ETV Bharat / bharat

ಕೊಯಿಕ್ಕೋಡ್​ನಲ್ಲಿ ಚಿನ್ನದ ಬೇಟೆ ; 2.3 ಕೆಜಿ ಬಂಗಾರ ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು!! - 2.3 ಕೆ.ಜಿ ಬಂಗಾರ ವಶ

ಮಹಿಳಾ ಪ್ರಯಾಣಿಕಳಿಂದ 1.8 ಕೆಜಿ ತೂಕದ ಚಿನ್ನ ವಶಪಡಿಸಿಕೊಳ್ಳಲಾಗಿದ್ದು, ಮೂವರು ಪುರುಷರಿಂದ ಕ್ರಮವಾಗಿ 380 ಗ್ರಾಂ, 390 ಗ್ರಾಂ, 387 ಗ್ರಾಂ ವಶಪಡಿಸಿಕೊಳ್ಳಲಾಗಿದೆ..

gold
ಚಿನ್ನ
author img

By

Published : Jul 12, 2020, 4:27 PM IST

ಮಲಪ್ಪುರಂ : ಕೇರಳದ ಕೊಯಿಕ್ಕೋಡ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 2.3 ಕೆಜಿಯಷ್ಟು ಚಿನ್ನ ವಶಪಡಿಸಿಕೊಂಡಿದ್ದಾರೆ.

ರಾಸ್ ಅಲ್ ಖೈಮಹ್​ನಿಂದ ಬರುತ್ತಿದ್ದ ಎಸ್‌ಜಿ 9026 ವಿಮಾನದಲ್ಲಿ ಬಂದ ನಾಲ್ಕು ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬಂಧಿತರಿಂದ ಸುಮಾರು 1.14 ಕೋಟಿ ರೂ. ಮಾರುಕಟ್ಟೆ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಮಹಿಳಾ ಪ್ರಯಾಣಿಕಳಿಂದ 1.8 ಕೆಜಿ ತೂಕದ ಚಿನ್ನ ವಶಪಡಿಸಿಕೊಳ್ಳಲಾಗಿದ್ದು, ಮೂವರು ಪುರುಷರಿಂದ ಕ್ರಮವಾಗಿ 380 ಗ್ರಾಂ, 390 ಗ್ರಾಂ, 387 ಗ್ರಾಂ ವಶಪಡಿಸಿಕೊಳ್ಳಲಾಗಿದೆ.

ಈ ಮಧ್ಯೆ, ಕೊಯಿಕ್ಕೋಡ್ ವಿಮಾನ ನಿಲ್ದಾಣದ ವಾಯು ಗುಪ್ತಚರ ಘಟಕವು ಮೂರು ವಿಭಿನ್ನ ಪ್ರಯಾಣಿಕರ ವಿರುದ್ಧ ಮೂರು ಪ್ರಕರಣ ದಾಖಲಿಸಿದ್ದು, ನಿನ್ನೆ ಕೊಲ್ಲಿ ಪ್ರದೇಶದಿಂದ ಬಂದವರಿಂದ ಸುಮಾರು 1.50 ಕೋಟಿ ರೂ. ಮೌಲ್ಯದ ಅಕ್ರಮ ಚಿನ್ನ ವಶಪಡಿಸಿಕೊಂಡಿದ್ದಾರೆ.

ರಾಸ್ ಅಲ್ ಖೈಮಹ್ (ಯುಎಇ)ದಿಂದ ಆಗಮಿಸಿದ ಅಬ್ದುಲ್ ಜಲೀಲ್ ಎಂಬ ಇನ್ನೊಬ್ಬ ಪ್ರಯಾಣಿಕ 2 ಕೆಜಿ ಚಿನ್ನವನ್ನು ಸಾಗಿಸುತ್ತಿದ್ದ. ಕತಾರ್‌ನ ದೋಹಾದಿಂದ ಆಗಮಿಸಿದ ಕೊಡುವಳ್ಳಿಯ ಮೊಹಮ್ಮದ್ ರಿಯಾಸ್ ಅವರು ಧರಿಸಿದ್ದ ಒಳ ಉಡುಪುಗಳಲ್ಲಿ ಅಡಗಿಸಿಟ್ಟಿದ್ದ ಸುಮಾರು 800 ಗ್ರಾಂ ತೂಕದ ಚಿನ್ನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.