ಕೋಲ್ಕತ್ತಾ: ಪಶ್ಚಿಮ ಬಂಗಾಳದ 396 ವಿಧಾನಸಭಾ ಕ್ಷೇತ್ರಗಳ ಪೈಕಿ ಇಂದು 4ನೇ ಹಂತದಲ್ಲಿ 44 ಕ್ಷೇತ್ರಗಳಿಗೆ ವೋಟಿಂಗ್ ಆಗಿದ್ದು, ಶೇ. 76ರಷ್ಟು ಮತದಾನವಾಗಿದೆ.
4ನೇ ಹಂತದ ಮತದಾನದಲ್ಲಿ ಪಶ್ಚಿಮ ಬಂಗಾಳದ 5 ಜಿಲ್ಲೆಗಳ 44 ಕ್ಷೇತ್ರಗಳಿಗೆ ಮತದಾನವಾಗಿದ್ದು, ಪ್ರಮುಖವಾಗಿ ಕೂಚ್ ಬಿಹಾರ್, ಅಲಿಪುರ್ದೌರ್, ದಕ್ಷಿಣ 24 ಪರಗಣ, ಹರಾ ಹಾಗೂ ಹೂಗ್ಲಿ ಪ್ರದೇಶಗಳಲ್ಲಿ ವೋಟಿಂಗ್ ಆಗಿದೆ. ಆದರೆ ಕೂಚ್ ಬಿಹಾರದಲ್ಲಿ ಭಾರೀ ಹಿಂಸಾಚಾರ ನಡೆದಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ.
4ನೇ ಹಂತದ ಚುನಾವಣೆಯಲ್ಲಿ ಒಟ್ಟು 373 ಅಭ್ಯರ್ಥಿಗಳು ಕಣದಲ್ಲಿದ್ದರು. ಒಟ್ಟು 1,15,81,022 ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಪ್ರಮುಖವಾಗಿ ಇಂದು ನಡೆದ ಚುನಾವಣೆಗೆ ಘಟಾನುಘಟಿಗಳು ಸ್ಪರ್ಧೆ ಮಾಡಿದ್ದರು. ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ, ಮಮತಾ ಬ್ಯಾನರ್ಜಿ ಆಪ್ತ ಪಾರ್ಥಾ ಚಟರ್ಜಿ, ಕ್ರಿಕೆಟಿಗ ಮನೋಜ್ ತಿವಾರಿ, ನಟಿ ಪಾಯೆಲ್ ಸರ್ಕಾರ್, ರಾಜೀವ್ ಬ್ಯಾನರ್ಜಿ, ಸಂಸದರಾದ ಲಾಕೆಟ್ ಚಟರ್ಜಿ ಕಣದಲ್ಲಿದ್ದರು.
-
#WATCH BJP leader Locket Chatterjee's car attacked by locals in Hoogly during the fourth phase of West Bengal assembly elections #WestBengal pic.twitter.com/aQAgzWI94v
— ANI (@ANI) April 10, 2021 " class="align-text-top noRightClick twitterSection" data="
">#WATCH BJP leader Locket Chatterjee's car attacked by locals in Hoogly during the fourth phase of West Bengal assembly elections #WestBengal pic.twitter.com/aQAgzWI94v
— ANI (@ANI) April 10, 2021#WATCH BJP leader Locket Chatterjee's car attacked by locals in Hoogly during the fourth phase of West Bengal assembly elections #WestBengal pic.twitter.com/aQAgzWI94v
— ANI (@ANI) April 10, 2021
ಇದನ್ನೂ ಓದಿ: ಯುಪಿಯಲ್ಲಿ ಭೀಕರ ಅಪಘಾತ: 10 ಸಾವು, 30 ಮಂದಿಗೆ ಗಾಯ
ಮತದಾನ ಮಾಡ್ತಲು ಬಂದಿದ್ದ ಸ್ಥಳೀಯರು ಸಿಐಎಸ್ಎಫ್ ಸಿಬ್ಬಂದಿ ಮೇಲೆ ದಾಳಿ ನಡೆಸಿ ಬಂದೂಕು ಕಸಿದುಕೊಳ್ಳಲು ಮುಂದಾದಾಗ ಗುಂಡು ಹಾರಿಸಲಾಗಿದ್ದು, ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ.