ವೈಯಕ್ತಿಕ ಹಾಗೂ ವೃತ್ತಿ ಬದುಕಿನ ಹಲವು ಕೆಲಸಗಳಲ್ಲಿ ಸಹಜವಾಗಿಯೇ ಎಲ್ಲರೂ ಒತ್ತಡಕ್ಕೆ ಸಿಲುಕುತ್ತಾರೆ. ಸದ್ಯ ಕೊರೊನಾ ಕಾಲಾವಧಿಯಲ್ಲಿ ವೃತ್ತಿ ಹಾಗೂ ಸಂಬಂಧಗಳನ್ನು ಕಾಪಾಡಿಕೊಳ್ಳಲು ಎದುರಿಸುತ್ತಿರುವ ಸವಾಲುಗಳಿಂದಾಗಿ ಇನ್ನಷ್ಟು ಒತ್ತಡ ಹೆಚ್ಚಿದೆ.
ಸ್ವಲ್ಪ ಪ್ರಮಾಣದ ಒತ್ತಡ ಎಲ್ಲರೂ ಎದುರಿಸುತ್ತಾರೆ. ಅದು ಒಳ್ಳೆಯದು ಮತ್ತು ಪ್ರತಿಯೊಬ್ಬರ ಜೀವನದಲ್ಲಿಯೂ ತುಂಬ ಸಹಜವಾಗಿ ಬಂದು, ಹೋಗುವಂತಹುದು. ಆದರೆ, ಅದೇ ದೀರ್ಘ ಕಾಲದವರೆಗೆ ತೆಗೆದುಕೊಂಡು ಹೋದ್ರೇ ಮಾನಸಿಕ, ದೈಹಿಕ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ಹೈದರಾಬಾದ್‌ನ ಎಎಂಡಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ರಾಜಲಕ್ಷ್ಮಿ ಮಾಧವಂ ವಿಶ್ಲೇಷಿಸಿದರು.
“ದೀರ್ಘಕಾಲದ ಒತ್ತಡವು ಉರಿಯೂತಕ್ಕೆ ಕಾರಣವಾಗುತ್ತದೆ. ನಮ್ಮ ದೇಹದಲ್ಲಿ ಇದರಿಂದ ರಾಡಿಕಲ್ ಹೆಚ್ಚಳಕ್ಕೆ ಎಡೆಮಾಡಿಕೊಡುತ್ತಿದ್ದು, ಇದು ಹಾನಿಕಾರಕವಾಗಿದೆ. ಸಕಾರಾತ್ಮಕ ಒತ್ತಡ ಮತ್ತು ನಕಾರಾತ್ಮಕ ಒತ್ತಡ ಎಂದು ವರ್ಗೀಕರಿಸಲಾಗಿದೆ. ಸಕಾರಾತ್ಮಕ ಒತ್ತಡವು ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳ ಸಾಂದ್ರತೆಯನ್ನು ಹೆಚ್ಚಿಸುತ್ತದೆ. ನಮ್ಮ ಉದ್ದೇಶಿತ ಗುರಿ ಎಡೆಗೆ ಕರೆದ್ಯೊಯುತ್ತದೆ. ನಕಾರಾತ್ಮಕ ಒತ್ತಡ ಏಕಾಗ್ರತೆ ನಾಶಗೊಳಿಸಿ, ವ್ಯತಿರಿಕ್ತ ರೀತಿ ಕಾರ್ಯನಿರ್ವಹಿಸುತ್ತದೆ ಎಂದರು.
ಒತ್ತಡದಿಂದ ಉಂಟಾಗುವ ಪರಿಣಾಮ :
ತಲೆನೋವು
ಆತಂಕ
ಹತಾಶೆ
ತೀವ್ರ ರಕ್ತದೊತ್ತಡ
ನಿದ್ರಾಹೀನತೆ
ಒತ್ತಡ ನಿವಾರಣೆಗೆ ಆಯುರ್ವೇದ ಗಿಡಮೂಲಿಕೆಗಳು ಇಲ್ಲಿವೆ. ಇದು ನಿಮಗೆ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತವೆ ಎನ್ನುತ್ತಾರೆ ಆಯುರ್ವೇಧ ಕಾಲೇಜಿನ ಪ್ರಾಧ್ಯಾಪಕಿ ರಾಜಲಕ್ಷ್ಮಿ.
ಅಶ್ವಗಂಧ: ಇದು ರಕ್ತದಲ್ಲಿನ ಒತ್ತಡದ ಹಾರ್ಮೋನ್ಗಳ ಮಟ್ಟ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬ್ರಾಹ್ಮಿ: ಈ ಮೂಲಿಕೆ ಸಿರೊಟೋನಿನ್ ಎಂಬ ವಿಶ್ರಾಂತಿ ಹಾರ್ಮೋನ್ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ. ಇದು ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ.
ತುಳಸಿ : ಪವಿತ್ರ ಗಿಡ ಮೂಲಿಕೆಯಾದ ತುಳಸಿಯು ಹೆಚ್ಚಿನ ರೋಗ ನಿರೋಧಕ ಶಕ್ತಿ ಹೊಂದಿದೆ. ಇದು ಒತ್ತಡದಿಂದ ದೇಹದಲ್ಲಿ ಉತ್ಪತ್ತಿಯಾಗುವ ರಾಡಿಕಲ್ ವಿರುದ್ಧ ಹೋರಾಡಲು ಸಹಾಯವಾಗಿದೆ.
ವಾಚಾ: ಇದು ಮೆದುಳಿನ ಸಮತೋಲವನ್ನು ಕಾಪಾಡಿಕೊಂಡು ಹೋಗುತ್ತದೆ. ದೇಹದ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.
ಜಟಮಾನ್ಸಿ: ಇದು ಮನುಷ್ಯನ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಇದು ಒತ್ತಡದ ಮಟ್ಟವನ್ನು ಕೂಡ ಕಡಿಮೆ ಮಾಡುತ್ತದೆ.
ಇತರ ಗಿಡಮೂಲಿಕೆಗಳು
ಟರ್ಮಿನಲಿಯಾ ಅರ್ಜುನ (ಅರ್ಜುನ)
ಭ್ರೀನ್‌ರಾಜ್
ಶಂಕ್‌ಪುಷ್ಪಿ
ಯಶ್ತಿಮಾಧು
ಗುಡುಚಿ
ಆರೋಗ್ಯಕರ ಆಹಾರವನ್ನು ಅನುಸರಿಸಲು ಪೌಷ್ಠಿಕಾಂಶಯುಕ್ತ ಬಾದಾಮಿ, ಹಣ್ಣುಗಳನ್ನು ಸೇವಿಸಬೇಕು. ರೋಗನಿರೋಧಕ ಶಕ್ತಿ ತುಂಬಿರುವ ಹಸಿರು ಚಹಾ ಮತ್ತು ಕಂದು ಅಕ್ಕಿ ಸಹ ಒತ್ತಡ ನಿವಾರಣೆಗೆ ಸಹಕಾರಿಯಾಗಿದೆ. ಪ್ರತಿದಿನ ಯೋಗ, ಧ್ಯಾನ ಮತ್ತು ಪ್ರಾಣಾಯಾಮವನ್ನು ಅಭ್ಯಾಸ ಮಾಡಿಕೊಳ್ಳಬೇಕು. ಸರಿಯಾದ ನಿದ್ರೆಯ ವೇಳೆಯನ್ನು ಅನುಸರಿಸಬೇಕು. ಆಲ್ಕೋಹಾಲ್, ಸಿಗರೇಟ್ ಸೇವಿಸಬಾರದು ಎಂದರು.
"ಆಯುರ್ವೇದದಲ್ಲಿ ಶಿರೋಧರ ಅಂದರೇ ಹಣೆಯ ಮೇಲೆ ಎಣ್ಣೆ ಔಷಧಿಯನ್ನು ಸುರಿಯುವುದು ಮತ್ತು ಶಿರೋಬಸ್ತಿ (ತಲೆಯ ಮೇಲೆ ಎಣ್ಣೆಯನ್ನು ಸುರಿಯುವುದು ಮತ್ತು ಸ್ವಲ್ಪ ಸಮಯದವರೆಗೆ ಹಾಗೇ ಬಿಡುವುದು) ಎಂಬ ಎರಡು ತಂತ್ರಗಳಿವೆ" ಎಂದು ಪ್ರಾಧ್ಯಾಪಕಿ ರಾಜಲಕ್ಷ್ಮಿ ಹೇಳಿದರು.