿದ್ದಾನೆ. ಈತ ಭಾರತದ ವಿರುದ್ಧ ಹಿಂದಿಗಿಂತಲೂ ಹೆಚ್ಚು ಸಕ್ರಿಯವಾಗಿ ದ್ವೇಷ ಹರಡುತ್ತಿದ್ದಾನೆ. ಅಷ್ಟೇ ಅಲ್ಲ, ಈತ ಉಗ್ರವಾದಕ್ಕೆ ಹೊಸ ರೂಪವನ್ನೇ ನೀಡಿ ಭಾರತದ ಮೇಲೆ ದಾಳಿಗೆ ಯುವಕರನ್ನು ಪ್ರಚೋದಿಸುತ್ತಿದ್ದಾನೆ. ಇದೇ ಉಗ್ರನೇ ಭಾರತದ ಸಂಸತ್ತಿನ ಮೇಲೆ ಮತ್ತು ಜಮ್ಮು ಕಾಶ್ಮೀರ ವಿಧಾನಸಭೆಯ ಮೇಲೆ ದಾಳಿ ನಡೆಸಿದ್ದ. ಜೈಲಿನಿಂದ ತಪ್ಪಿಸಿಕೊಂಡು ಹೋದ ನಂತರ ಈತ ಕಾಶ್ಮೀರದಲ್ಲಿ ಆತ್ಮಹತ್ಯೆ ದಾಳಿ ನಡೆಸುವ ಯೋಜನೆಯನ್ನೂ ರೂಪಿಸಿದ್ದ. ಅಲ್ಲಿಯವರೆಗೆ ಸೇನೆ ಹಾಗೂ ಜನರ ಮೇಲೆ ಬಾಂಬ್‌ ದಾಳಿಯಂತಹ ಸಂಚುಗಳನ್ನೇ ಉಗ್ರರು ರೂಪಿಸುತ್ತಿದ್ದರು. ಆದರೆ ಈತ ಮೊದಲ ಬಾರಿಗೆ ಆತ್ಮಹತ್ಯಾ ದಾಳಿ ನಡೆಸಿದ್ದ. ಈತನ ಸಂಚಿಗೆ ಶ್ರೀನಗರ ಹುಡುಗ ಅಫಾಖ್‌ ಅಹಮದ್‌ ಶಾ ಬಲಿಯಾಗಿದ್ದ. ಶ್ರೀನಗರದಲ್ಲಿರುವ ಬಾದಾಮಿಗಢ ಸೇನಾ ನೆಲೆಯ ಮೇಲೆ ಆತ್ಮಹತ್ಯೆ ಬಾಂಬರ್ ಬಳಸಿ ದಾಳಿ ನಡೆಸಿದ್ದ. ಆದರೆ ಈತನ ಸಂಚು ಯಶಸ್ವಿಯಾಗಲಿಲ್ಲ. ದಾಳಿ ವಿಫಲವಾಗಿತ್ತು.

ವಿಮಾನ ಅಪಹರಣ ಮಾಡಿ ಉಗ್ರರು ಬಿಡಿಸಿಕೊಳ್ಳುವುದಕ್ಕೂ ಮೊದಲು ಇವರು ಜೈಲಿನಿಂದ ಹೊರಬರಲು ಹಲವು ಉಪಾಯ ಮಾಡಿದ್ದರು. ಇದಕ್ಕೂ ಮೊದಲು ಜೈಲಿನಿಂದ ಪರಾರಿಯಾಗುವ ವಿಫಲ ಯತ್ನವೂ ನಡೆದಿತ್ತು. ಮಸೂದ್ ಅಜರ್‌ನ ಸೋದರ ಯೂಸುಫ್‌ ಈ ಎಲ್ಲ ಕೃತ್ಯದ ಸಂಚುಕೋರನಾಗಿದ್ದ. ಜೈಲಿನಿಂದ ಪರಾರಿಯಾಗುವ ಯೋಜನೆ ಹಾಗೂ ವಿಮಾನ ಅಪಹರಣ ಯೋಜನೆಯನ್ನು ರೂಪಿಸಿದ್ದೇ ಯೂಸೂಫ್ ಎನ್ನಲಾಗುತ್ತದೆ. ಮುಂಬೈನಿಂದ ಢಾಕಾಗೆ ವಿಮಾನವನ್ನು ತೆಗೆದುಕೊಂಡು ಹೋಗಿ ಅಲ್ಲಿಂದ ವಿಮಾನವನ್ನು ಅಪಹರಿಸುವ ಸಂಪೂರ್ಣ ಯೋಜನೆಯನ್ನು ಸುಮಾರು ಒಂದೂವರೆ ವರ್ಷಗಳ ಹಿಂದೆಯೇ ರೂಪಿಸಿದ್ದರು ಎನ್ನಲಾಗಿದೆ. ಈತನ ಸಂಚಿಗೆ ಎಲ್ಲ ಸಹಕಾರವನ್ನೂ ನೀಡಿದ್ದು ಭಾರತೀಯ ವ್ಯಕ್ತಿ ಅಬ್ದುಲ್‌ ಲತೀಫ್‌ ಎಂಬಾತ. ಈತನಿಗೆ ಉಳಿದುಕೊಳ್ಳಲು ವ್ಯವಸ್ಥೆ, ಹಣ, ಪಾಸ್‌ಪೋರ್ಟ್‌ ಮತ್ತು ಎಲ್ಲ ಅಗತ್ಯ ಸೌಕರ್ಯಗಳನ್ನೂ ಲತೀಫ್‌ ಕಲ್ಪಿಸಿದ್ದ ಎನ್ನಲಾಗಿದೆ.

ಕಠ್ಮಂಡುವಿನಲ್ಲಿರುವ ಭಾರತೀಯ ಗುಪ್ತಚರ ದಳ ಸಮಯಕ್ಕೆ ಸರಿಯಾಗಿ ಕ್ರಮ ತೆಗೆದುಕೊಂಡಿದ್ದರೆ ಈ ಇಡೀ ಅಪಹರಣ ಪ್ರಕರಣವನ್ನು ತಡೆಯಬಹುದಾಗಿತ್ತು. ಕಠ್ಮಂಡುವಿನಲ್ಲಿರುವ ಗುಪ್ತಚರ ದಳಕ್ಕೆ ತಕ್ಷಣವೇ ಮಾಹಿತಿ ನೀಡಲಾಗಿತ್ತಾದರೂ ಅದು ಸಮಯಕ್ಕೆ ಸರಿಯಾಗಿ ಕಾರ್ಯಪ್ರವೃತ್ತವಾಗಲಿಲ್ಲ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ, ನೇಪಾಳದ ಗುಪ್ತಚರ ದಳಕ್ಕೆ ಈ ಪ್ರಕರಣದ ಮಾಹಿತಿ ನೀಡುತ್ತಿದ್ದಂತೆಯೇ, ಇದು ಅಷ್ಟೇನೂ ಗಂಭೀರ ಪ್ರಕರಣವಲ್ಲ ಎಂದು ಹೇಳಿದ ರಾ ಅಧಿಕಾರಿಯೇ ಕೊನೆಗೆ ಪ್ರಯಾಣಿಕರಾಗಿ ವಿಮಾನದಲ್ಲಿ ಕುಳಿತಿದ್ದರು. ಇದೇ ರಾ ಅಧಿಕಾರಿಯ ಪತ್ನಿ ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಕಚೇರಿಯಲ್ಲಿನ ಪ್ರಭಾವಿ ಅಧಿಕಾರಿಯ ಆತ್ಮೀಯ ಸಂಬಂಧಿಯೂ ಆಗಿದ್ದರು ಎಂಬುದು ಆಘಾತಕಾರಿ ಅಂಶವೂ ಹೌದು.

ವಿಮಾನದಲ್ಲಿ ಇಂಧನ ಕಡಿಮೆ ಇದೆ ಎಂಬುದನ್ನು ಕಂಡುಕೊಂಡ ಪೈಲಟ್‌, ಅಪಹರಣವಾದ ವಿಮಾನವನ್ನು ಅಮೃತಸರ ಸೇನಾ ನೆಲೆಯಲ್ಲಿ ಇಳಿಸಿದ್ದರು. ಈ ಸಮಯದಲ್ಲೇ ಅಪಹರಣಕಾರರನ್ನು ಹೆಡೆಮುರಿ ಕಟ್ಟಬಹುದಾಗಿತ್ತು. ಆದರೆ ಪ್ರಯಾಣಿಕರ ಸೋಗಿನಲ್ಲಿ ರಾ ಅಧಿಕಾರಿಯೇ ಇದ್ದುದರಿಂದ ಈ ಪ್ರಯತ್ನ ಯಾವುದೂ ಯಶಸ್ವಿಯಾಗಲಿಲ್ಲ. ಯಾಕೆಂದರೆ, ರಾ ಅಧಿಕಾರಿ ಸುರಕ್ಷಿತವಾಗಿ ವಾಪಸಾಗಬೇಕು ಎಂದು ಗುಪ್ತಚರ ಸಂಸ್ಥೆ ರಾ ವಿಶೇಷವಾಗಿ ಬಯಸಿತ್ತು. ರಾ ಸೇನಾ ಕಾರ್ಯಾಚರಣೆಯನ್ನು ನಡೆಸಲು ಬಯಸದೇ ಇದ್ದುದರಿಂದ ವಿಮಾನವನ್ನು ಅಮೃತಸರ ಸೇನಾ ನೆಲೆಯಿಂದ ಹೊರಡಲು ಅನುಮತಿ ನೀಡಲಾಗಿತ್ತು ಎಂದು ಹೇಳಲಾಗಿದೆ. ಒಂದು ವೇಳೆ ಈ ಸೇನಾ ನೆಲೆಯಲ್ಲೇ ಸೇನಾ ಕಾರ್ಯಾಚರಣೆಯನ್ನು ಆರಂಭಿಸಿ, ವಿಮಾನವನ್ನು ಬಿಡದೇ ಇದ್ದರೆ ಈ ಘಟನೆ ಇಷ್ಟು ಗಂಭೀರ ಸ್ವರೂಪವನ್ನು ತಾಳುತ್ತಿರಲಿಲ್ಲವೇನೋ. ಆದರೆ ಏರ್ ಟ್ರಾಫಿಕ್‌ನಿಂದ ಅನುಮತಿ ಲಭ್ಯವಾಗದ ಹಿನ್ನೆಲೆಯಲ್ಲಿ ಗಡಿಬಿಡಿಯಲ್ಲಿ ವಿಮಾನವನ್ನು ಅಮೃತಸರ ಸೇನಾ ನೆಲೆಯಿಂದ ಟೇಕ್‌ ಆಫ್‌ ಮಾಡಲಾಗಿತ್ತು. ಅಷ್ಟೇ ಅಲ್ಲ, ಇಲ್ಲಿ ಇಂಧನ ಮರುಪೂರಣ ಮಾಡಲೂ ಅವಕಾಶ ನೀಡಲಿಲ್ಲ. ಹೀಗಾಗಿ ಉಗ್ರರು ಅನಿವಾರ್ಯವಾಗಿ ಪಾಕಿಸ್ತಾನದ ಲಾಹೋರ್‌ನಲ್ಲಿ ವಿಮಾನವನ್ನು ಲ್ಯಾಂಡ್‌ ಮಾಡಿದ್ದರು. ಇಲ್ಲೇ ಅಪಹರಣಕಾರರು ವಿಮಾನಕ್ಕೆ ಇಂಧನ ತುಂಬಿಸಿಕೊಂಡರು.

ಕಂದಹಾರ್‌ನಲ್ಲಿ ಐಸಿ 184 ವಿಮಾನ ಅಪಹರಣದ ಒಟ್ಟು ಪ್ರಕರಣದಲ್ಲಿ ಹಲವು ಸಂಗತಿಗಳು ಅನಾವರಣಗೊಂಡವು. ಜಗತ್ತಿನ ವಿವಿಧ ದೇಶಗಳ ಉಗ್ರ ಸಂಘಟನೆಗಳು ಮತ್ತು ಕಾಶ್ಮೀರದ ಉಗ್ರ ಸಂಘಟನೆಗಳ ಮಧ್ಯೆ ಯಾವ ಯಾವ ಸಂಬಂಧವಿದೆ ಮತ್ತು ಯಾವ ಉಗ್ರರಿಗೆ ಇಲ್ಲಿ ಸಂಪರ್ಕವಿದೆ ಎಂಬುದು ಈ ಘಟನೆಯ ಮೂಲಕ ಜಗಜ್ಜಾಹೀರಾಯಿತು. ಈ ಪೈಕಿ ಮಹತ್ವದ್ದೆಂದರೆ ಆಫ್ಘನ್‌ ತಾಲಿಬಾನ್‌ ಮತ್ತು ತಾಲಿಬಾನ್‌ನ ಉನ್ನತ ಮುಖಂಡರು ಕಾಶ್ಮೀರದ ಉಗ್ರ ಸಂಘಟನೆಗಳ ಮುಖಂಡರೊಂದಿಗೆ ನೆರ ಸಂಪರ್ಕದಲ್ಲಿದ್ದರು ಹಾಗೂ ಇದಕ್ಕೆ ಐಎಸ್‌ಐ ನೆರವೂ ಇತ್ತು ಎಂಬುದು ಇಡೀ ಜಗತ್ತಿಗೆ ಸಾಬೀತಾಯಿತು. ಎರಡನೆಯ ಸಂಗತಿಯೆಂದರೆ, ಕಾಶ್ಮೀರ ಮತ್ತು ಇತರ ಭಾಗಗಳಲ್ಲಿ ಉಗ್ರವಾದವನ್ನು ಬೆಳೆಸುವಲ್ಲಿ ಮತ್ತು ಯೋಜನೆ ರೂಪಿಸುವಲ್ಲಿ ಮಸೂದ್ ಅಜರ್ ಮಹತ್ವದ ಪಾತ್ರ ವಹಿಸಿದ್ದಾನೆ ಎಂಬುದು ಸಾಬೀತಾಯಿತು. ಕಂದಹಾರ್‌ ವಿಮಾನ ಅಪಹರಣ ಪ್ರಕರಣದಲ್ಲಿ 1999ರಲ್ಲಿ ಬಿಡುಗಡೆಯಾಗುತ್ತಿದ್ದಂತೆಯೇ ಪಾಕಿಸ್ತಾನಕ್ಕೆ ತೆರಳಿದ ಈತ ಅಲ್ಲಿ ಜೈಶ್‌ ಎ ಮೊಹಮದ್‌ ಎಂಬ ಉಗ್ರ ಸಂಘಟನೆಯನ್ನು ಹುಟ್ಟುಹಾಕಿ, ಈ ಸಂಘಟನೆಯ ಮೂಲಕ ಭಾರತದ ವಿರುದ್ಧ ಉಗ್ರ ಚಟುವಟಿಕೆಯನ್ನು ಶುರುವಿಟ್ಟುಕೊಂಡಿದ್ದಾನೆ.

ಅಜರ್‌ ಮಸೂದ್ ಪಾಕಿಸ್ತಾನದ ವಾಯವ್ಯ ಪ್ರಾಂತ್ಯ ಅಂದರೆ ನಾರ್ತ್‌ ವೆಸ್ಟ್‌ ಫ್ರಂಟಿಯರ್ ಪ್ರಾವಿನ್ಸ್ (ಎನ್‌ಡಬ್ಲ್ಯೂಎಫ್‌ಪಿ) ಹಾಗೂ ಬಾಲಕೋಟ್‌ನಲ್ಲಿ ತನ್ನ ನೆಲೆ ಸ್ಥಾಪಿಸಿಕೊಂಡ. ಯಾಕೆಂದರೆ ಭಾರತದ ಗುಪ್ತಚರ ದಳವು ಸಾಮಾನ್ಯವಾಗಿ ಇಸ್ಲಾಮಾಬಾದ್‌ ಅಥವಾ ಮುಜಫರಾಬಾದ್‌ನಲ್ಲಿ ಹೆಚ್ಚಿನ ಗಮನ ಹರಿಸುತ್ತದೆ. ಇಸ್ಲಾಮಾಬಾದ್ ಪಾಕಿಸ್ತಾನದ ರಾಜಧಾನಿಯಾದರೆ, ಪಾಕಿಸ್ತಾನದಲ್ಲಿ ಉಗ್ರರಿಗೆ ರಾಜಧಾನಿ ಮುಜಫರಾಬಾದ್‌ ಆಗಿದೆ. ಆದರೆ ಈತ ಈ ಎರಡೂ ಪ್ರದೇಶಗಳಿಂದ ದೂರದಲ್ಲಿರುವ ಬಾಲಕೋಟ್‌ನಲ್ಲಿ ತನ್ನ ನೆಲೆ ಸ್ಥಾಪಿಸಿಕೊಂಡ.

ಮಸೂದ್‌ ಅಜರ್‌ನ ಉಗ್ರ ಸಂಘಟನೆಯು ಕೇವಲ ಉಗ್ರವಾದವನ್ನಷ್ಟೇ ಪ್ರತಿಪಾದಿಸುವುದಿಲ್ಲ. ಈತನ ಉಗ್ರ ಸಂಘಟನೆ ಇಸ್ಲಾಂ ಪ್ರಚಾರವನ್ನು ಮುನ್ನೆಲೆಯಲ್ಲಿಟ್ಟುಕೊಂಡು ಅದರ ಹಿಂದೆ ಉಗ್ರವಾದ ನಡೆಸುತ್ತದೆ. ಇತರ ಸಂಘಟನೆಗಳಾದ ಹಿಜ್ಬುಲ್ ಮುಜಾಹಿದೀನ್, ಅಲ್‌ ಉಮರ್, ಜಾಮಿಯತ್‌ ಅಲ್‌ ಮುಜಾಹಿದೀನ್ ರೀತಿಯ ಸಂಘಟನೆಗಳು ಕೇವಲ ಉಗ್ರವಾದವನ್ನೇ ತಮ್ಮ ಮುನ್ನೆಲೆಯನ್ನಾಗಿಸಿಕೊಂಡಿವೆ. ಇದು ಈಗಿನ ಐಸಿಸ್‌ ರೀತಿಯಲ್ಲೇ ಕಾರ್ಯಾಚರಣೆ ನಡೆಸುತ್ತಿತ್ತು. ಧರ್ಮದ ಬೋಧನೆಗಳ ಮೂಲಕ ಉಗ್ರವಾದವನ್ನು ತಲೆತುಂಬುವ ಈ ಸಿದ್ಧಾಂತ ಭಾರತಕ್ಕೆ ಅತ್ಯಂತ ದೊಡ್ಡ ಗಂಡಾಂತರವಾಗಿದೆ. ಈತನ ಸಂಘಟನೆಯ ಬಹುತೇಕ ಉಗ್ರರು ವಹಾಬಿ ಶಾಲೆಗಳಲ್ಲಿ ಕಲಿತವರೇ ಆಗಿರುತ್ತಾರೆ. ಈ ಶಾಲೆಗಳಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆಯೇ ಇಲ್ಲ. ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಹೊಂದಿರುವವರ ಮೇಲೆ ಕರುಣೆಯನ್ನೂ ತೋರಿಸ ಬಾರದು ಎಂದು ಈ ವಹಾಬಿ ಶಾಲೆಗಳಲ್ಲಿ ಬೋಧಿಸಲಾಗುತ್ತದೆ.

ಅಜಾದ್ ಮತ್ತು ಆತನ ಸಂಘಟನೆಯ ಸದಸ್ಯರು ಉಗ್ರರಿಗೆ ತರಬೇತಿ ನೀಡುತ್ತಾರೆ. ಈತನ ಸಂಘಟನೆಯ ಪ್ರಚಾರಕರೇ ಈ ತರಬೇತಿ ನೀಡುವ ಮುಂದಾಳುಗಳಾಗಿರುತ್ತಾರೆ. ಈವರೆಗೆ ಅತ್ಯಂತ ಅಮಾನವೀಯ, ಹೇಯ ದಾಳಿ ನಡೆಸಿದ ಬಹುತೇಕ ಉಗ್ರರಿಗೆ ಈ ಪ್ರಚಾರಕರೇ ತರಬೇತಿ ನೀಡಿದ್ದಾರೆ. ಈಗ ಅಜರ್‌ ತುಂಬಾ ಅನಾರೋಗ್ಯ ಪೀಡಿತನಾಗಿದ್ದು, ಉಗ್ರ ಸಂಘಟನೆಯ ಯಾವ ಚಟುವಟಿಕೆಯಲ್ಲೂ ಭಾಗವಹಿಸುತ್ತಿಲ್ಲ ಎಂದು ಹೇಳಲಾಗಿದೆ. ಆದರೆ ಈತ ಹುಟ್ಟುಹಾಕಿದ ಉಗ್ರ ಸಂಘಟನೆ ಈಗಾಗಲೇ ಉಗ್ರವಾದಕ್ಕೆ ಹೊಸ ವಿಧಾನವನ್ನು ಕಲಿಸಿಕೊಟ್ಟಿದ್ದು, ಜಿಹಾದ್ ಎಂಬ ಇಸ್ಲಾಂ ಮೂಲಭೂತವಾದಕ್ಕೆ ಅಡಿಪಾಯವನ್ನು ಹಾಕಿಕೊಟ್ಟಿದೆ.

1999 ಡಿಸೆಂಬರ್ 24 ರಂದು ಐಸಿ 184 ವಿಮಾನದ ಅಪಹರಣ ಪ್ರಕರಣಕ್ಕೆ ಸಾಕ್ಷಿಯಾಗಿದ್ದವರಿಗೆ, ಇಂತಹ ದುಷ್ಟ ಶಕ್ತಿಗಳಿಗೆ ಅವಕಾಶ ಮಾಡಿಕೊಡದೇ ಇರುವುದು ಎಷ್ಟು ಪ್ರಮುಖ ಸಂಗತಿ ಎಂಬುದು ಚೆನ್ನಾಗಿಯೇ ತಿಳಿದಿರುತ್ತದೆ. 7 ದಿನಗಳವರೆಗೆ ನಡೆದ ಈ ಅಪಹರಣ ಪ್ರಕರಣದಲ್ಲಿ ವಿಮಾನದಲ್ಲಿ ಇದ್ದವರ ನೋವನ್ನು ನಿವಾರಿಸಲು ಭಾರತಕ್ಕೆ ದಶಕಗಳೇ ಬೇಕಾಗಬಹುದು. ಮಸೂದ್ ಅಜರ್‌ನಂತಹ ಉಗ್ರರನ್ನು ನ್ಯಾಯಾಂಗ ವ್ಯವಸ್ಥೆಯ ಅಡಿಯಲ್ಲಿ ತಂದಾಗಲೇ ಇವರ ನೋವು ಹಾಗೂ ಆಘಾತವನ್ನು ಕಡಿಮೆ ಮಾಡಬಹುದು. ಮಸೂದ್ ಅಜರ್ ಈಗಲೂ ಭಾರತೀಯ ಸೇನೆ ಮತ್ತು ಗುಪ್ತಚರ ದಳದಿಂದ ತಪ್ಪಿಸಿಕೊಂಡಿದ್ದಾನೆ. ಈತನನ್ನು ಹತ್ಯೆಗೈಯುವ ಹಲವು ಪ್ರಯತ್ನಗಳನ್ನು ಗುಪ್ತಚರ ದಳ ಮತ್ತು ಸೇನೆ ಈವರೆಗೆ ನಡೆಸಿವೆ. ಆದರೆ ಈತ ಈ ಎಲ್ಲ ಪ್ರಯತ್ನಗಳಿಂದಲೂ ಬಚಾವಾಗಿದ್ದಾನೆ. 2018ರಲ್ಲಿ ಅತ್ಯಂತ ಪ್ರಮುಖ ಹಾಗೂ ಜನಮೆಚ್ಚುಗೆ ಗಳಿಸಿದ ಬಾಲಕೋಟ್‌ ದಾಳಿ ಕೂಡ ಅಜರ್‌ ಹತ್ಯೆಯ ಉದ್ದೇಶವನ್ನೇ ಹೊಂದಿತ್ತು. ಅಲ್ಲದೆ, ಬಾಲಕೋಟ್‌ನಲ್ಲಿ ಈತನ ನೆಲೆಯನ್ನು ಧ್ವಂಸ ಮಾಡುವ ಉದ್ದೇಶವನ್ನೂ ಇದು ಹೊಂದಿತ್ತು. ಈತನನ್ನು ಅಂತಾರಾಷ್ಟ್ರೀಯ ಉಗ್ರ ಎಂದು ಘೋಷಿಸುವ ಬಗ್ಗೆ ಭಾರತ ನಿರಂತರ ಪ್ರಯತ್ನ ನಡೆಸುತ್ತಲೇ ಇದೆ. ಆದರೆ ಚೀನಾ ಪ್ರತಿ ಬಾರಿಯೂ ಭಾರತದ ಈ ಪ್ರಯತ್ನಕ್ಕೆ ವಿವಿಧ ನೆಪಗಳನ್ನು ಒಡ್ಡಿ ತಣ್ಣಿರೆರಚುತ್ತಲೇ ಇದೆ. ಹೀಗಾಗಿ ಈತ ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಒಂದು ಅಸ್ತ್ರವಾದಂತಾಗಿದೆ. ಈತನ ಮೂಲಕ ಪಾಕಿಸ್ತಾನ ತನ್ನ ರಾಜಕೀಯ ಹಿತಾಸಕ್ತಿಗಳನ್ನು ತೀರಿಸಿಕೊಳ್ಳುತ್ತಿದೆ. ಅಜರ್‌ನನ್ನು ನ್ಯಾಯಾಂಗದ ಕುಣಿಕೆಗೆ ಏರಿಸಲು ಭಾರತ ಸಾಕಷ್ಟು ಶ್ರಮ ವಹಿಸಿದೆ. ಆದರೆ ಈ ನಿಟ್ಟಿನಲ್ಲಿ ಭಾರತ ಇನ್ನೂ ಯಶಸ್ವಿಯಾಗಿಲ್ಲ.

ದೇಶದ ಭದ್ರತೆ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ಇರುವುದು ಮತ್ತು ಒಂದು ಹುಸಿ ಕರೆಯಾಗಿದ್ದರೂ ಸಹ, ಅದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುವುದು ಅಗತ್ಯವಿದೆ. ವ್ಯಕ್ತಿ ಅಥವಾ ಸಂಸ್ಥೆಗೆ ಭೀತಿಯಿದೆ ಎಂಬ ಯಾವುದೇ ಮಾಹಿತಿಯನ್ನೂ ಗುಪ್ತಚರ ಸಂಸ್ಥೆಗಳು ಮತ್ತು ಸಂಬಂಧಪಟ್ಟ ಕಾನೂನು ಜಾರಿ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಬೇಕು. ಭೀತಿ ಕುರಿತ ಮಾಹಿತಿಯನ್ನು ಪಡೆಯುತ್ತಿದ್ದಂತೆಯೇ, ಅವುಗಳು ಹುಸಿಯೇ ಅಲ್ಲವೇ ಎಂದು ಪರಿಶೀಲಿಸಿ ಹುಸಿ ಅಲ್ಲದಿದ್ದರೆ, ಸಂಬಂಧಿತ ಇಲಾಖೆ ಮತ್ತು ಅಧಿಕಾರಿಗಳಿಗೆ ರವಾನಿಸಬೇಕು. ಈ ಪ್ರಕ್ರಿಯೆಯನ್ನೇ ಕಂದಹಾರ್ ವಿಮಾನ ಅಪಹರಣ ಪ್ರಕರಣಕ್ಕೂ ಮೊದಲಿನಿಂದಲೂ ನಡೆಸಿಕೊಂಡು ಬರಲಾಗುತ್ತಿತ್ತು. ಆದರೂ ಈ ಪ್ರಕರಣ ಸಂಭವಿಸಿತು. ಈ ಭೀತಿ ಕುರಿತ ಮಾಹಿತಿಯು ನೇಪಾಳ ರಾ ವಿಭಾಗದ ಸಂಬಂಧಿತ ಅಧಿಕಾರಿಗೆ ಮೊದಲೇ ತಲುಪಿದ್ದರೆ ಮತ್ತು ಅವರು ಅದನ್ನು ಗಂಭೀರವಾಗಿ ಪರಿಗಣಿಸಿದ್ದರೆ, ಇಡೀ ಪರಿಸ್ಥಿತಿಯೇ ಬದಲಾಗುತ್ತಿತ್ತು.

ಉಗ್ರರನ್ನು ಸೆರೆಹಿಡಿದು ನ್ಯಾಯ ವ್ಯವಸ್ಥೆಯಡಿ ಸೂಕ್ತ ಶಿಕ್ಷೆ ಕೊಡಿಸಬಹುದಾದ ಸಾಧ್ಯತೆಯಿತ್ತು. ಅಷ್ಟೇ ಅಲ್ಲ, ಅದರ ನಂತರ ನಡೆದ ಹಲವು ಘಟನೆಗಳನ್ನು ತಡೆಯುವ ಅವಕಾಶಗಳೂ ಭಾರತದ ಗುಪ್ತಚರ ಸಂಸ್ಥೆ ಮತ್ತು ಸೇನೆಗೆ ಲಭ್ಯವಾಗುತ್ತಿತ್ತು. ಒಂದು ವೇಳೆ, ಉಗ್ರರನ್ನು ಬಿಡುಗಡೆ ಮಾಡದೇ ಇದ್ದರೆ, ಸಂಸತ್ತಿನ ಮೇಲೆ ಮಸೂದ್‌ ಅಜರ್ ದಾಳಿ ನಡೆಸುವ ಅವಕಾಶ ಇರುತ್ತಿರಲಿಲ್ಲ. ಅಷ್ಟೇ ಅಲ್ಲ, ಬಾಲಕೋಟ್‌ ದಾಳಿ ಮಾಡುವ ಪ್ರಮೇಯವೂ ಭಾರತಕ್ಕೆ ಬರುತ್ತಿರಲಿಲ್ಲ. ಜಾಗತಿಕ ಉಗ್ರ ಎಂದು ಅಜರ್‌ನನ್ನು ಘೋಷಿಸುವ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಪ್ರಯತ್ನ ನಡೆಸುವ ಸನ್ನಿವೇಶ ಸೃಷ್ಟಿಯಾಗುತ್ತಲೇ ಇರಲಿಲ್ಲ. ಒಂದು ಸಣ್ಣ ನಿರ್ಲಕ್ಷ್ಯ, ವಿಳಂಬ ಮತ್ತು ಪರಿಣಿತಿಯ ಕೊರತೆಯಿಂದಾಗಿ ಅಜರ್‌ನಂತಹವರನ್ನು ಇನ್ನು ಸೃಷ್ಟಿಸುವುದಕ್ಕೆ ಅವಕಾಶ ಕೊಡದಂತಹ ಪರಿಸ್ಥಿತಿಯನ್ನು ನಾವು ನಿರ್ಮಿಸಬೇಕಿದೆ.

ಲೇಖಕರು: ಬಿಲಾಲ್‌ ಭಟ್‌

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.