ಬಂಡಿಪೋರಾ : 100 ವರ್ಷದ ಫಾಜಿಯಾ ಬೇಗಂ ಎಂಬಾಕೆ ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಹಾಜಿನ್ನ ಬನಿಯಾರಿ ಗ್ರಾಮದಲ್ಲಿ ನಡೆದ ಬಿಜೆಪಿ ರ‍್ಯಾಲಿಯಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾಳೆ.
ಆದ್ರೆ, ಆಕೆ ಬಿಜೆಪಿ ರ‍್ಯಾಲಿಯಲ್ಲಿ ಭಾಗವಹಿಸಿದ್ದರ ಉದ್ದೇಶವೇ ಬೇರೆ. ಆಕೆಯ ಮಗ 10 ವರ್ಷಗಳ ಹಿಂದೆ ಜೈಲು ಪಾಲಾಗಿದ್ದ. ಬಿಜೆಪಿ ಪಕ್ಷವು ಆಕೆಯ ಮಗನನ್ನು ಜೈಲಿನಿಂದ ಹೊರ ಕರೆತರುವುದಾಗಿ ಹೇಳಿತ್ತು. ಆ ಆಶಯದಿಂದ ಬೇಗಂ ಬಿಜೆಪಿ ರ‍್ಯಾಲಿಗೆ ಹೋಗಿದ್ದಾಳೆ.
ನಡೆದಾಡಲೂ ಹೆಣಗಾಡುವ ಆಕೆ ತನ್ನ ಮೊಣ ಕಾಲುಗಳ ಮೇಲೆ ನಡೆದುಕೊಂಡು ರ‍್ಯಾಲಿಯಲ್ಲಿ ಭಾಗವಹಿಸಿದ್ದಳು. ಆಕೆಗೆ 100 ವರ್ಷವಾಗಿದೆ. ಆದರೆ, ತನ್ನ ಮಗನನ್ನು ಜೈಲಿನಿಂದ ಕರೆತರುವ ಒಂದೇ ಉದ್ದೇಶ ಆ ಅಜ್ಜಿಯದ್ದು. ಅದಕ್ಕಾಗಿ ಆಕೆ ದೃಢ ನಿರ್ಧಾರ ಕೈಗೊಂಡಿದ್ದಾರೆ ಎಂದು ಬೇಗಂ ಸಂಬಂಧಿಕರು ತಿಳಿಸಿದ್ದಾರೆ.
ಇದನ್ನೂ ಓದಿ: ವೃದ್ಧ ದಂಪತಿಗೆ ಥಳಿತ ಆರೋಪ: ಮಾಜಿ ಶಾಸಕನ ಬಂಧನ
ಬಿಜೆಪಿ ಅಭ್ಯರ್ಥಿ ಇಕ್ಬಾಲ್ ಜಾನ್ ಆಕೆಯ ಮಗನನ್ನು ಬಿಡುಗಡೆ ಮಾಡಬಹುದೆಂದು ಯಾರೋ ಅಜ್ಜಿಯ ಗಮನಕ್ಕೆ ತಂದಿದ್ದರು. ಈ ಉದ್ದೇಶದಿಂದ ಅಜ್ಜಿ ರ‍್ಯಾಲಿಯಲ್ಲಿ ಭಾಗವಹಿಸಿ ಬಿಜೆಪಿ ಮುಖಂಡರನ್ನು ವಿನಂತಿಸುತ್ತಿದ್ದ ದೃಶ್ಯ ಎಂಥವರ ಕಣ್ಣಲ್ಲೂ ನೀರು ತರಿಸುವಂತಿತ್ತು.