ETV Bharat / bharat

ಬಜೆಟ್​ ಮಂಡನೆ ಆಯ್ತು...ಸಚಿವ ಸಂಪುಟ ವಿಸ್ತರಣೆಗೆ ಭಗವಂತ್​ ಮಾನ್​ ಸಿದ್ಧತೆ: ಕೇಜ್ರಿವಾಲ್​​​ ಭೇಟಿ, ಚರ್ಚೆ - ಕೇಜ್ರಿವಾಲ್​​​ ಭೇಟಿ ಮಾಡಿದ ಪಂಜಾಬ್​ ಸಿಎಂ ಭಗವಂತ್​ ಮಾನ್​

ಭಗವಂತ್ ಮಾನ್​ ಅವರು ತಮ್ಮ ಸಚಿವ ಸಂಪುಟಕ್ಕೆ ಐವರು ಸಚಿವರನ್ನು ಸೇರಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಸ್ತರಣೆಯಲ್ಲಿ ಎರಡನೇ ಬಾರಿಗೆ ಶಾಸಕರಾಗುವ ಇಬ್ಬರು ಸಚಿವರಿರಲಿದ್ದಾರೆ. ಇನ್ನುಳಿದಂತೆ ಮೂವರು ಹೊಸಬರಿಗೆ ಸಂಪುಟದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ

Bhagwant Mann and Kejriwal meeting
Bhagwant Mann and Kejriwal meeting
author img

By

Published : Jul 2, 2022, 10:33 AM IST

ಚಂಡೀಗಢ: ಅಧಿಕಾರಕ್ಕೆ ಬಂದ ಮೇಲೆ ಎಎಪಿ ನೇತೃತ್ವದ ಪಂಜಾಬ್ ರಾಜ್ಯ ಸರ್ಕಾರ ಜೂನ್ 27 ರಂದು ಚೊಚ್ಚಲ ಬಜೆಟ್ ಮಂಡಿಸಿದೆ. ಇದಾದ ಬಳಿಕ ಈಗ ​ ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಮಾನ್​ ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಸಂಪುಟ ವಿಸ್ತರಣೆ ಸಂಬಂಧ ಸಿಎಂ ಭಗವಂತ್ ಮಾನ್ ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ನಡುವೆ ಪಂಜಾಬ್ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಸುಮಾರು ಮೂರು ಗಂಟೆಗಳ ಕಾಲ ಸಭೆ ನಡೆದಿದೆ ಎಂದು ತಿಳಿದು ಬಂದಿದೆ. ಸಭೆಯಲ್ಲಿ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಕೂಡ ಉಪಸ್ಥಿತರಿದ್ದರು ಎನ್ನಲಾಗಿದೆ.

ಮಾನ್​ ಸಂಪುಟ ಸೇರಲಿದ್ದಾರೆ ಐವರು ಶಾಸಕರು: ಭಗವಂತ್ ಮಾನ್​ ಅವರು ತಮ್ಮ ಸಚಿವ ಸಂಪುಟಕ್ಕೆ ಐವರು ಸಚಿವರನ್ನು ಸೇರಿಸಿಕೊಳ್ಳಲಿದ್ದಾರೆ. ಈ ವಿಸ್ತರಣೆಯಲ್ಲಿ ಎರಡನೇ ಬಾರಿಗೆ ಶಾಸಕರಾಗುವ ಇಬ್ಬರು ಸಚಿವರಿರಲಿದ್ದಾರೆ. ಇನ್ನುಳಿದಂತೆ ಮೂವರು ಹೊಸಬರಿಗೆ ಸಂಪುಟದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ. ಅಮನ್ ಅರೋರಾ, ಪ್ರೊಫೆಸರ್ ಬಲ್ಜಿಂದರ್ ಕೌರ್ ಮತ್ತು ಸರ್ವಜಿತ್ ಕೌರ್ ಮನುಕೆ ಮಂತ್ರಿಗಿರಿ ರೇಸ್‌ನಲ್ಲಿದ್ದಾರೆ ಎನ್ನಲಾಗಿದೆ.

ಭ್ರಷ್ಟಾಚಾರ ಆರೋಪದ ಮೇಲೆ ಆರೋಗ್ಯ ಸಚಿವ ಡಾ.ವಿಜಯ್ ಸಿಂಗ್ಲಾ ಅವರನ್ನು ವಜಾಗೊಳಿಸಿದ್ದರು. ಅಂದಿನಿಂದ ಎಂಟು ಸಚಿವ ಸ್ಥಾನಗಳು ಖಾಲಿ ಬಿದ್ದಿವೆ. ಸರ್ಕಾರ ರಚನೆಯಾದ ನಂತರ ಸಿಎಂ ಭಗವಂತ್ ಮಾನ್ ಹೊರತುಪಡಿಸಿ 10 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರು.

ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರನ್ನು ವಜಾಗೊಳಿಸಿದ ನಂತರ ಮುಖ್ಯಮಂತ್ರಿ ಭಗವಂತ್ ಮಾನ್ ಅವರೇ ಆ ಖಾತೆಯ ಜಬಾಬ್ದಾರಿ ತೆಗೆದುಕೊಂಡಿದ್ದಾರೆ. ಪ್ರಸ್ತುತ ಅವರ ಬಳಿ ಈಗ ಬರೋಬ್ಬರಿ 28 ಇಲಾಖೆಗಳ ಹೊಣೆ ಇದೆ. ಈ ಹೊಣೆ ಇಳಿಸಲು ಶೀಘ್ರ ಸಚಿವ ಸಂಪುಟ ವಿಸ್ತರಣೆ ಮಾಡಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ:ಉದ್ದವ್​ ಆಟ ಶುರು: ಶಿವಸೇನಾ ನಾಯಕನ ಸ್ಥಾನದಿಂದ ಶಿಂಧೆ ವಜಾಗೊಳಿಸಿದ ಠಾಕ್ರೆ!

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.