ಮುಂಬೈ: ರಾಷ್ಟ್ರೀಯ ತನಿಖಾ ದಳ ಎನ್ಐಎ ಪುಣೆಯ ಕೊಂಡ್ವಾ, ಯೆರವಾಡಾದ ನಬಿಲ್ ಖತ್ರಿ (27) ಮತ್ತು ಸಾದಿಯಾ ಅನ್ವರ್ ಶೇಖ್ ಅವರನ್ನು ಬಂಧಿಸಿದೆ. ಬಂಧಿತರಿಂದ ತನಿಖಾ ದಳಕ್ಕೆ ಮಹತ್ವದ ಮಾಹಿತಿ ಬಹಿರಂಗವಾಗಿದೆ.
ಪುಣೆಯ ಕೊಂಡ್ವಾ ಪ್ರದೇಶದಲ್ಲಿ ಜಿಮ್ ನಡೆಸುತ್ತಿರುವ ನಬಿಲ್ ಮತ್ತು ಬಾರಾಮತಿಯಲ್ಲಿ ಜರ್ನಲಿಸಂ ದ್ವಿತೀಯ ವರ್ಷದ ವಿದ್ಯಾರ್ಥಿ ಇಸ್ಲಾಮಿಕ್ ಸ್ಟೇಟ್ ಆಫ್ ಖೊರಾಸಾನ್ ಜತೆ ಸಂಪರ್ಕ ಹೊಂದಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಈ ಸಂಬಂಧ 2020 ರ ಮಾರ್ಚ್ 8 ರಂದು ದೆಹಲಿ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣವೂ ದಾಖಲಾಗಿದೆ.
ಜಹಾನ್ಜೆಬ್ ಸಮಿ ವಾನಿ ಮತ್ತು ಅವರ ಪತ್ನಿ ಹಿನಾ ಬಶೀರ್ ಬೇಗ್ ಅವರನ್ನು ಬಂಧಿಸಿದ ನಂತರ ಈ ಪ್ರಕರಣ ದಾಖಲಿಸಲಾಗಿದೆ. ಇಬ್ಬರೂ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ನೊಂದಿಗೆ ನಂಟು ಹೊಂದಿರುವುದು ಗೊತ್ತಾಗಿದೆ. ಇದು ಐಸಿಸ್ನ ಸಹ ಸಂಘಟನೆಯಾಗಿದೆ. ಈ ಇಬ್ಬರು ಈಗ ತಿಹಾರ ಜೈಲಿನ ಪ್ರತ್ಯೇಕ ಸೆಲ್ನಲ್ಲಿದ್ದಾರೆ.
ಸಾದಿಯಾ ಶೇಖ್, ಜಹಾನ್ಜೆಬ್ ಸಮಿ ಮತ್ತು ಅವರ ಪತ್ನಿ ಹೀನಾ ಬಶೀರ್ ಬೇಗ್ ಜತೆ ಸಂಪರ್ಕದಲ್ಲಿದ್ದಾರೆ. ಇವರು ಭಾರತೀಯ ವಿರೋಧಿ ಚಟುವಟಿಕೆಗಳನ್ನ ನಡೆಸಲು ಯುವಕರ ಗುಂಪನ್ನ ಕಟ್ಟುವುದು ಇವರ ಕೆಲಸವಾಗಿದೆ. ಈ ಮೂಲಕ ದೇಶದಲ್ಲಿ ಅಶಾಂತಿ ಸೃಷ್ಟಿಸುವುದು ಇವರೆಲ್ಲರ ಕಾರ್ಯವಾಗಿದೆ. ಭಾರತದಲ್ಲಿ ಹತ್ಯೆಗಳನ್ನ ನಡೆಸುವ ಹೊಣೆಯನ್ನ ನಬಿಲ್ ಖತ್ರಿಗೆ ವಹಿಸಲಾಗಿತ್ತು. ಇನ್ನು ಸಾದಿಯಾ ಶೇಖ್ 2015 ರಿಂದ ಐಸಿಸ್ ಜತೆ ನಿರಂತರ ಸಂಪರ್ಕ ಹೊಂದಿದ್ದ ಎಂಬ ಮಾಹಿತಿ ವಿಚಾರಣೆ ವೇಳೆ ತಿಳಿದು ಬಂದಿದೆ.