ನವದೆಹಲಿ : ಕೋವಿಡ್ ವಿರುದ್ಧ ಕೋವಾಕ್ಸಿನ್ ಲಸಿಕೆ ತಯಾರಕ ಸಂಸ್ಥೆ ಭಾರತ್ ಬಯೋಟೆಕ್ ಕ್ಷಯರೋಗದ ವಿರುದ್ಧ ಲಸಿಕೆಯನ್ನು ಹೊರತರುವ ಚಿಂತನೆ ನಡೆಸಿದೆ. ಈ ಹಿನ್ನೆಲೆ ಶೀಘ್ರದಲ್ಲೇ ಸಂಸ್ಥೆಯು ತಂತ್ರಜ್ಞಾನಕ್ಕಾಗಿ ಮತ್ತೊಂದು ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
ಬುಧವಾರದಂದು ಭಾರತ್ ಬಯೋಟೆಕ್ ಸಂಸ್ಥೆ ಕ್ಷಯರೋಗ ಲಸಿಕೆ ಅಭಿವೃದ್ಧಿ, ಉತ್ಪಾದನೆ ಮತ್ತು ಮಾರುಕಟ್ಟೆಗಾಗಿ ಸ್ಪ್ಯಾನಿಷ್ ಜೈವಿಕ ಔಷಧೀಯ ಸಂಸ್ಥೆಯಾದ ಬಯೋಫ್ಯಾಬ್ರಿ ಜೊತೆ ಪಾಲುದಾರಿಕೆಯ ಒಪ್ಪಂದ ಮಾಡಿಕೊಂಡಿದೆ. ಈ ಪಾಲುದಾರಿಕೆಯು 70 ಕ್ಕೂ ಹೆಚ್ಚು ದೇಶಗಳಲ್ಲಿ ಕ್ಷಯರೋಗ (ಟಿಬಿ) ಲಸಿಕೆಗಳ ಪೂರೈಕೆ ಮಾಡಲಿದೆ. ವಿಶೇಷವಾಗಿ ಆಗ್ನೇಯ ಏಷ್ಯಾ ಮತ್ತು ಉಪ-ಸಹಾರನ್ ಆಫ್ರಿಕಾದಲ್ಲಿ ಹೆಚ್ಚಿನ ಟಿಬಿ ಲಸಿಕೆ ಪೂರೈಸಲಿ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
ಓದಿ: ಅಮೆರಿಕ ಫೆಡರಲ್ ರಿಸರ್ವ್ ಬಡ್ಡಿ ದರ ಏರಿಕೆ ಎಫೆಕ್ಟ್; ದಿನದ ಆರಂಭದಲ್ಲೇ ಸೆನ್ಸೆಕ್ಸ್ 800 ಅಂಕಗಳ ಜಿಗಿತ
ಭಾರತ್ ಬಯೋಟೆಕ್ ಮತ್ತು ಬಯೋಫ್ಯಾಬ್ರಿ ನಡುವಿನ ಈ ಒಪ್ಪಂದವು ವಿಶ್ವದಾದ್ಯಂತ ಉತ್ಪಾದನೆ ಮತ್ತು ಭವಿಷ್ಯದ ಲಸಿಕೆಯ ಪೂರೈಕೆಯನ್ನು 70 ಕ್ಕೂ ಹೆಚ್ಚು ದೇಶಗಳಲ್ಲಿ ಹೆಚ್ಚಿನ ಟಿಬಿ ಲಸಿಕೆ ಪೂರೈಸುತ್ತಿದೆ. ಪ್ರಪಂಚದಲ್ಲೇ ಅತಿ ಹೆಚ್ಚು ಟಿಬಿ ಹೊರೆ ಹೊಂದಿರುವ ದೇಶ ಎಂದರೆ ಅದು ಭಾರತ. ನಮ್ಮ ದೇಶದಲ್ಲಿ ಶೇಕಡಾ 25 ರಷ್ಟು ಪ್ರಕರಣಗಳು ಇವೆ ಎಂದು ಕಂಪನಿ ಹೇಳಿದೆ.
ಭಾರತ್ ಬಯೋಟೆಕ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲ್ಲಾ ಮಾತನಾಡಿ, ಬಯೋಫ್ಯಾಬ್ರಿ ಜೊತೆಗಿನ ಈ ಪಾಲುದಾರಿಕೆಯನ್ನು ಘೋಷಿಸಲು ನಾವು ಹೆಮ್ಮೆಪಡುತ್ತೇವೆ. ಅಲ್ಲಿ MTBVAC ಜಾಗತಿಕ ಟಿಬಿ ಲಸಿಕೆಯಾಗಬಹುದು ಎಂದರು.
ಭಾರತ್ ಬಯೋಟೆಕ್ ತನ್ನ ಮುಂದುವರಿದ ಹಂತದ ಕ್ಲಿನಿಕಲ್ ಅಭಿವೃದ್ಧಿ ಮತ್ತು ಹಂತ-I ಮತ್ತು ಹಂತ-II ಕ್ಲಿನಿಕಲ್ ಪ್ರಯೋಗಗಳ ಭರವಸೆಯ ಫಲಿತಾಂಶಗಳ ಕಾರಣದಿಂದ ಈ ಲಸಿಕೆ ಅಭ್ಯರ್ಥಿಯನ್ನು ಆರಿಸಿಕೊಂಡಿದೆ. ಹಂತ-III ಕ್ಲಿನಿಕಲ್ ಪ್ರಯೋಗಗಳು 2022 ರ ದ್ವಿತೀಯಾರ್ಧದಲ್ಲಿ ಸೆನೆಗಲ್, ದಕ್ಷಿಣ ಆಫ್ರಿಕಾ ಮತ್ತು ಮಡಗಾಸ್ಕರ್‌ನಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಕಂಪನಿ ತಿಳಿಸಿದೆ.
ಭಾರತ್ ಬಯೋಟೆಕ್ ಜೊತೆಗಿನ ಒಪ್ಪಂದವು MTBVAC ಯೋಜನೆಯಲ್ಲಿ ಒಂದು ಮೈಲಿಗಲ್ಲು. ಕ್ಷಯರೋಗವು ಕಡಿಮೆ - ಆದಾಯದ ದೇಶಗಳಲ್ಲಿ ಎಲ್ಲರಿಗೂ ಕೈಗೆಟುಕುವ ಬೆಲೆಯಲ್ಲಿ ಲಸಿಕೆ ದೊರೆಯಬೇಕೆಂಬುದು ಕಂಪನಿಯ ಗುರಿಯಾಗಿದೆ ಎಂದು ಬಯೋಫ್ಯಾಬ್ರಿ ಸಿಇಒ ಸ್ಟೀಬನ್ ರೊಡ್ರಿಗಸ್ ಹೇಳಿದರು.
ಭಾರತ್ ಬಯೋಟೆಕ್‌ನೊಂದಿಗೆ ಸಹಿ ಮಾಡಲಾದ ಒಪ್ಪಂದವು ನಮ್ಮ ಲಸಿಕೆ ಭಾರತ, ಇಂಡೋನೇಷ್ಯಾ, ಫಿಲಿಪ್ಪಿನ್ಸ್ , ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾದಂತಹ ದೇಶಗಳನ್ನು ತಲುಪುತ್ತದೆ ಎಂದು ಖಚಿತಪಡಿಸುತ್ತದೆ. ಅಲ್ಲಿ ಕ್ಷಯರೋಗದಿಂದಾಗಿ ಸಾರ್ವಜನಿಕ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ ಎಂದು ರೊಡ್ರಿಗಸ್ ಹೇಳಿದರು.
ಓದಿ: ಭೋಪಾಲ್ - ನಾಗ್ಪುರ ಹೆದ್ದಾರಿಯಲ್ಲಿ ಹೈದರಾಬಾದ್‌ಗೆ ಬರುತ್ತಿದ್ದ ಬಸ್‌ಗೆ ಬೆಂಕಿ; ಪ್ರಯಾಣಿಕರು ಪಾರು
ಭಾರತದ ಬಯೋಟೆಕ್ ಇಂಟರ್‌ನ್ಯಾಶನಲ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸುಚಿತ್ರಾ ಎಲ್ಲಾ ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ದಕ್ಷಿಣ ವಲಯದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರು 2022-23 ನೇ ಸಾಲಿಗೆ ಈ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ.
ಈ ಹಿಂದೆ ಅವರು CII-ಆಂಧ್ರಪ್ರದೇಶದ ಅಧ್ಯಕ್ಷೆ ಮತ್ತು CII-ದಕ್ಷಿಣ ವಲಯದ ಉಪ ಅಧ್ಯಕ್ಷರಾಗಿದ್ದರು. ಅವರು ಸಿಐಐ ರಾಷ್ಟ್ರೀಯ ಮಂಡಳಿಯ ಸದಸ್ಯರೂ ಆಗಿದ್ದಾರೆ. ಕಮಲ್ ಬಾಲಿ ಅವರು CII-ದಕ್ಷಿಣ ವಲಯದ 2022-23 ನೇ ಸಾಲಿನ ಉಪ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರು ಪ್ರಸ್ತುತ ವೋಲ್ವೋ ಗ್ರೂಪ್ ಇಂಡಿಯಾದ ಅಧ್ಯಕ್ಷ-MD ಆಗಿದ್ದಾರೆ. ಅವರು ಈ ಹಿಂದೆ ಸಿಐಐ-ಕರ್ನಾಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಕಳೆದ ತಿಂಗಳು ಭಾರತ್ ಬಯೋಟೆಕ್ ಮೂಗಿನ ಮೂಲಕ ಹಾಕುವ ಕೋವಿಡ್ ಲಸಿಕೆ ಬಿಬಿವಿ 154ಗಾಗಿ 3 ನೇ ಹಂತದ ಕ್ಲಿನಿಕಲ್ ಪ್ರಯೋಗಗಳಿಗೆ ಅನುಮೋದನೆಯನ್ನು ಪಡೆದುಕೊಂಡಿತ್ತು.