ನವದೆಹಲಿ: ಚೀನಾದಲ್ಲಿ ಅಬ್ಬರಿಸಿದ್ದ ಮಹಾಮಾರಿ ಕೊರೊನಾ ಇದೀಗ ಭಾರತಕ್ಕೂ ಲಗ್ಗೆ ಹಾಕಿದ್ದು, ಇದೇ ವಿಷಯವಾಗಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ದೇಶದಲ್ಲಿ ಒಟ್ಟು 28 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 16 ವಿದೇಶಿ ಹಾಗೂ 12 ಭಾರತೀಯರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಐಟಿಬಿಪಿ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದ 20 ಮಂದಿ ಪೈಕಿ 15 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಹೇಳಿದ್ದಾರೆ.
-
Union Health Minister Dr Harsh Vardhan: Till now, there have been 28 positive cases of Coronavirus in India https://t.co/kyxBangCQX
— ANI (@ANI) March 4, 2020 " class="align-text-top noRightClick twitterSection" data="
">Union Health Minister Dr Harsh Vardhan: Till now, there have been 28 positive cases of Coronavirus in India https://t.co/kyxBangCQX
— ANI (@ANI) March 4, 2020Union Health Minister Dr Harsh Vardhan: Till now, there have been 28 positive cases of Coronavirus in India https://t.co/kyxBangCQX
— ANI (@ANI) March 4, 2020
ಭಾರತಕ್ಕೆ ಬಂದ 16 ಇಟಲಿ ಪ್ರಜೆಗಳಲ್ಲಿ ಈ ವೈರಾಣು ಕಾಣಿಸಿಕೊಂಡಿದೆ. ದೆಹಲಿಯ ಒಬ್ಬರಿಗೆ, ಆಗ್ರಾದಲ್ಲಿ ಆರು ಮಂದಿಗೆ, ತೆಲಂಗಾಣದಲ್ಲಿ ಒಬ್ಬರಿಗೆ ಹಾಗೂ ಕೇರಳದಲ್ಲಿ ಮೂವರಿಗೆ ಈ ವೈರಸ್ ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
ಎಲ್ಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದ್ದು, ದೆಹಲಿ ಆಸ್ಪತ್ರೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚಿಕಿತ್ಸೆ ಕೈಗೊಳ್ಳುವಂತೆ ಸೂಚನೆ ನೀಡಿದ್ದೇವೆ ಎಂದಿದ್ದಾರೆ.