ನವದೆಹಲಿ: ಕೊರೊನಾದಿಂದಾಗಿ ಈವರೆಗೆ ಸುಮಾರು ನೂರಕ್ಕೂ ಹೆಚ್ಚು ಅರೆಸೇನಾ ಪಡೆಗಳ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಗೃಹ ಇಲಾಖೆ ಮಾಹಿತಿ ನೀಡಿದೆ.
ಸೆಪ್ಟೆಂಬರ್ 10ರವರೆಗಿನ ಅಂಕಿ-ಅಂಶಗಳಂತೆ ಸಿಆರ್ಪಿಎಫ್ನ 35, ಗಡಿ ಭದ್ರತಾ ಪಡೆಯ 23, ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆಯ 24, ಐಟಿಬಿಪಿಯ 7, ಎಸ್ಎಸ್ಬಿಯ 7, ಅಸ್ಸಾಂ ರೈಫಲ್ಸ್ನ ಐದು ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರಾಯ್ ಲೋಕಸಭೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಸಿಆರ್ಪಿಎಫ್ ಯೋಧರಿಗೆ 'ಭಾರತ್ ಕಾ ವೀರ್' ನಿಧಿಯ ಮೂಲಕ 15 ಲಕ್ಷ ರೂಪಾಯಿ ಪರಿಹಾರ ನೀಡಲು ನಿರ್ಧರಿಸಲಾಗಿದೆ ಎಂದು ನಿತ್ಯಾನಂದರಾಯ್ ಲೋಕಸಭೆಯಲ್ಲಿ ತಿಳಿಸಿದರು.
ಲಾಕ್ಡೌನ್ ವೇಳೆ ಕರ್ತವ್ಯದಲ್ಲಿದ್ದ ಅರೆಸೇನಾ ಪಡೆಯ ಸಾಕಷ್ಟು ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಆಂತರಿಕ ಭದ್ರತೆ ಹಾಗೂ ಕಂಟೇನ್ಮೆಂಟ್ ಝೋನ್ಗಳಲ್ಲಿದ್ದ ಸಿಬ್ಬಂದಿಗೆ ಕೋವಿಡ್ ಕಾಡಿತ್ತು. ಉತ್ತರ ಪ್ರದೇಶದ ಐಟಿಬಿಪಿ ರೆಫೆರಲ್ ಆಸ್ಪತ್ರೆಯಲ್ಲಿ ಸುಮಾರು 1,150 ಸಿಬ್ಬಂದಿಗೆ ಈವರಗೆ ಚಿಕಿತ್ಸೆ ನೀಡಲಾಗಿದೆ.