ETV Bharat / bharat

77ನೇ ದಿನ..: ಹಿಂದಿ ಹೃದಯ ಭಾಗ ಮಧ್ಯಪ್ರದೇಶಕ್ಕೆ ಭಾರತ್ ಜೋಡೋ ಯಾತ್ರೆ ಪ್ರವೇಶ - ಹಿಂದಿ ಭಾಷೆಯ ಹೃದಯ ಭಾಗ ಮಧ್ಯಪ್ರದೇಶ

ಭಾರತ್ ಜೋಡೋ ಯಾತ್ರೆ ಮಧ್ಯಪ್ರದೇಶದಲ್ಲಿ ಸಾಗುತ್ತಿದೆ. ಇಂದು ಯಾತ್ರೆ 77ನೇ ದಿನಕ್ಕೆ ಕಾಲಿಟ್ಟಿದ್ದು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೆಜ್ಜೆ ಹಾಕಲಿದ್ದಾರೆ.

Bharat Jodo Yatra
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ
author img

By

Published : Nov 23, 2022, 8:24 AM IST

Updated : Nov 23, 2022, 11:09 AM IST

ಭೋಪಾಲ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಮಹಾರಾಷ್ಟ್ರ ಹಂತ ಮುಗಿಸಿದ್ದು, ಇದೀಗ 'ಹಿಂದಿ ಭಾಷೆಯ ಹೃದಯ ಭಾಗ ಮಧ್ಯಪ್ರದೇಶ'ದಲ್ಲಿ ಸಾಗುತ್ತಿದೆ. ರಾಹುಲ್ ಸಹೋದರಿ ಹಾಗು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಇಂದು ಸಂಜೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವರು ಎಂದು ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕಮಲ್‌ನಾಥ್ ಈಗಾಗಲೇ ತಿಳಿಸಿದ್ದಾರೆ.

ಅದ್ದೂರಿ ಸ್ವಾಗತಕ್ಕೆ ತಯಾರಿ: ಈಟಿವಿ ಭಾರತದೊಂದಿಗೆ ಮಾತನಾಡಿದ ಕಾಂಗ್ರೆಸ್‌ ನಾಯಕ ಡಾ.ಗೋವಿಂದ್ ಸಿಂಗ್, ಮಧ್ಯಪ್ರದೇಶದ ಜನರು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಗೆ ಅದ್ದೂರಿ ಸ್ವಾಗತ ನೀಡಲಿದ್ದಾರೆ. ನಿರುದ್ಯೋಗ, ನೋಟು ಅಮಾನ್ಯೀಕರಣ, ಸಂಕಷ್ಟದಲ್ಲಿರುವ ರೈತರು ಸೇರಿದಂತೆ ಮೋದಿ ಸರ್ಕಾರದ ತಪ್ಪು ನೀತಿಗಳಿಂದ ಕಂಗೆಟ್ಟಿರುವ ಜನರು ಸಾಥ್‌ ನೀಡಲಿದ್ದು, ರಾಹುಲ್ ಗಾಂಧಿ ಅವರಲ್ಲಿ ಹೊಸ ಭರವಸೆ ಕಾಣುತ್ತಿದ್ದಾರೆ ಎಂದು ಹೇಳಿದರು.

ಮಧ್ಯಪ್ರದೇಶಕ್ಕೆ ಭಾರತ್ ಜೋಡೋ ಯಾತ್ರೆ ಪ್ರವೇಶ

ಮಧ್ಯ ಪ್ರದೇಶದಲ್ಲಿ 382 ಕಿ.ಮೀ ಯಾತ್ರೆ: ಮಧ್ಯಪ್ರದೇಶದ ಬುರ್ಹಾನ್‌ಪುರ, ಖಾರ್ಗೋನ್, ಖಾಂಡ್ವಾ, ಇಂದೋರ್ ಮತ್ತು ಉಜ್ಜಯಿನಿ ಜಿಲ್ಲೆಗಳ ಮೂಲಕ 13 ದಿನಗಳ ಕಾಲ ಸುಮಾರು 382 ಕಿ.ಮೀ ಯಾತ್ರೆ ಕ್ರಮಿಸಲಿದೆ. ಇದಾದ ಬಳಿಕ ಅಗರ್ ಮಾಲ್ವಾ ಜಿಲ್ಲೆಯಿಂದ ರಾಜಸ್ಥಾನ ಪ್ರವೇಶಿಸಲಿದೆ.

ಕಮಲ್ ನಾಥ್ ಅವರು ರಾಜ್ಯದುದ್ದಕ್ಕೂ ರಾಹುಲ್ ಗಾಂಧಿಗೆ ಜೊತೆಯಾಗಲಿದ್ದಾರೆ. ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಲು 1,500ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಸಮಯದ ಮಿತಿ ಆಧರಿಸಿ ಅವಕಾಶ ಕಲ್ಪಿಸಿಕೊಡಲು ಪಕ್ಷ ನಿರ್ಧರಿಸಿದೆ.

ಸೆ.7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾದ ಭಾರತ್ ಜೋಡೋ ಈವರೆಗೆ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ಸಂಚರಿಸಿದೆ.

ಇದನ್ನೂ ಓದಿ: ಮಹಾರಾಷ್ಟ್ರದ ಭೆಂಡ್ವಾಲ್‌ನಲ್ಲಿ ಸಾಗುತ್ತಿರುವ ಭಾರತ್ ಜೋಡೋ ಯಾತ್ರೆ

Last Updated : Nov 23, 2022, 11:09 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.