ಪುಲ್ವಾಮಾ: ನಾನು ಭಯೋತ್ಪಾದನೆಗೆ ಸೇರುತ್ತಿದ್ದೇನೆ ಮತ್ತು ತನ್ನನ್ನು ಹುಡುಕಬೇಡಿ ಎಂದು ಪೋಷಕರಿಗೆ ಹೇಳಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ 18 ವರ್ಷದ ಯುವಕನನ್ನು ಇಲ್ಲಿನ ಅವಂತಿಪೋರಾದಲ್ಲಿ ಬಂಧಿಸಲಾಗಿದೆ.
ಭಾರತೀಯ ಸೇನೆಯ ಮಾಹಿತಿಯಂತೆ ಪಾಂಪೋರೆಯ ನಿವಾಸಿಯಾಗಿರುವ ಬಂಧಿತ ಯುವಕ ಸೆ.11ರಂದು ನಾಪತ್ತೆಯಾಗಿದ್ದ ಬಳಿಕ ಸೆ.13ರಂದು ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ಪೋಸ್ಟ್ ಮಾಡಿದ್ದ.
ನಾನು ಭಯೋತ್ಪಾದನೆ ಸಂಘಟನೆ ಸೇರುತ್ತಿದ್ದೇನೆ. ನನ್ನನ್ನು ಹುಡುಕಬೇಡಿ ಎಂದು ಪೋಷಕರಿಗೆ ಹೇಳಿದ್ದ ಆಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಯುವಕ ಸೆ.13ರಂದು ಪೋಸ್ಟ್ ಮಾಡಿದ್ದ. ಭಾರತೀಯ ಸೇನಾ ಅಧಿಕಾರಿಗಳು ಇದನ್ನು ಗಮನಿಸಿ, ಯುವಕನನ್ನು ಟ್ರೇಸ್ ಮಾಡಿ ಸೆ.29ರಂದು ಬಂಧಿಸಿದ್ದಾರೆ.
ಯುವಕನನ್ನು ಟ್ರೇಸ್ ಮಾಡಿ 18 ದಿನಗಳೊಳಗೆ ಬಂಧಿಸಿದ್ದಾಗಿ ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.