ಕೋಲ್ಕತ್ತಾ: ಜಾನುವಾರು ಹಗರಣದಲ್ಲಿ ತೃಣಮೂಲ ಕಾಂಗ್ರೆಸ್ ಪ್ರಭಾವಿ ನಾಯಕ ಅನುಬ್ರತ್ ಮಂಡಲ್ ಅವರ ಸಹೋದರಿಯ ಪತಿ ಕಮಲ್ಕಾಂತ್ ಘೋಷ್ಗೆ ಇಡಿ ಸಮನ್ಸ್ ಜಾರಿ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ಹಲವು ಕೋಟಿಗಳ ಜಾನುವಾರು ಹಗರಣದ ಕುರಿತು ಈಗಾಗಲೇ ಜಾರಿ ನಿರ್ದೆಶನಾಲಯ ತನಿಖೆ ಆರಂಭಿಸಿದೆ.
ಈ ಪ್ರಕರಣದ ವಿಚಾರಣೆ ಸಂಬಂಧ ಇದೇ ನವಂಬರ್ 11 ಮತ್ತು 12ರಂದು ದೆಹಲಿ ಮುಖ್ಯ ಕಚೇರಿಗೆ ಆಗಮಿಸುವಂತೆ ಘೋಷ್ಗೆ ಸಮನ್ಸ್ನಲ್ಲಿ ಸೂಚಿಸಲಾಗಿದೆ. ಬ್ಯಾಂಕ್ ಅಕೌಂಟ್ಗೆ ಸಂಬಂಧಿಸಿದ ಕೆಲವು ಪ್ರಮುಖ ದಾಖಲೆಗಳಿಗೆ ಅವರ ಸಹಿ ಹಾಕಿರುವುದು ಪತ್ತೆಯಾಗಿದೆ. ಈ ಪ್ರಕರಣ ಸಂಬಂಧ ಇಡಿ ವಿಚಾರಣೆ ನಡೆಸಲಿದೆ.
ಸಹಿಗಳ ಹೋಲಿಕೆ: ಒಂದೇ ಖಾತೆಯನ್ನು ಹಲವು ವ್ಯಕ್ತಿ ಹೊಂದಿರುವುದು. ಅದರಲ್ಲೂ ಅನುಬ್ರತ ಮಂಡಲ್ ಅವರ ಸಂಬಂಧಿ ಅಥವಾ ಆತ್ಮೀಯ ಸಹಚರರು ಹೊಂದಿರುವುದು ತನಿಖೆ ವೇಳೆ ಕಂಡು ಬಂದಿದೆ. ಅದರಲ್ಲಿ ಕೆಲವು ದಾಖಲೆಗಳಿಗೆ ಹಾಕಿರುವ ಸಹಿ ಪರಿಶೀಲಿಸಿದಾಗ ಅದು ಘೋಷ್ ಅವರ ಸಹಿಗೆ ಹೋಲುತ್ತಿದೆ. ಈ ಬ್ಯಾಂಕ್ ಖಾತೆ ನಿರ್ವಹಣೆ ಸಂಬಂಧ ಕುರಿತು ಮಾಹಿತಿ ಪಡೆಯಲಾಗುವುದು ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ಬೊಲ್ಪರ್ ಮುನ್ಸಿಪಾಲಿಟಿ ವಾರ್ಡ್ ನಂಬರ್ 19ರ ಬಿಸ್ವಜ್ಯೋತಿ ಬಂಡೋಪಾಧ್ಯಾಯ ಅವರ ಖಾತೆಯಿಂದ 46ಲಕ್ಷ ಜಮೆಯಾಗಿದ್ದು, ಈ ಬಗ್ಗೆ ಕೂಡ ಪರಿಶೀಲನೆ ನಡೆಸಲಾಗಿದೆ. ಈ ಹಣದ ಮೂಲಗಳ ಬಗ್ಗೆ ಕೂಡ ಪ್ರಶ್ನಿಸಲಾಗುವುದು. ಈ ಬಗ್ಗೆ ಆಳವಾದ ತನಿಖೆ ನಡೆಸಲಾಗುತ್ತಿದೆ. ಈ ಹಗರಣದಲ್ಲಿ ಅನೇಕ ಸರಣಿ ಬ್ಯಾಂಕ್ ಖಾತೆಗಳನ್ನು ಬಳಕೆ ಮಾಡಲಾಗಿದೆ.
ಚೋಬಿ ಮಂಡಲ್ ಹೆಸರಲ್ಲಿ ಬ್ಯಾಂಕ್ ಖಾತೆ: ಈ ಖಾತೆಗಳಲ್ಲಿ ಕೆಲವು ವೈಯಕ್ತಿಕವಾಗಿದ್ದು, ಮಂಡಲ್ ಮತ್ತು ಅವರ ಕುಟುಂಬ, ಸಂಬಂಧಿಕರು ಮತ್ತು ಸಹಚರೊಂದಿಗೆ ಜಂಟಿಯಾಗಿದೆ. ಇದರಲ್ಲಿ ಕೆಲವೊಂದನ್ನು ಇಡಿ ಪತ್ತೆ ಮಾಡಿದೆ. ಈ ವೇಳೆ ದಿವಂಗತ ಚೋಬಿ ಮೊಂಡಲ್ ಅವರ ಹೆಂಡತಿ ಹೆಸರಿನಲ್ಲಿ ಕೆಲವು ಬ್ಯಾಂಕ್ ಖಾತೆ ಮತ್ತು ಫಿಕ್ಸ್ಡ್ ಡೆಪಾಸಿಟ್ ಹೊಂದಿರುವುದು ಪತ್ತೆಯಾಗಿದೆ. ಮೊಂಡಲ್ ಅವರ ಸಿಎ ಆಗಿರುವ ಮೊನಿಶ್ ಕಥಾರಿ ಅವರ ಪಾತ್ರ ಹೆಚ್ಚು ನಿರ್ಣಾಯಕವಾಗಿರುವುದು ಕಂಡು ಬಂದಿದೆ.
ಇದನ್ನು ಕೂಡ ವಿಚಾರಣೆ ವೇಳೆ ಖಾತೆ ನಿರ್ವಹಣೆ ಬಗ್ಗೆ ಕಥಾರಿ ಅವರಿಗೆ ಹೆಚ್ಚಿನ ಜ್ಞಾನ ಇರುವುದಾಗಿ ಮೊಂಡಲ್ ಅವರ ಮಗಳು ಸುಖನ್ಯಾ ಮಂಡಲ್ ತಿಳಿಸಿದ್ದರು.
ಇದನ್ನೂ ಓದಿ: ಸೇನಾ ಭೂಮಿ-ಖನಿಜ ಗುತ್ತಿಗೆ ಹಗರಣ: ಪಶ್ಚಿಮ ಬಂಗಾಳ, ಜಾರ್ಖಂಡ್ನಲ್ಲಿ ಇಡಿ-ಐಟಿ ದಾಳಿ