ETV Bharat / bharat

ಹುಟ್ಟು ಮತ್ತು ಸಾವುಗಳ ಬಗ್ಗೆ ಗಾಂಧಿ ನಿಲುಮೆ ಮತ್ತು ಸತ್ಯಾಗ್ರಹ

ಮಹಾತ್ಮ ಗಾಂಧೀಜಿಯ 150ನೇ ಹುಟ್ಟುಹಬ್ಬ ಆಚರಿಸಲು ಅಣಿಯಾಗುತ್ತಿದೆ.  ಈ ಸಂದರ್ಭದಲ್ಲಿ ಸಾವಿನ ಬಗ್ಗೆ  ಗಾಂಧೀಜಿಯವರ ನಿಲುವನ್ನ ತಿಳಿದುಕೊಳ್ಳೋದು ಉಚಿತವಾಗಿದೆ. ಜೀವನ ಮತ್ತು ಮರಣವನ್ನು ಶಾಶ್ವತ ಸತ್ಯವೆಂದು ಒಪ್ಪಿಕೊಂಡ ಬಾಪೂ ಎಲ್ಲ ರೀತಿಯ ಭಯಗಳಿಂದ ಮುಕ್ತರಾಗಿದ್ದರು.

ಹುಟ್ಟು ಮತ್ತು ಸಾವುಗಳ ಬಗ್ಗೆ ಗಾಂಧಿ ನಿಲುಮೆ ಮತ್ತು ಸತ್ಯಾಗ್ರಹ
author img

By

Published : Sep 18, 2019, 1:39 PM IST

ಹೈದರಾಬಾದ್​: ಮಹಾತ್ಮ ಗಾಂಧೀಜಿಯ 150ನೇ ಹುಟ್ಟುಹಬ್ಬ ಹಾಗೂ 70ನೇ ವಾರ್ಷಿಕೋತ್ಸವ ಆಚರಿಸಲು ಅಣಿಯಾಗುತ್ತಿದೆ. ಈ ಸಂದರ್ಭದಲ್ಲಿ ಸಾವಿನ ಬಗ್ಗೆ ಗಾಂಧೀಜಿಯವರ ನಿಲುವನ್ನ ತಿಳಿದುಕೊಳ್ಳೋದು ಉಚಿತವಾಗಿದೆ.

ಗಾಂಧೀಜಿಯವರು ಬರೆಯದ ಅಥವಾ ಮಾತನಾಡದ ವಿಚಾರಗಳು ತೀರ ಕಡಿಮೆ ಎನ್ನಬಹುದು. ವಿಶೇಷ ಅಂದ್ರೆ ಬಾಪೂ ಸಾವಿನ ಕುರಿತ ತಮ್ಮ ನಿಲುವನ್ನೂ ಸಹ ಸವಿಸ್ತಾರವಾಗಿ ಹಂಚಿಕೊಂಡಿದ್ದರು. ತಮ್ಮ ರಾಜಕೀಯ ಜೀವನದುದ್ದಕ್ಕೂ ಗಾಂಧಿ, ಧೈರ್ಯ, ನಿರ್ಭಯದಂತಹ ವಿಚಾರಗಳಿಗೆ ಹೆಚ್ಚು ಒತ್ತು ನೀಡಿದ್ದರು. ನಿರ್ಭಯ, ಅವರನ್ನ ಎಲ್ಲ ರೀತಿಯ ಭೀತಿಗಳಿಂದ ದೂರವಿರಿಸಿತ್ತು. ಈ ಸಂಬಂಧ ಅವರ "ಸೌತ್​ ಆಫ್ರಿಕಾದಲ್ಲಿ ಸತ್ಯಾಗ್ರಹ" ಎಂಬ ಪುಸ್ತಕದಲ್ಲಿ ಗಾಂಧೀಜಿ, ಸರ್ವಶಕ್ತನಲ್ಲಿ ಸಂಪೂರ್ಣ ನಂಬಿಕೆಯಿಡಿ ಎಂಬ ವಿಚಾರವನ್ನ ಉಲ್ಲೇಖಿಸುವ ಮೂಲಕ ನಿರ್ಭಯದಿಂದಿರಿ ಎನ್ನುವ ಸಂದೇಶ ಸಾರಿದ್ದರು.

ತಮ್ಮ ದಕ್ಷಿಣ​ ಆಫ್ರಿಕಾ ದಿನಗಳಲ್ಲಿ ಸಾವು - ಬದುಕಿನ ಬಗೆಗಿನ ಸಂಬಂಧವನ್ನ ಸವಿಸ್ತಾರವಾಗಿ ವ್ಯಾಖ್ಯಾನಿಸಿದ್ದಾರೆ ಬಾಪೂ. ಪ್ರತಿಯೊಬ್ಬನೂ, ತನ್ನಿಂದ ಹಲವು ಸಮಯದಿಂದ ಬೇರ್ಪಟ್ಟ ಸ್ನೇಹಿತನನ್ನು ಒಂದೊಮ್ಮೆ ನೋಡಲೇಬೇಕಾಗುತ್ತದೆ ಎಂದೂ ಹೇಳಿರುವ ಅವರು ಈ ಮೂಲಕ ಅವರು ಸಾವು ಕಾಲಗಳಿಂದ ಬೇರ್ಪಟ್ಟ ಗೆಳೆಯ ಎಂದು ಬಣ್ಣಿಸಿದ್ದಾರೆ. ಅಷ್ಟೇಅಲ್ಲ, ಸಾವು ಸ್ನೇಹಿತ ಮಾತ್ರವಲ್ಲ ನಮ್ಮ ಪ್ರೀತಿಯ ಒಡನಾಡಿ ಕೂಡ ಹೌದು, ಎಂದು 30ರ ಡಿಸೆಂಬರ್​ 1926ರಂದು ಯಂಗ್​ ಇಂಡಿಯಾದಲ್ಲಿ ಲೇಖನ ಬರೆದಿದ್ದರು.

ಸಾವು ಒಂದು ಅದೃಷ್ಟ. ಅದರಲ್ಲೂ ತನ್ನ ನ್ಯಾಯಯುತ ಗುರಿಯನ್ನು ಸಾಧಿಸಲೆಂದು ಹುತಾತ್ಮನಾಗುವ ಯೋಧನಿಗೆ ಈ ಅದೃಷ್ಟ ದುಪ್ಪಟ್ಟಾಗಿರುತ್ತದೆ. ಇಲ್ಲಿ ಸತ್ಯದ ಮಾನ್ಯತೆ ಯಾವುದೇ ರೀತಿಯಿಂದ ಬೇರ್ಪಡಿಸಲಾಗದ ರೀತಿಯಲ್ಲಿ ನಿರ್ಭಯತೆಯೊಂದಿಗೆ ಸೇರಿಕೊಳ್ಳುತ್ತದೆ. ಗಾಂಧೀಜಿಯವರು ಸತ್ಯತೆ ಉಳಿಸಲು ತಮ್ಮ ಪ್ರಾಣವನ್ನು ತ್ಯಾಗಮಾಡಲೂ ಕೂಡ ಸಿದ್ಧರಾಗಲು ಇದೇ ಪ್ರಮುಖ ಕಾರಣವಾಗಿದೆ.

ಬಾಪೂ ಮೇಲೆ ಹಲವಾರು ಬಾರೀ ಕೊಲೆ ಪ್ರಯತ್ನಗಳು ನಡೆದಿದ್ದವು. ದೇಶಕ್ಕೆ ನನ್ನ ಅವಶ್ಯಕತೆ ಮಾತ್ರವಲ್ಲ ನನ್ನ ಪ್ರಾಣದ ಅವಶ್ಯಕತೆಯೂ ಇದೆ ಎನ್ನುವ ವಿಚಾರ ಅದಾಗಲೇ ಮಹಾತ್ಮನಿಗೆ ಅರ್ಥವಾಗಿತ್ತು. ಹಾಗಾಗಿಯೇ ಬಾಪೂ ಜನಪ್ರಿಯವಲ್ಲದ ಅಥವಾ ಹಲವಾರು ವಿವಾದಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡಿದ್ದೇ ಅವರಲ್ಲಿದ್ದ ನಿರ್ಭಯತೆ. ಅದು ಹರಿಜನ ಯಾತ್ರೆಯಾಗಿರಬಹುದು ಅಥವಾ 1946 ರ ನಂತರದ ಕೋಮುವಾದದ ವಿರುದ್ಧದ ಹೋರಾಟವಾಗಿರಬಹುದು. ಇಂತಹ ಸನ್ಮಾರ್ಗದಲ್ಲಿ ಏಕಾಂಗಿಯಾಗಿ ನಡೆಯಲು ಗಾಂಧೀಜಿ ಒಂದು ಕ್ಷಣವೂ ಹಿಂಜರಿಯಲಿಲ್ಲ.

ಅವರ ನೈತಿಕತೆ ಜನರ ಮೇಲೆ ಪ್ರಭಾವ ಬೀರದೆಯೂ ಇರಲಿಲ್ಲ. ಅವರನ್ನು ನಿರ್ಲಕ್ಷಿಸಲು ಅಥವಾ ಅವರು ಕೇಳಿದ್ದನ್ನು ನಿರಾಕರಿಸಲು ಸಾಧ್ಯವಾಗಲಿಲ್ಲ. ಇದು ಗಾಂಧೀಜಿಯನ್ನು 'ಮಹಾತ್ಮ'ನನ್ನಾಗಿ ಪರಿವರ್ತಿಸಿತು. ಅವರು ಜೀವನ ಮತ್ತು ಮರಣವನ್ನು ಶಾಶ್ವತ ಸತ್ಯವೆಂದು ಒಪ್ಪಿಕೊಂಡರು ಮತ್ತು ಎಲ್ಲ ರೀತಿಯ ಭಯಗಳಿಂದ ಮುಕ್ತರಾಗಿದ್ದರು.

Intro:Body:

ಹುಟ್ಟು ಮತ್ತು ಸಾವುಗಳ ಬಗ್ಗೆ ಗಾಂಧಿ ನಿಲುಮೆ ಮತ್ತು ಸತ್ಯಾಗ್ರಹ

ಮಹಾತ್ಮ ಗಾಂಧೀಜಿಯ 150ನೇ ಹುಟ್ಟುಹಬ್ಬ ಆಚರಿಸಲು ಅಣಿಯಾಗುತ್ತಿದೆ.  ಈ ಸಂದರ್ಭದಲ್ಲಿ ಸಾವಿನ ಬಗ್ಗೆ  ಗಾಂಧೀಜಿಯವರ ನಿಲುವನ್ನ ತಿಳಿದುಕೊಳ್ಳೋದು ಉಚಿತವಾಗಿದೆ.

ಗಾಂಧೀಜಿಯವರು ಬರೆಯದ ಅಥವಾ ಮಾತನಾಡದ ವಿಚಾರಗಳು ತೀರ ಕಡಿಮೆ ಎನ್ನಬಹುದು. ವಿಶೇಷ ಅಂದ್ರೆ ಬಾಪೂ ಸಾವಿನ ಕುರಿತ ತಮ್ಮ ನಿಲುವನ್ನೂ ಸಹ ಸವಿಸ್ತಾರವಾಗಿ ಹಂಚಿಕೊಂಡಿದ್ದರು. ತಮ್ಮ ರಾಜಕೀಯ ಜೀವನದುದ್ದಕ್ಕೂ ಗಾಂಧಿ, ಧೈರ್ಯ, ನಿರ್ಭಯದಂತಹ ವಿಚಾರಗಳಿಗೆ ಹೆಚ್ಚು ಒತ್ತು ನೀಡಿದ್ದರು. ನಿರ್ಭಯ, ಅವರನ್ನ ಎಲ್ಲ ರೀತಿಯ ಭೀತಿಗಳಿಂದ ದೂರವಿರಿಸಿತ್ತು. ಈ ಸಂಬಂಧ ಅವರ "ಸೌತ್​ ಆಫ್ರಿಕಾದಲ್ಲಿ ಸತ್ಯಾಗ್ರಹ" ಎಂಬ ಪುಸ್ತಕದಲ್ಲಿ ಗಾಂಧೀಜಿ, ಸರ್ವಶಕ್ತನಲ್ಲಿ ಸಂಪೂರ್ಣ ನಂಬಿಕೆಯಿಡಿ ಎಂಬ ವಿಚಾರವನ್ನ ಉಲ್ಲೇಖಿಸುವ ಮೂಲಕ ನಿರ್ಭಯದಿಂದಿರಿ ಎನ್ನುವ ಸಂದೇಶ ಸಾರಿದ್ದರು.

ತಮ್ಮ ದಕ್ಷಿಣ​ ಆಫ್ರಿಕಾ ದಿನಗಳಲ್ಲಿ ಸಾವು - ಬದುಕಿನ ಬಗೆಗಿನ ಸಂಬಂಧವನ್ನ ಸವಿಸ್ತಾರವಾಗಿ ವ್ಯಾಖ್ಯಾನಿಸಿದ್ದಾರೆ ಬಾಪೂ.  ಪ್ರತಿಯೊಬ್ಬನೂ, ತನ್ನಿಂದ ಹಲವು ಸಮಯದಿಂದ ಬೇರ್ಪಟ್ಟ ಸ್ನೇಹಿತನನ್ನು ಒಂದೊಮ್ಮೆ ನೋಡಲೇಬೇಕಾಗುತ್ತದೆ ಎಂದೂ ಹೇಳಿರುವ ಅವರು  ಈ ಮೂಲಕ ಅವರು ಸಾವು ಕಾಲಗಳಿಂದ ಬೇರ್ಪಟ್ಟ ಗೆಳೆಯ ಎಂದು ಬಣ್ಣಿಸಿದ್ದಾರೆ. ಅಷ್ಟೇಅಲ್ಲ, ಸಾವು ಸ್ನೇಹಿತ ಮಾತ್ರವಲ್ಲ ನಮ್ಮ ಪ್ರೀತಿಯ ಒಡನಾಡಿ ಕೂಡ ಹೌದು, ಎಂದು 30ರ ಡಿಸೆಂಬರ್​ 1926ರಂದು ಯಂಗ್​ ಇಂಡಿಯಾದಲ್ಲಿ ಲೇಖನ ಬರೆದಿದ್ದರು. 

ಸಾವು ಒಂದು ಅದೃಷ್ಟ. ಅದರಲ್ಲೂ ತನ್ನ ನ್ಯಾಯಯುತ ಗುರಿಯನ್ನು ಸಾಧಿಸಲೆಂದು ಹುತಾತ್ಮನಾಗುವ ಯೋಧನಿಗೆ ಈ ಅದೃಷ್ಟ ದುಪ್ಪಟ್ಟಾಗಿರುತ್ತದೆ. ಇಲ್ಲಿ ಸತ್ಯದ ಮಾನ್ಯತೆ ಯಾವುದೇ ರೀತಿಯಿಂದ ಬೇರ್ಪಡಿಸಲಾಗದ ರೀತಿಯಲ್ಲಿ ನಿರ್ಭಯತೆಯೊಂದಿಗೆ ಸೇರಿಕೊಳ್ಳುತ್ತದೆ. ಗಾಂಧೀಜಿಯವರು ಸತ್ಯತೆ ಉಳಿಸಲು ತಮ್ಮ ಪ್ರಾಣವನ್ನು ತ್ಯಾಗಮಾಡಲೂ ಕೂಡ ಸಿದ್ಧರಾಗಲು ಇದೇ ಪ್ರಮುಖ ಕಾರಣವಾಗಿದೆ.

ಬಾಪೂ ಮೇಲೆ ಹಲವಾರು ಬಾರೀ ಕೊಲೆ ಪ್ರಯತ್ನಗಳು ನಡೆದಿದ್ದವು. ದೇಶಕ್ಕೆ ನನ್ನ ಅವಶ್ಯಕತೆ ಮಾತ್ರವಲ್ಲ ನನ್ನ ಪ್ರಾಣದ ಅವಶ್ಯಕತೆಯೂ ಇದೆ ಎನ್ನುವ ವಿಚಾರ ಅದಾಗಲೇ ಮಹಾತ್ಮನಿಗೆ ಅರ್ಥವಾಗಿತ್ತು. ಹಾಗಾಗಿಯೇ ಬಾಪೂ ಜನಪ್ರಿಯವಲ್ಲದ ಅಥವಾ ಹಲವಾರು ವಿವಾದಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡಿದ್ದೇ ಅವರಲ್ಲಿದ್ದ ನಿರ್ಭಯತೆ. ಅದು ಹರಿಜನ ಯಾತ್ರೆಯಾಗಿರಬಹುದು ಅಥವಾ 1946 ರ ನಂತರದ ಕೋಮುವಾದದ ವಿರುದ್ಧದ ಹೋರಾಟವಾಗಿರಬಹುದು. ಇಂತಹ ಸನ್ಮಾರ್ಗದಲ್ಲಿ  ಏಕಾಂಗಿಯಾಗಿ ನಡೆಯಲು ಗಾಂಧೀಜಿ ಒಂದು ಕ್ಷಣವೂ ಹಿಂಜರಿಯಲಿಲ್ಲ.

ಅವರ ನೈತಿಕತೆ ಜನರ ಮೇಲೆ ಪ್ರಭಾವ ಬೀರದೆಯೂ ಇರಲಿಲ್ಲ. ಅವರನ್ನು ನಿರ್ಲಕ್ಷಿಸಲು ಅಥವಾ  ಅವರು ಕೇಳಿದ್ದನ್ನು ನಿರಾಕರಿಸಲು ಸಾಧ್ಯವಾಗಲಿಲ್ಲ. ಇದು ಗಾಂಧೀಜಿಯನ್ನು 'ಮಹಾತ್ಮ'ನನ್ನಾಗಿ ಪರಿವರ್ತಿಸಿತು. ಅವರು ಜೀವನ ಮತ್ತು ಮರಣವನ್ನು ಶಾಶ್ವತ ಸತ್ಯವೆಂದು ಒಪ್ಪಿಕೊಂಡರು ಮತ್ತು ಎಲ್ಲ ರೀತಿಯ ಭಯಗಳಿಂದ ಮುಕ್ತರಾಗಿದ್ದರು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.