ಲೂಧಿಯಾನ: ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯಲ್ಲಿ ಹಚ್ಚೆ (ಟ್ಯಾಟೂ) ಹಾಕಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಯುವಕರು ತಮ್ಮ ದೇಹದ ವಿವಿಧ ಭಾಗಗಳಲ್ಲಿ ವಿವಿಧ ಉದ್ದೇಶಗಳಿಗಾಗಿ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಅದನ್ನು ಅನುಸರಿಸಲು ಪ್ರಯತ್ನಿಸುತ್ತಾರೆ.
ಕೆಲವೊಮ್ಮೆ ಈ ಟ್ಯಾಟೂಗೆ ನಾವು ಬೆಲೆ ತೆರಬೇಕಾಗುತ್ತದೆ. ಟ್ಯಾಟೂವನ್ನು ವಿವಿಧ ಬುಡಕಟ್ಟುಗಳ ಸಂಕೇತವಾಗಿ ಬಳಸಲಾಗುತ್ತದೆ. ಹಿಂದಿನ ಕಾಲದಲ್ಲಿ ಮಹಿಳೆಯರು ಕೂಡ ಹಚ್ಚೆ ಹಾಕಿಸಿಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ. ಆದರೆ ಇತ್ತಿಚೀನ ದಿನಗಳಲ್ಲಿ ಟ್ಯಾಟೂದಿಂದ ರೋಗಗಳ ಹರಡುತ್ತಿದ್ದು, ಇದರ ಬಗ್ಗೆ ಕಾಳಜಿ ವಹಿಸಬೇಕಾಗಿದೆ.
ನಮ್ಮ ಸಂಸ್ಕೃತಿಗೆ ಹಚ್ಚೆಗಳ ಸಂಬಂಧ: ಟ್ಯಾಟೂಗಳಿಗೂ ಮತ್ತು ನಮ್ಮ ಸಂಸ್ಕೃತಿಗೂ ಅವಿನಾಭಾವ ಸಂಬಂಧವಿದೆ. ಶತಮಾನಗಳ ಕಾಲದಿಂದಲೂ ಭಾರತದ ಬುಡಕಟ್ಟು ಜನರು ತಮ್ಮ ಬುಡಕಟ್ಟಿನ ಸಂಕೇತವಾಗಿ ಈ ಹಚ್ಚೆಗಳನ್ನು ಹಾಕಿಕೊಳ್ಳುತ್ತಿದ್ದರು. ಭಾರತದಲ್ಲಿ ಹಚ್ಚೆ ಹಾಕಿಸಿಕೊಳ್ಳಲು ಸಾಕಷ್ಟು ಕ್ರೇಜ್ ಇದೆ. ಇದು ನಮ್ಮ ಸಂಸ್ಕೃತಿಯೊಂದಿಗೆ ಸಂಪರ್ಕ ಹೊಂದಿದೆ.
ಹಿಂದಿನ ಕಾಲದಲ್ಲಿ ಯುವಕರು ಹಚ್ಚೆ ಹಾಕಿಸಿಕೊಳ್ಳಲು ಜಾತ್ರೆಗೆ ಹೋಗುತ್ತಿದ್ದರು. ಅನೇಕರು ತಮ್ಮ ತೋಳಿನ ಮೇಲೆ ತಮ್ಮ ಪ್ರೀತಿಪಾತ್ರರ ಹೆಸರುಗಳು, ಗುರುಗಳು, ಧರ್ಮದ ಚಿಹ್ನೆಗಳು ಸೇರಿದಂತೆ ಅನೇಕ ರೀತಿಯ ಟ್ಯಾಟೂಗಳನ್ನು ಹಾಕಿಸಿಕೊಂಡಿದ್ದಾರೆ. ಆಗ ಒಂದು ಪದ್ಧತಿಯಿಂದ ಮುನ್ನೆಚ್ಚರಿಕೆ ವಹಿಸಿ ಹಚ್ಚೆ ಹಾಕುತ್ತಿದ್ದರು. ಆದರೆ, ದಿನ ಕಳೆದಂತೆ ಟ್ಯಾಟೂ ಹಾಕುವವರು ನಿರ್ಲಕ್ಷ್ಯದ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ.
ಓದಿ: 'ಅಪ್ಪು' ಅಭಿಮಾನಕ್ಕೆ ಸಾಕ್ಷಿ ಈ ಊರು: ಇಲ್ಲಿ ಎಲ್ಲರ ಕೈಯಲ್ಲೂ ಪವರ್ಸ್ಟಾರ್ ಟ್ಯಾಟೂ, ಮನೆಯಲ್ಲಿ ಫೋಟೋ
ಟ್ಯಾಟೂದಿಂದಾಗುವ ಕೆಟ್ಟ ಪರಿಣಾಮಗಳು: ಆರೋಗ್ಯ ಇಲಾಖೆಯ ಇತ್ತೀಚಿನ ಅಧ್ಯಯನದ ಪ್ರಕಾರ, ಸುಮಾರು 15 ಪ್ರತಿಶತದಷ್ಟು ಯುವಕರು ತಮ್ಮ ದೇಹದ ಮೇಲೆ ಹಚ್ಚೆ ಹಾಕಿಸಿಕೊಂಡ ನಂತರ ಜಾಂಡೀಸ್‌ನಿಂದ ಬಳಲುತ್ತಿದ್ದಾರೆ. ಅಲ್ಲದೇ ಅನೇಕ ಮಾರಣಾಂತಿಕ ಕಾಯಿಲೆಗಳಿಂದಲೂ ಬಳಲುತ್ತಿದ್ದಾರೆ.
ಕೆಲವೊಮ್ಮೆ ಜನರು ಹಚ್ಚೆ ಹಾಕುವಾಗ ಅದೇ ಸೂಜಿಯನ್ನು ಬಳಸುತ್ತಾರೆ ಎಂದು ಲುಧಿಯಾನ ತಜ್ಞರು ಹೇಳುತ್ತಾರೆ. ಈ ರೀತಿ ಬಳುಸುವುದರಿಂದ ಒಂದು ದೇಹದಿಂದ ಮತ್ತೊಂದು ದೇಹಕ್ಕೆ ರಕ್ತದಿಂದ ಹರಡುವ ರೋಗಗಳನ್ನು ಹರಡುವ ಅಪಾಯವನ್ನುಂಟುಮಾಡುತ್ತದೆ.
ಕಾಮಾಲೆ ಯಕೃತ್ತಿಗೆ ಹಾನಿ ಮಾಡುವ ಪ್ರಮುಖ ಕಾಯಿಲೆಗಳಲ್ಲಿ ಒಂದಾಗಿದೆ ಎಂದು ಹೇಳಿದರು. ಇದು ಯಕೃತ್ತಿನ ಕ್ಯಾನ್ಸರ್ಗೆ ಕಾರಣವಾಗಬಹುದು ಮತ್ತು ಈ ರೋಗಕ್ಕೆ ಇನ್ನೂ ಚಿಕಿತ್ಸೆ ಇಲ್ಲ ಎಂದು ವೈದ್ಯರು ಹೇಳುತ್ತಾರೆ.
ರೋಗ ಹೇಗೆ ಹರಡುತ್ತದೆ: ಲೂಧಿಯಾನದ ಹಿರಿಯ ವೈದ್ಯ ಡಾ. ಇಕ್ಬಾಲ್ ಸಿಂಗ್ ಅವರಿಗೆ ನಾಲ್ಕು ದಶಕಗಳ ಅನುಭವವಿದೆ. ಹಚ್ಚೆ ಹಾಕುವುದರಿಂದ ರೋಗಗಳು ಹರಡುತ್ತವೆ. ಆದರೆ, ಸಿರಿಂಜ್ ಮೂಲಕ ನಮ್ಮ ದೇಹದ ಚರ್ಮಕ್ಕೆ ಶಾಯಿ ತುಂಬುವ ಕೆಲಸ ಮಾಡುತ್ತಾರೆ. ಈ ಶಾಯಿಯಲ್ಲಿ ಹೆಚ್ಚಿನ ಪ್ರಮಾಣದ ಲೋಹವಿರುತ್ತದೆ. ಈ ಲೋಹವು ನಮ್ಮ ರಕ್ತಕ್ಕೆ ಸೇರುತ್ತದೆ. ಇದರಿಂದ ಅಪಾಯ ಯಾವಾಗ ಎದುರಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದರು.
ಕಾಮಾಲೆ ರೋಗ: ಹಚ್ಚೆ ಹಾಕುವಿಕೆಯು ಜಾಂಡೀಸ್ ಸೇರಿದಂತೆ ವಿವಿಧ ಸೋಂಕುಗಳಿಗೆ ಸಂಬಂಧಿಸಿದೆ. ವರದಿಯ ಪ್ರಕಾರ 15 ಪ್ರತಿಶತ ಜಾಂಡೀಸ್ ಪ್ರಕರಣಗಳು ಕಂಡು ಬಂದಿವೆ. ಜಾಂಡೀಸ್ ಒಂದು ಪ್ರಮುಖ ಕಾಯಿಲೆಯಾಗಿದ್ದು, ಇದು ಲಿವರ್ ಕ್ಯಾನ್ಸರ್ಗೆ ಕಾರಣವಾಗಬಹುದು ಎಂದು ವೈದ್ಯರು ಹೇಳಿದ್ದಾರೆ.