ETV Bharat / bharat

ಏನಿದು ಇನ್​ಸ್ಟಾಗ್ರಾಂ 'ಬಾಯ್ಸ್​ ಲಾಕರ್​ ರೂಂ' ಚಾಟ್​ ಪ್ರಕರಣ? - ಬಾಲಕಿಯರ ಆಕ್ಷೇಪಾರ್ಹ ಫೋಟೊ

'ಬಾಯ್ಸ್​ ಲಾಕರ್ ರೂಂ' ಎಂಬ ಹೆಸರಿನ ಇನ್​ಸ್ಟಾಗ್ರಾಂ ಚಾಟ್​ ಗ್ರೂಪ್​ ಮಾಡಿಕೊಂಡಿದ್ದ ಕೆಲ ಬಾಲಕರು, ಇದರಲ್ಲಿ ಅಪ್ರಾಪ್ತ ಬಾಲಕಿಯರನ್ನು ರೇಪ್ ಮಾಡಲು ಉತ್ತೇಜಿಸುವ ಸಂದೇಶಗಳನ್ನು ಹಾಗೂ ಬಾಲಕಿಯರ ಆಕ್ಷೇಪಾರ್ಹ ಫೋಟೊಗಳನ್ನು ಹಂಚಿಕೊಂಡಿದ್ದರು.

Boys Locker Room' row
Boys Locker Room' row
author img

By

Published : May 5, 2020, 3:35 PM IST

ನವದೆಹಲಿ: ಇನ್​​ಸ್ಟಾಗ್ರಾಂನಲ್ಲಿನ 'ಬಾಯ್ಸ್​ ಲಾಕರ್ ರೂಂ' ಪ್ರಕರಣ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ದೆಹಲಿ ಪೊಲೀಸರ ಸೈಬರ್​ ಸೆಲ್​ ವಿಭಾಗವು ದಕ್ಷಿಣ ದೆಹಲಿಯ ಪ್ರತಿಷ್ಠಿತ ಶಾಲೆಯೊಂದರ 15 ವರ್ಷದ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿದ್ದು, ಪ್ರಕರಣದಲ್ಲಿ ಭಾಗಿಯಾದ ಇನ್ನೂ 22 ಬಾಲಕರ ಪತ್ತೆಗಾಗಿ ತನಿಖೆ ನಡೆಸಲಾಗುತ್ತಿದೆ.

'ಬಾಯ್ಸ್​ ಲಾಕರ್ ರೂಂ' ಎಂಬ ಹೆಸರಿನ ಇನ್​ಸ್ಟಾಗ್ರಾಂ ಚಾಟ್​ ಗ್ರೂಪ್​ ಮಾಡಿಕೊಂಡಿದ್ದ ಕೆಲ ಬಾಲಕರು, ಇದರಲ್ಲಿ ಅಪ್ರಾಪ್ತ ಬಾಲಕಿಯರನ್ನು ರೇಪ್ ಮಾಡಲು ಉತ್ತೇಜಿಸುವ ಸಂದೇಶಗಳನ್ನು ಹಾಗೂ ಬಾಲಕಿಯರ ಆಕ್ಷೇಪಾರ್ಹ ಫೋಟೊಗಳನ್ನು ಹಂಚಿಕೊಂಡಿದ್ದರು.

ಗ್ರೂಪ್​ನ ಕೆಲ ಸ್ಕ್ರೀನ್​ಶಾಟ್​ಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಅಪ್ರಾಪ್ತ ವಯಸ್ಸಿನ ಬಾಲಕಿರ ಫೋಟೊಗಳನ್ನು ಹಾಕಿ, ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸುವ ಪ್ಲಾನ್​ ಮಾಡಲಾಗುತ್ತಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಓರ್ವ ಬಾಲಕನನ್ನು ಬಂಧಿಸಿದ್ದಾರೆ. ಐಪಿಸಿಯ ಸೆಕ್ಷನ್ 465 (ಫೋರ್ಜರಿ), 471 (ನಕಲಿ ದಾಖಲೆಗಳ ಬಳಕೆ), 469 (ತೇಜೋವಧೆ ಮಾಡಲು ನಕಲು ಮಾಡುವಿಕೆ), 509 (ಹೆಣ್ಣು ಮಕ್ಕಳ ಗೌರವಕ್ಕೆ ಧಕ್ಕೆ ತರುವ ಕೆಲಸ) ಹಾಗೂ ಇನ್ಫರ್ಮೇಶನ್ ಟೆಕ್ನಾಲಜಿ ಆ್ಯಕ್ಟ್​ 67 ಮತ್ತು 67ಎ ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ದಕ್ಷಿಣ ದೆಹಲಿಯ ಸಾಕೇತ್ ಪ್ರದೇಶದಲ್ಲಿರುವ ಪ್ರತಿಷ್ಠಿತ ಶಾಲೆಯೊಂದರ ಪ್ರಿನ್ಸಿಪಾಲ್​ ಒಬ್ಬರು ಸೋಮವಾರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿ, ತನಿಖೆ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಪ್ರಕರಣದ ತನಿಖೆಯನ್ನು ಸೈಬರ್​ ಸೆಲ್​ಗೆ ವರ್ಗಾಯಿಸಲಾಗಿತ್ತು. ಅಲ್ಲದೆ ಉತ್ತರ ದೆಹಲಿಯ ಪೊಲೀಸ್​ ಠಾಣೆಯೊಂದರಲ್ಲಿ ಇನ್​ಸ್ಟಾಗ್ರಾಂ ಗ್ರೂಪ್​ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಪಾಲಕರೊಬ್ಬರು ಪ್ರತ್ಯೇಕ ದೂರು ದಾಖಲಿಸಿದ್ದರು. 'ಬಾಯ್ಸ್​ ಲಾಕರ್ ರೂಂ' ಗ್ರೂಪ್​ ಸದಸ್ಯರ ಸಂಪೂರ್ಣ ಮಾಹಿತಿ ನೀಡುವಂತೆ ಮೆಸೇಜಿಂಗ್ ಆ್ಯಪ್​ ಇನ್​ಸ್ಟಾಗ್ರಾಂಗೆ ಪೊಲೀಸರು ಸೂಚನೆ ನೀಡಿದ್ದರು.

ದಕ್ಷಿಣ ದೆಹಲಿ ನಿವಾಸಿ ಬಾಲಕಿಯೋರ್ವಳು ಗ್ರೂಪ್​​ನ ಆಕ್ಷೇಪಾರ್ಹ ಪೋಸ್ಟ್​ಗಳ ಸ್ಕ್ರೀನ್​ಶಾಟ್​ಗಳನ್ನು ಇತರ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರಿಂದ ಸಂಪೂರ್ಣ ಪ್ರಕರಣ ಬೆಳಕಿಗೆ ಬಂದಿತ್ತು. "ದಕ್ಷಿಣ ದೆಹಲಿಯ 17 ರಿಂದ 18 ವರ್ಷದ ಬಾಲಕರ ಗುಂಪೊಂದು ಬಾಯ್ಸ್​ ಲಾಕರ್​ ರೂಂ ಎಂಬ ಇನ್​ಸ್ಟಾಗ್ರಾಂ ಗ್ರೂಪ್​ ಮಾಡಿಕೊಂಡಿದ್ದು, ಹುಡುಗಿಯರ ಚಿತ್ರಗಳನ್ನು ಆಕ್ಷೇಪಾರ್ಹವಾಗಿ ಮಾರ್ಪಡಿಸಿ ಅದರಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ನನ್ನ ಶಾಲೆಯ ಇಬ್ಬರು ಹುಡುಗರು ಆ ಗ್ರೂಪ್​ನಲ್ಲಿದ್ದಾರೆ. ಈಗ ನಮ್ಮ ಮನೆಯವರಿಗೂ ವಿಷಯ ಗೊತ್ತಾಗಿದ್ದು, ನಾನು ಇನ್​ಸ್ಟಾಗ್ರಾಂ ಬಿಟ್ಟು ಹೊರಬರುವಂತೆ ಒತ್ತಾಯಿಸುತ್ತಿದ್ದಾರೆ." ಎಂದು ಬಾಲಕಿ ಸೋಶಿಯಲ್​ ಮೀಡಿಯಾದಲ್ಲಿ ಹೇಳಿದ್ದಳು.

ಗ್ರೂಪ್​ ಸದಸ್ಯರು ಹಾಗೂ ಅದರಲ್ಲಿನ ಆಕ್ಷೇಪಾರ್ಹ ಫೋಟೊಗಳು ಮತ್ತು ಅದಕ್ಕೆ ಮಾಡಲಾದ ಕಮೆಂಟ್​ಗಳ ಸ್ಕ್ರೀನ್​ಶಾಟ್​ಗಳನ್ನು ಬಾಲಕಿ ಶೇರ್​ ಮಾಡಿದ್ದಾಳೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.