ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿನ ಬಿಎಫ್.7 ರೂಪಾಂತರದ ಭೀತಿ ಹೆಚ್ಚಾಗಿರುವ ನಡುವೆ ಈ ವೈರಾಣು ಕುರಿತಾಗಿ ಮುಂದಿನ ಒಂದು ತಿಂಗಳು ನಿರ್ಣಾಯಕವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದರು. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ರೂಪಾಂತರವು ಭಾರತಕ್ಕೂ ಕಾಲಿಡಬಹುದು ಎಂದು ಎಚ್ಚರಿಸಿದ್ದಾರೆ.
ಇದೇ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಜನರು ಕೋವಿಡ್ನ ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಆದರೆ, ಮಾಸ್ಕ್ ಧರಿಸುವುದು ಇನ್ನೂ ಕಡ್ಡಾಯ ಮಾಡಿಲ್ಲ ಎಂದೂ ತಿಳಿಸಿದರು.
ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಲ್ಲಿ ದೇಶಗಳಿಂದ ಬಂದ ಆರು ಸಾವಿರ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಅದರಲ್ಲಿ 38 ಜನರಿಗೆ ಪಾಸಿಟಿವ್ ಸೋಂಕು ಕಂಡುಬಂದಿದೆ. ಅದರಲ್ಲೂ, ಬಿಎಫ್.7 ರೂಪಾಂತರದ ಸೋಂಕು ನಿಯಂತ್ರಣ ಮತ್ತು ಪರಿಣಾಮಕಾರಿ ಲಸಿಕೆಗೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಇಯರ್ ಎಂಡ್ ಸಂಭ್ರಮಾಚರಣೆಗೆಂದು ಕೊಡಗಿನತ್ತ ಪ್ರವಾಸಿಗರ ಚಿತ್ತ: ಪ್ರವಾಸಿ ಸ್ಥಳಗಳಲ್ಲಿ ಕಟ್ಟೆಚ್ಚರ