ETV Bharat / bharat

ಪೊಲೀಸ್​ ಅಧಿಕಾರಿಗೆ ಪಾಕಿಸ್ತಾನದ ಪರ  ಸಂದೇಶ ರವಾನೆ: ಇಬ್ಬರ ಬಂಧನ

ಪಾಕಿಸ್ತಾನದ ಪರ ಘೋಷಣೆ ಮತ್ತು ನಿರ್ದಿಷ್ಟ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆಯ ಸಂದೇಶವನ್ನು, ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಅಮಿತ್ ಪಾಠಕ್‌ಗೆ ಕಳುಹಿಸಿದ ಹಿನ್ನೆಲೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ.

ದೇಶದ್ರೋಹದ ಆರೋಪದ
ದೇಶದ್ರೋಹದ ಆರೋಪದ
author img

By

Published : May 6, 2020, 3:15 PM IST

ಮೊರಾದಾಬಾದ್ (ಉತ್ತರಪ್ರದೇಶ): ದೇಶದ್ರೋಹದ ಆರೋಪದ ಮೇಲೆ ಓರ್ವ ವ್ಯಕ್ತಿ ಮತ್ತು ಆತನ ಸೋದರಳಿಯನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಪಾಕಿಸ್ತಾನದ ಪರ ಘೋಷಣೆ ಮತ್ತು ನಿರ್ದಿಷ್ಟ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆಯೊಂದಿಗೆ ಇವರಿಬ್ಬರು ವಾಟ್ಸ್‌ಆ್ಯಪ್‌ನಲ್ಲಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಅಮಿತ್ ಪಾಠಕ್​​ ಅವರಿಗೆ ಕಳುಹಿಸಿದ್ದರು. "ಪಾಕಿಸ್ತಾನ ಜಿಂದಾಬಾದ್" ಎಂಬ ಘೋಷಣೆಯೊಂದಿಗಿನ ಸಂದೇಶದಲ್ಲಿ ಪಾಕಿಸ್ತಾನ ಧ್ವಜವಿತ್ತು.

ಇವರ ಮೇಲೆ 153 ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 124 ಎ (ದೇಶದ್ರೋಹ), 295 (ಪೂಜಾ ಸ್ಥಳಗಳನ್ನು ಅಪವಿತ್ರಗೊಳಿಸುವುದು) ಮತ್ತು ಐಟಿ ಕಾಯ್ದೆಗೆ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಎಸ್‌ಎಸ್‌ಪಿ ಕಚೇರಿಯಲ್ಲಿರುವ ಸಾರ್ವಜನಿಕ ಸಂಪರ್ಕ ಅಧಿಕಾರಿ, ಇನ್ಸ್‌ಪೆಕ್ಟರ್ ಹರೇಂದ್ರ ಸಿಂಗ್, ಪೊಲೀಸ್ ಮುಖ್ಯಸ್ಥರು ಸಿವಿಲ್ ಲೈನ್ಸ್ ಸ್ಟೇಷನ್ ಹೌಸ್ ಅಧಿಕಾರಿಗೆ ಎಫ್‌ಐಆರ್ ದಾಖಲಿಸಲು ಮತ್ತು ಈ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ.

ಸ್ಟೇಷನ್ ಹೌಸ್ ಆಫೀಸರ್ (ಸಿವಿಲ್ ಲೈನ್ಸ್) ಇನ್ಸ್‌ಪೆಕ್ಟರ್ ನೇವಲ್ ಮಾರ್ವಾ ಅವರು ಸಂದೇಶ ಕಳುಹಿಸಿದವರ ಫೋನ್ ಸಂಖ್ಯೆಯನ್ನು ಕಣ್ಗಾವಲಿನಲ್ಲಿ ಇರಿಸಿ ಮಾಲೀಕರನ್ನು ಪತ್ತೆ ಹಚ್ಚಿದ್ದಾರೆ. ಸೋದರಳಿಯನ ಹೆಂಡತಿಯಿಂದ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ ಎಂದು ಎಸ್‌ಎಚ್‌ಒ ತಿಳಿಸಿದೆ. ಈ ಸಂದೇಶ ಕಳುಹಿಸಲು ಚಿಕ್ಕಪ್ಪ ನನ್ನ ಮೊಬೈಲ್​ ಬಳಸಿಕೊಂಡಿದ್ದಾರೆ ಎಂದು ವಿಚಾರಣೆ ವೇಳೆ ಸೋದರಳಿಯ ತಿಳಿಸಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.