ಬೈತುಲ(ಮಧ್ಯಪ್ರದೇಶ): ಇಲ್ಲಿನ ಘೋರಾಡೋಂಗ್ರಿಯಲ್ಲಿ ವಿಶಿಷ್ಟ ಮದುವೆಯೊಂದು ನಡೆದಿದೆ. ಎಲ್ಲ ಮದುವೆಗಳಲ್ಲಿ ವರ ಮಿರ- ಮಿರ ಮಿಂಚುವುದನ್ನು ಕಾಣುತ್ತೇವೆ. ಆದರೆ ಈ ಮದುವೆಯಲ್ಲಿ ವಧು ಮಹಾರಾಜನಂತೆ ಕಂಗೊಳಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಹೌದು ಈ ಮಾತಿಗೆ ಇಂಬು ನೀಡುವಂತೆ ವಧು ಒಬ್ಬರು ವಿಶಿಷ್ಟ ಶೈಲಿಯಲ್ಲಿ ಮಂಟಪ ಪ್ರವೇಶಿಸಿ ಗಮನ ಸೆಳೆದರು. ಇದನ್ನು ನೋಡಿದ ಜನರು ಆಶ್ಚರ್ಯಚಕಿತರಾದರು. ವಧು ಕುದುರೆ ಏರಿ ಮಂಟಪ ತಲುಪಿದ್ದು ಮದುವೆಯಲ್ಲಿ ಸೇರಿದ್ದವರನ್ನು ಒಂದು ಕ್ಷಣ ಅಚ್ಚರಿಗೆ ದೂಡಿತು. ಎಲ್ಲೋ ಒಂಟೆ ಮೇಲೆ, ಆನೆಯ ಮೇಲೆ, ಇನ್ನೆಲ್ಲೋ ಹೆಲಿಕಾಪ್ಟರ್ನಲ್ಲಿ ವರ ಬಂದು ವಿವಾಹ ಆಗುವುದನ್ನು ಕೇಳಿರುತ್ತೇವೆ. ಆದರೆ ಇಲ್ಲಿ ಸ್ಪಲ್ಪ ಉಲ್ಟಾ ಆಗಿದೆ. ಮುಸುಕಿನ ವೇಷದಲ್ಲಿ ನಾಚಿ ನೀರಾಗುತ್ತಿದ್ದ ಮದುಮಗಳು, ಅಳಕುತ್ತಲೇ ಮದುವೆ ಮಂಟಪ ಪ್ರವೇಶಿಸುತ್ತಿದ್ದಳು. ಆದರೆ ಈಗ ಕಾಲ ಬದಲಾಗಿದ್ದು, ಹೆಣ್ಣುಮಕ್ಕಳು ಸಹ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಮಾತಿಗೆ ಇಂಬು ನೀಡುವಂತೆ ಘೋರಡೋಂಗ್ರಿಯಲ್ಲಿ ವಧು ಲಲಿತಾ ಕುದುರೆ ಏರಿ ಮಂಟಪ ತಲುಪಿದರು. ಲಲಿತಾ ಅವರ ವಿವಾಹವು ದಂಡಿವಾರದ (ಹೊಶಂಗಾಬಾದ್) ದೀಪಕ್ ಅವರೊಂದಿಗೆ ಘೋರಡೋಂಗ್ರಿಯಲ್ಲಿ ಅದ್ದೂರಿಯಾಗಿ ನಡೆಯಿತು. ವರ ದೀಪಕ್ ಕೂಡ ಮದುಮಗಳ ಆಗಮನ ಶೈಲಿ ಫಿದಾ ಆದರು. ಮಧುಮಗಳ ವಿನೂತನ ಎಂಟ್ರಿ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನು ಓದಿ:'ನಾಗ್ ಔರ್ ನಾಗಿನಿ ಕಿ ಲವ್ ಸ್ಟೋರಿ'... ಲವರ್ಗೋಸ್ಕರ ಪ್ರಾಣಬಿಟ್ಟ ಹಾವು!