ಶಾಂತಿನಿಕೇತನ(ಪಶ್ಚಿಮ ಬಂಗಾಳ): ಇತ್ತೀಚೆಗೆ ಪೆಟ್ರೋಲ್ ಹಾಗೂ ಡೀಸೆಲ್ಗೆ ಚಿನ್ನದ ಬೆಲೆ ಬಂದಿದೆ. ಇಂಧನ ದರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಈ ಮಧ್ಯೆ ಶಾಂತಿನಿಕೇತನ ಮೂಲದ ವಿಜ್ಞಾನಿ ಡಾ.ಪೂರ್ಣಬ್ರತ ಚಕ್ರವರ್ತಿ ತಾವು ಕಂಡು ಹಿಡಿದ ಯಂತ್ರದ ಮೂಲಕ ಪ್ಲಾಸ್ಟಿಕ್‌ನಿಂದ ಪೆಟ್ರೋಲ್ ಮತ್ತು ಗ್ಯಾಸ್ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈಗಾಗಲೇ ಅವರ ಈ ಸಂಶೋಧನೆಯನ್ನು ಕೇಂದ್ರ ಸರ್ಕಾರದ ಅಡಿ ಬರುವ ಬೌದ್ಧಿಕ ಆಸ್ತಿ ಹಕ್ಕುಗಳ ಇಲಾಖೆಯು ಒಪ್ಪಿಕೊಂಡಿದೆ."ನಾನು ಈ ವರ್ಷದ ಜೂನ್‌ನಲ್ಲಿ ಅಕ್ನಾಲೆಡ್ಜ್ ಮೆಂಟ್ ಅನ್ನು ಸ್ವೀಕರಿಸಿದ್ದೇನೆ" ಎಂದು ಚಕ್ರವರ್ತಿ ತಿಳಿಸಿದ್ದಾರೆ.
ಮನೆಯಲ್ಲಿ ಪ್ರಯೋಗದ ಉಪಯೋಗ
ಇನ್ನು ಪ್ಲಾಸ್ಟಿಕ್‌ನಿಂದ ಪೆಟ್ರೋಲ್ ಹೊರತೆಗೆಯಲು ಸಾಧ್ಯವಾದರೆ, ಬಹಳ ಪ್ರಯೋಜನಕಾರಿಯಾಗಲಿದೆ. ಚಕ್ರವರ್ತಿ ಈಗಾಗಲೇ ಶಾಂತಿನಿಕೇತನದಲ್ಲಿರುವ ತಮ್ಮ ನಿವಾಸದಲ್ಲಿ ಪ್ಲಾಸ್ಟಿಕ್‌ನಿಂದ ಇಂಧನ ತೆಗೆಯುವ ಯಂತ್ರವನ್ನು ಸ್ಥಾಪಿಸಿದ್ದಾರೆ.
ಇಂಧನ ಹೇಗೆ ಉತ್ಪಾದನೆ ಆಗುತ್ತದೆ
ಈ ಯಂತ್ರವು ಪೆಟ್ರೋಲ್ ಜೊತೆಗೆ ಪ್ಲಾಸ್ಟಿಕ್‌ನಿಂದ ಗ್ಯಾಸ್ ಅನ್ನು ಹೊರತೆಗೆಯುವ ಸಾಮರ್ಥ್ಯವನ್ನು ಹೊಂದಿದೆ. ಪ್ಲಾಸ್ಟಿಕ್‌ನಿಂದ ತೆಗೆದ ಇಂಧನ ಮತ್ತು ಗ್ಯಾಸ್ ಅನ್ನು ಇವರು ತನ್ನ ಸ್ವಂತ ಉದ್ದೇಶಕ್ಕಾಗಿ ಈಗಾಗಲೇ ಬಳಕೆ ಮಾಡಿಕೊಂಡಿದ್ದಾರೆ. ಚಕ್ರವರ್ತಿ ಪ್ರಕಾರ ಒಂದು ಕಿಲೋಗ್ರಾಂ ಪ್ಲಾಸ್ಟಿಕ್ ಸುಮಾರು 950 ಗ್ರಾಂ ಲಿಕ್ವಿಡ್ ಗ್ಯಾಸ್ ಅನ್ನು ಉತ್ಪಾದಿಸುತ್ತದೆ.
ಯಂತ್ರದ ಮೂಲಕ ಪ್ಲಾಸ್ಟಿಕ್‌ನಿಂದ ಹೊರತೆಗೆಯಲಾದ ಇಂಧನವನ್ನು ಯಾವುದೇ ಯಂತ್ರ ಅಥವಾ ಕಾರ್ ಎಂಜಿನ್ ಇಲ್ಲವೇ ಕಡಿಮೆ ಸಾಮರ್ಥ್ಯದ ಎಂಜಿನ್‌ಗಳನ್ನು ಚಲಾಯಿಸಲು ಬಳಸಬಹುದು. ಆದರೆ ಅದೇ ಇಂಧನವನ್ನು , ಹೆಚ್ಚಿನ ಸಂಸ್ಕರಣೆಯ ನಂತರ ಹೆಚ್ಚಿನ ಸಾಮರ್ಥ್ಯದ ಎಂಜಿನ್‌ಗಳನ್ನು ಸಹ ನಿರ್ವಹಿಸಬಹುದು ಮತ್ತು ಈ ಮಷಿನ್ ಸಹಾಯದಿಂದ ಹೊರತೆಗೆದ ಗ್ಯಾಸ್ ಅನ್ನು ಅಡುಗೆ ಮಾಡಲು ಬಳಸಿಕೊಳ್ಳಬಹುದು.
ಪ್ಲಾಸ್ಟಿಕ್‌ನಿಂದ ಇಂಧನ ಮತ್ತು ಅನಿಲವನ್ನು ಸುಲಭವಾಗಿ ಹೊರತೆಗೆಯುವ ಈ ಪ್ರಕ್ರಿಯೆಗೆ ಹೆಚ್ಚು ಸಮಯ ತಗುಲುವುದಿಲ್ಲ. ಹೀಗಾಗಿ ಪಂಚಾಯತ್‌ಗಳು ಮತ್ತು ಪುರಸಭೆಗಳು ಈ ಯಂತ್ರಗಳನ್ನು ಪ್ಲಾಸ್ಟಿಕ್ ಉತ್ಪನ್ನಗಳನ್ನು ಡಂಪ್ ಮಾಡುವ ಅಥವಾ ಸುರಿಯುವ ಸ್ಥಳಗಳಲ್ಲಿ ಇಟ್ಟರೆ, ಸುಲಭವಾಗಿ ಪೆಟ್ರೋಲ್ ಮತ್ತು ಗ್ಯಾಸ್ ಅನ್ನು ಹೊರತೆಗೆಯಬಹುದು ಎಂದು ಡಾ. ಚಕ್ರವರ್ತಿ ಹೇಳುತ್ತಾರೆ.