ETV Bharat / bharat

ಕೇಂದ್ರ ಬಜೆಟ್ ​​: ಎಲೆಕ್ಟ್ರಿಕ್ ವಾಹನಗಳಿಗಾಗಿ ಬ್ಯಾಟರಿ ವಿನಿಮಯ ನೀತಿ ಘೋಷಣೆ

author img

By

Published : Feb 1, 2022, 2:19 PM IST

ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆಯ ಬಳಕೆ ಉತ್ತೇಜಿಸಲು, ಪರಿಸರ ಸ್ನೇಹಿ ಇಂಧನ ನೀತಿಯನ್ನು ಪರಿಚಯಿಸಲಾಗುವುದು. ಹೊಸ ಬ್ಯಾಟರಿ ವಿನಿಮಯ ನೀತಿಯನ್ನು ತರಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ..

Battery swapping policy for EVs will be introduced, says Union Finance Minister
ಕೇಂದ್ರ ಬಜೆಟ್​​: ಎಲೆಕ್ಟ್ರಿಕ್ ವಾಹನಗಳಿಗಾಗಿ ಬ್ಯಾಟರಿ ವಿನಿಮಯ ನೀತಿ ಘೋಷಣೆ

ನವದೆಹಲಿ : ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಮತ್ತು ಕಾರ್ಬನ್ ಹೊರಸೂಸುವಿಕೆ ಕಡಿಮೆ ಮಾಡಲು ಕೇಂದ್ರ ಸರ್ಕಾರ ಹೊಸ ನೀತಿಯನ್ನು ಪರಿಚಯ ಮಾಡಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರವು ಬ್ಯಾಟರಿ-ಸ್ವಾಪಿಂಗ್ ನೀತಿಯನ್ನು ಹೊರತರಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆಯ ಬಳಕೆ ಉತ್ತೇಜಿಸಲು, ಪರಿಸರ ಸ್ನೇಹಿ ಇಂಧನ ನೀತಿಯನ್ನು ಪರಿಚಯಿಸಲಾಗುವುದು. ಹೊಸ ಬ್ಯಾಟರಿ ವಿನಿಮಯ ನೀತಿಯನ್ನು ತರಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

2022-23ರ ಬಜೆಟ್ ಸಾರ್ವಜನಿಕ ಹೂಡಿಕೆಯ ಮೂಲಕ ಆರ್ಥಿಕ ಬೆಳವಣಿಗೆಗೆ ಅಡಿಪಾಯ ಹಾಕುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಅಂದಾಜು ಶೇ.9.2ರಷ್ಟು ಬೆಳವಣಿಗೆಯಾಗಲಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, ಶೇಕಡಾ 8ರಿಂದ ಶೇಕಡಾ 8.5ರಷ್ಟು ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಕೇಂದ್ರ ಬಜೆಟ್​ 2022 : ಯಾವುದು ಅಗ್ಗ, ಯಾವುದು ದುಬಾರಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.