ಸಾಗರ (ಮಧ್ಯಪ್ರದೇಶ): ಹೆಚ್ಚಿದ ಬಿಸಿಲಿನ ತಾಪದ ನಡುವೆ ಮೊಬೈಲ್ ಬ್ಯಾಟರಿ ಸ್ಫೋಟಗೊಂಡು ಬಾಲಕನೋರ್ವನ ಎರಡು ಕೈ ಬೆರಳು ತುಂಡಾಗಿರುವ ಘಟನೆ ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡೆದಿದೆ. ಅಲ್ಲದೇ, ಬ್ಯಾಟರಿ ಸ್ಫೋಟದ ಸದ್ದು ಕೇಳಿಯೇ ಅಕ್ಕ-ಪಕ್ಕದ ಮನೆಯವರು ಬೆಚ್ಚಿಬಿದ್ದಿದ್ಧಾರೆ.
ಇಲ್ಲಿನ ಐದನೇ ವಾರ್ಡ್ನಲ್ಲಿ ವಾಸವಿದ್ದ ಶಹಜಾದ್ ಎಂಬ 9 ವರ್ಷದ ಬಾಲಕ ಮೊಬೈಲ್ನಲ್ಲಿ ಆಟವಾಡುತ್ತಿದ್ದ. ಈ ವೇಳೆ ಏಕಾಏಕಿ ಕೈಯಲ್ಲಿಯೇ ಮೊಬೈಲ್ ಬ್ಯಾಟರಿ ಸ್ಫೋಟಿಸಿದೆ. ಇದು ಸ್ಫೋಟಗೊಂಡ ತೀವ್ರತೆಗೆ ಬಲಗೈ ಛಿದ್ರವಾಗಿದೆ. ಎರಡು ಬೆರಳುಗಳಿಗೆ ತೀವ್ರವಾದ ಗಾಯವಾಗಿ ತುಂಡಾಗಿವೆ. ಜೊತೆಗೆ ದೇಹದ ಇತರ ಭಾಗಗಳಲ್ಲೂ ಗಾಯಗಳಾಗಿವೆ.
ಈ ಘಟನೆ ವೇಳೆ ಪೋಷಕರು ಕೆಲಸಕ್ಕೆಂದು ಮನೆಯಿಂದ ಹೊರಗೆ ಹೋಗಿದ್ದರು. ಸ್ಫೋಟದ ಸದ್ದು ಕೇಳಿದ ಅಕ್ಕ-ಪಕ್ಕದವರು ದೌಡಾಯಿಸಿ ಗಾಯಗೊಂಡ ಬಾಲಕವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೊದಲಿಗೆ ರಹತ್‌ಗಢ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಬುಂದೇಲ್‌ಖಂಡ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಎಚ್ಚರಿಕೆ ನೀಡಿದರೂ ತಾಯಿಯೊಂದಿಗೆ ವಿವಾಹೇತರ ಸಂಬಂಧ.. ವ್ಯಕ್ತಿ ಗುಪ್ತಾಂಗವನ್ನೇ ಕತ್ತರಿಸಿದ ಮಗಳು!