ನವದೆಹಲಿ: ಆಫ್ರಿಕಾದ ಪಶ್ಚಿಮ ಕರಾವಳಿಯಲ್ಲಿ ವಾಣಿಜ್ಯ ಹಡಗಿನಲ್ಲಿದ್ದ 20 ಮಂದಿ ಭಾರತೀಯರನ್ನು ಭಾನುವಾರ ಕಡಲ್ಗಳ್ಳರು ಅಪಹರಿಸಿದ್ದು, ಈ ಬಗ್ಗೆ ಭಾರತ ಸರ್ಕಾರವು ನೈಜೀರಿಯಾದ ಅಧಿಕಾರಿಗಳೊಂದಿಗೆ ಚರ್ಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್, ಡಿಸೆಂಬರ್ 15ರಂದು ಆಫ್ರಿಕಾದ ಪಶ್ಚಿಮ ಕರಾವಳಿಯಲ್ಲಿ ಎಂ ಟಿ ಡ್ಯೂಕ್ ಹಡಗಿನಿಂದ 20 ಭಾರತೀಯ ಸಿಬ್ಬಂದಿಯನ್ನು ಅಪಹರಿಸಿರುವ ಬಗ್ಗೆ ನಮಗೆ ಕಳವಳವಿದೆ. ಈ ವರ್ಷ ಈ ಪ್ರದೇಶದಲ್ಲಿ ನಡೆದ ಮೂರನೇ ಘಟನೆ ಇದಾಗಿದ್ದು, ಭಾರತೀಯ ಪ್ರಜೆಗಳ ಮೇಲೆ ಇದು ಪರಿಣಾಮ ಬೀರಲಿದೆ. ಅಪಹರಣಕ್ಕೊಳಗಾದವರ ರಕ್ಷಣೆ ಮುಖ್ಯವಾಗಿದ್ದು, ಅಬುಜಾದಲ್ಲಿನ ನಮ್ಮ ಮಿಷನ್, ನೈಜೀರಿಯಾದ ಅಧಿಕಾರಿಗಳೊಂದಿಗೆ ಮತ್ತು ನೆರೆಯ ರಾಷ್ಟ್ರಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಘಟನೆಯನ್ನು ಗಮನಕ್ಕೆ ತೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ.
-
India shares 'concerns' with Nigeria over kidnapping of 20 Indians aboard commercial vessel
— ANI Digital (@ani_digital) December 16, 2019 " class="align-text-top noRightClick twitterSection" data="
Read @ANI Story | https://t.co/t0J0FPgzEu pic.twitter.com/RjvlulrgQ8
">India shares 'concerns' with Nigeria over kidnapping of 20 Indians aboard commercial vessel
— ANI Digital (@ani_digital) December 16, 2019
Read @ANI Story | https://t.co/t0J0FPgzEu pic.twitter.com/RjvlulrgQ8India shares 'concerns' with Nigeria over kidnapping of 20 Indians aboard commercial vessel
— ANI Digital (@ani_digital) December 16, 2019
Read @ANI Story | https://t.co/t0J0FPgzEu pic.twitter.com/RjvlulrgQ8
ಡಿ.5ರಂದು ನೈಜೀರಿಯಾದ ಕಡಲ ತೀರದ ಭಾಗದಲ್ಲಿ ಹಾಂಗ್ ಕಾಂಗ್ ಧ್ವಜಾರೋಹಣ ಮಾಡಿದ್ದ ನೇವ್ ಕಾನ್ಸ್ಟೆಲ್ಲೇಷನ್ ಹಡಗು ಮತ್ತು 18 ಮಂದಿ ಭಾರತೀಯರನ್ನು ಕಡಲ್ಗಳ್ಳರು ಅಪಹರಿಸಿದ್ದರು. ಈ ಘಟನೆ ನಡೆದ 10 ದಿನಗಳ ಬೆನ್ನಲ್ಲೇ ಮತ್ತೆ ಕಡಲ್ಗಳ್ಳರು ಅಟ್ಟಹಾಸ ಮೆರೆದಿರುವುದು ಆತಂಕ ಸೃಷ್ಟಿಸಿದೆ.