ಚಂಡೀಗಢ: ಬಂಧನದ ಭೀತಿಯಲ್ಲಿರುವ ಕಾಂಗ್ರೆಸ್ ನಾಯಕ ಹಾಗೂ ಪಂಜಾಬ್ ಮಾಜಿ ಸಚಿವ ಭರತ್ ಭೂಷಣ್ ಆಶು ಅವರು ತಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಮುನ್ನ ಏಳು ದಿನಗಳ ಕಾಲಾವಕಾಶ ನೀಡುವಂತೆ ಹಾಗೂ ತಮ್ಮ ವಿರುದ್ಧದ ದೂರಿನ ಬಗ್ಗೆ ನ್ಯಾಯಯುತ ತನಿಖೆ ನಡೆಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಅವ್ಯವಹಾರ ಆರೋಪ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ನಡೆದ 2000 ಕೋಟಿ ರೂ.ಗಳ ಟೆಂಡರ್ ಹಗರಣದಲ್ಲಿ ಮಾಜಿ ಸಚಿವ ಭರತ್ ಭೂಷಣ್ ಆಶು ಭಾಗಿಯಾಗಿದ್ದಾರೆ ಎಂದು ಸಣ್ಣ ಗುತ್ತಿಗೆದಾರರು ಆರೋಪಿಸಿದ್ದಾರೆ. ಸದ್ಯ ಪಂಜಾಬ್ ವಿಜಿಲೆನ್ಸ್ ಬ್ಯೂರೋ ತನಿಖೆ ನಡೆಸುತ್ತಿದ್ದು, ಆಶು ಯಾವ ಸಮಯದಲ್ಲಾದರೂ ಬಂಧನಕ್ಕೊಳಗಾಗಬಹುದು.
ಹೈಕೋರ್ಟ್‌ನಲ್ಲಿ ವಿಚಾರಣೆ ಸಾಧ್ಯತೆ?: ಟೆಂಡರ್ ಹಗರಣದ ಕುರಿತು ಮಾಜಿ ಸಚಿವರ ವಿರುದ್ಧ ದೂರು ದಾಖಲಾಗಿದೆ. ಇದೀಗ ಇದೇ ಪ್ರಕರಣದಲ್ಲಿ ಬಂಧನ ತಪ್ಪಿಸಲು ಆಶು ಹೈಕೋರ್ಟ್‌ನ ಮೊರೆ ಹೋಗಿದ್ದಾರೆ. ಆಶು ಅವರು ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ, ತಮ್ಮ ವಿರುದ್ಧ ಯಾವುದೇ ದೂರುಗಳಿದ್ದರೆ ಅದನ್ನು ಸರಿಯಾಗಿ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಡಿಸಿ ನೇತೃತ್ವದ ಸಮಿತಿಗಳು ಟೆಂಡರ್ ನೀಡುತ್ತವೆ. ಆದರೆ, ನನ್ನ ಮೇಲೆ ವಿನಾಕಾರಣ ಆರೋಪ ಹೊರಿಸಲಾಗುತ್ತಿದೆ. ಪಂಜಾಬ್‌ನಲ್ಲಿ ಎಎಪಿ ಸರ್ಕಾರ ರಾಜಕೀಯ ಸೇಡಿನ ಉದ್ದೇಶದಿಂದ ಕೆಲಸ ಮಾಡಬಾರದು ಎಂದು ಆಶು ಹೇಳಿದ್ದಾರೆ.
ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಕೇಸ್: 10 ತಾಸು ರಾಹುಲ್ಗೆ ಇಡಿ ಡ್ರಿಲ್... ಇಂದೂ ವಿಚಾರಣೆ ಸಾಧ್ಯತೆ