ಅರಿಯಲೂರು(ತಮಿಳುನಾಡು): ಎಲ್ಲೆಡೆ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಸರ್ಕಾರ ಅದೆಷ್ಟೇ ಬಾರಿ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿದರೂ ತಮಿಳುನಾಡಿನ ಗ್ರಾಮವೊಂದರಲ್ಲಿ ನಡೆದ ಮೀನು ಉತ್ಸವದಲ್ಲಿ ನೂರಾರು ಜನ ಜಮಾಯಿಸಿರುವ ಘಟನೆ ನಡೆದಿದೆ.
ತಮಿಳುನಾಡಿನ ಅರಿಯಲೂರು ಜಿಲ್ಲೆಯ ಮಕ್ಕಂಬಾಡಿ ಗ್ರಾಮವು ವಾರ್ಷಿಕ ಮೀನು ಉತ್ಸವಕ್ಕೆ ಹೆಸರುವಾಸಿಯಾಗಿದೆ. ಸಾಮಾನ್ಯವಾಗಿ ಇಲ್ಲಿ ರಾಜ್ಯದ ಹಲವೆಡೆಯಿಂದ ಜನರು ಸೇರಿ ಮೀನು ಉತ್ಸವ ಆಚರಿಸಿ ಸಂತಸ ಪಡುತ್ತಾರೆ.
ಈ ವರ್ಷ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಜನರು ಬರದಂತೆ ಕೇಳಿಕೊಳ್ಳಲಾಗಿತ್ತು. ಆದರೆ, ಲಾಕ್‌ಡೌನ್ ಮತ್ತು ಸಾಮಾಜಿಕ ಅಂತರದ ಹೊರತಾಗಿಯೂ ಈ ವರ್ಷ ಮೀನು ಉತ್ಸವದಲ್ಲಿ ನೂರಾರು ಜನರು ಸೇರಿದ್ದರು. ಇನ್ನು ಈ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಜನರನ್ನು ತೆರವುಗೊಳಿಸಿದರು.