ನವದೆಹಲಿ: ಬಡ ಮಕ್ಕಳ ಆರೋಗ್ಯ ತಪಾಸಣೆ ಶಿಬಿರ ನಡೆಸುವ ಉದ್ದೇಶದಿಂದ 15 ವರ್ಷದ ಇಬ್ಬರು ಸಹೋದರ-ಸಹೋದರಿ ಹಣ ಸಂಗ್ರಹಿಸುತ್ತಾ ಎಲ್ಲರ ಮೆಚ್ಚುಗೆ ಗಳಿಸುತ್ತಿದ್ದಾರೆ.
ಅರ್ಜುನ್ ಹಾಗೂ ಕೈರಾ ಈ ಕೆಲಸ ಮಾಡ್ತಿದ್ದು, ಇವರು ನವದೆಹಲಿಯ ಶ್ರೀ ರಾಮ ಶಾಲೆಯಲ್ಲಿ ವ್ಯಾಸಂಗ ಮಾಡ್ತಿದ್ದಾರೆ. ಈ ಮಧ್ಯೆ ಬಡ ಮಕ್ಕಳ ಆರೋಗ್ಯ ದೃಷ್ಟಿಯಿಂದ ಹಣಕಾಸು ಸಹಾಯ ಸಂಗ್ರಹಿಸುವ ಉದ್ದೇಶಕ್ಕೆ ಮಕ್ಕಳ ಹೆಲ್ತ್ ಆ್ಯಕ್ಷನ್ ಮ್ಯಾನೇಜ್ಮೆಂಟ್ ಪ್ರೊಜೆಕ್ಟ್ ಎಂದು ಹೆಸರಿಟ್ಟಿದ್ದಾರೆ.
ದೆಹಲಿಯಲ್ಲಿ ಕೊರೊನಾ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ನಾವು ನಮ್ಮ ಕೈಯಿಂದಾದ ಕೆಲಸ ಮಾಡ್ತಿದ್ದೇವೆ ಎಂದು ಈ ಮಕ್ಕಳು ಹೇಳ್ತಾರೆ.
ಇನ್ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿದ್ದು, ಅನೇಕರು ಸಹಾಯಹಸ್ತ ಚಾಚಿದ್ದಾರೆ. ಈಗಾಗಲೇ 2,74,000 ರೂ ಸಂಗ್ರಹವಾಗಿದೆ ಎಂದು ತಿಳಿಸಿದ್ದಾರೆ.