ETV Bharat / bharat

ಮಲೇಷ್ಯಾದಿಂದ ತಮಿಳುನಾಡಿಗೆ 177 ಮಂದಿ ವಾಪಸ್​, ಏರ್ಪೋರ್ಟ್‌ನಿಂದ ಕ್ವಾರಂಟೈನ್‌ಗೆ ಪಯಣ - ತಿರುಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಮಲೇಷ್ಯಾದ ಕೌಲಲಾಂಪುರದಿಂದ ಭಾರತೀಯರನ್ನು ತಮಿಳುನಾಡಿನ ತಿರುಚಿರಾಪಳ್ಳಿಗೆ ಕರೆತರಲಾಗಿದ್ದು, ಏಪೋರ್ಟ್​ನಲ್ಲೇ ಪ್ರಯಾಣಿಕರನ್ನು ಪರೀಕ್ಷಿಸಿ, ನಂತರ ಕ್ವಾರಂಟೈನ್​ ಕೇಂದ್ರಗಳಿಗೆ ಕರೆದೊಯ್ಯಲಾಗಿದೆ.

Vande Bharat Mission: 177 Indians nationals arrive in Tamil Nadu from Malaysia
ವಂದೇ ಭಾರತ್ ಮಿಷನ್: ಮಲೇಷ್ಯಾದಿಂದ 177 ಭಾರತೀಯರು ತಮಿಳುನಾಡಿಗೆ ವಾಪಾಸ್​
author img

By

Published : May 10, 2020, 1:24 PM IST

ತಿರುಚಿರಾಪಳ್ಳಿ(ತಮಿಳುನಾಡು): ಭಾರತ ಸರ್ಕಾರದ ಅತಿ ದೊಡ್ಡ ಏರ್​ಲಿಫ್ಟ್ ಕಾರ್ಯಾಚರಣೆ ವಂದೇ ಭಾರತ್ ಮಿಷನ್ ಅಡಿಯಲ್ಲಿ ಮಲೇಷ್ಯಾದ ಕೌಲಲಾಂಪುರದಿಂದ 177 ಭಾರತೀಯರನ್ನ ತಮಿಳುನಾಡಿನ ತಿರುಚಿರಾಪಳ್ಳಿಗೆ ಕರೆತರಲಾಗಿದೆ.

ಮಲೇಷ್ಯಾದಿಂದ ಹೊರಟ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ನಿನ್ನೆ ರಾತ್ರಿ 10:20ಕ್ಕೆ ತಿರುಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಏಪೋರ್ಟ್​ನಲ್ಲೇ ಪ್ರಯಾಣಿಕರನ್ನ ಪರೀಕ್ಷಿಸಿದ ನಂತರ ಅವರನ್ನು ಕ್ವಾರಂಟೈನ್​ ಕೇಂದ್ರಗಳಿಗೆ ಕರೆದೊಯ್ಯಲಾಗಿದೆ. ಇನ್ನು, ಜಿಲ್ಲಾಡಳಿತ ಸಾರಿಗೆ ವೆಚ್ಚವನ್ನು ಭರಿಸಲಿದ್ದು, ಹೋಟೆಲ್‌ಗಳಲ್ಲಿ​ ಉಳಿದುಕೊಳ್ಳಲು ತಗಲುವ ವೆಚ್ಚವನ್ನು ಪ್ರಯಾಣಿಕರು ಭರಿಸಬೇಕಿದೆ.

ಕೋವಿಡ್​-19 ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್​ ಕರೆತರುವ ಸಲುವಾಗಿ ಸರ್ಕಾರ ವಂದೇ ಭಾರತ್ ಮಿಷನ್ ಪ್ರಾರಂಭಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.