ನವದೆಹಲಿ: 19 ವರ್ಷದ ಯುವಕ ತನ್ನ ಮಾದಕ ವ್ಯಸನಿ ಸಹೋದರನನ್ನು ಕೊಂದಿದ್ದ. ಮೃತನ ದೇಹವನ್ನು ಬೇರೆ ಕಡೆ ರವಾನೆ ಮಾಡಲು ತಂದೆಯೇ ಸಹಕರಿಸಿರುವ ವಿಲಕ್ಷಣ ಘಟನೆ ನಗರದಲ್ಲಿ ನಡೆದಿದೆ.
ಈಶಾನ್ಯ ದೆಹಲಿಯ ಕರಾವಾಲ್ ನಗರದಲ್ಲಿ ಈ ಘಟನೆ ನಡೆದಿದೆ. ಮಾದಕ ವ್ಯಸನಿಯಾಗಿದ್ದ ತನ್ನ ಅಣ್ಣನನ್ನು ಕೊಂದ 19 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶವವನ್ನು ವಿಲೇವಾರಿ ಮಾಡಲು ಸಹಾಯ ಮಾಡಿದ್ದಕ್ಕಾಗಿ ಆತನ ತಂದೆಯನ್ನೂ ಬಂಧಿಸಲಾಗಿದೆ.
ನಿತಿನ್ ಮತ್ತು ಚಂದರ್ ಪಾಲ್ (56) ಬಂಧಿತ ಮಗ ಹಾಗೂ ತಂದೆ. ಅಪರಾಧಕ್ಕೆ ಬಳಕೆ ಮಾಡಿದ್ದ ರಿವಾಲ್ವರ್‌ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.