ತ್ರಿಶೂರ್ (ಕೇರಳ): ಮಹಿಳೆಯೊಬ್ಬರು ಬ್ಯಾಂಕ್‌ನಲ್ಲಿ ಇಟ್ಟಿದ್ದ ಹಣವನ್ನು ಪತಿಗೆ ನೀಡಲು, ಸಹಕಾರಿ ಬ್ಯಾಂಕ್ ನಿರಾಕರಿಸಿದೆ. ಪರಿಣಾಮ ಚಿಕಿತ್ಸೆಗೆ ಹಣವಿಲ್ಲದೆ ಮಹಿಳೆ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕರುವನ್ನೂರು ಕೋ-ಆಪರೇಟಿವ್ ಬ್ಯಾಂಕ್ ವಿರುದ್ಧ ಈ ಗಂಭೀರ ಆರೋಪ ಕೇಳಿಬಂದಿದೆ. ಮಹಿಳೆ 28 ಲಕ್ಷ ರೂಪಾಯಿಯನ್ನು ಠೇವಣಿ ಇಟ್ಟಿದ್ದರು.
ಮಹಿಳೆಯ ಪತಿ ದೇವಸ್ಯ ತನ್ನ ಪತ್ನಿಯ ಚಿಕಿತ್ಸೆಗಾಗಿ ಹಣವನ್ನು ಪಡೆಯಲು ಹಲವಾರು ಬಾರಿ ಬ್ಯಾಂಕ್‌ಗೆ ಹೋಗಿದ್ದಾರೆ. ಆದ್ರೆ ಬ್ಯಾಂಕ್ ಅಧಿಕಾರಿಗಳು ಹಣವನ್ನು ನೀಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಆಸ್ಪತ್ರೆಯಲ್ಲಿ ನಿಧನರಾದ ಫಿಲೋಮಿನಾ (70) ಅವರು ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ: 8ರ ಬಾಲೆಗೆ 75 ವರ್ಷದ ವೃದ್ಧನಿಂದ ಲೈಂಗಿಕ ದೌರ್ಜನ್ಯ: ಸಂತ್ರಸ್ತೆ ಸಾವಿನ ನಂತರ ಕೃತ್ಯದ ವಿಡಿಯೋ ಹೊರಕ್ಕೆ, ಆರು ಜನರ ಸೆರೆ
ಪತಿ ದೇವಸ್ಯ ಕೂಡ 40 ವರ್ಷ ವಿದೇಶದಲ್ಲಿ ದುಡಿದು ತಮ್ಮ ಜೀವಮಾನದ ಉಳಿತಾಯದ ಹಣವನ್ನು ಬ್ಯಾಂಕ್‌ಗೆ ಹಾಕಿದ್ದರು. ಬ್ಯಾಂಕ್ನವರು ಸಕಾಲದಲ್ಲಿ ಹಣ ನೀಡಿದ್ದರೆ ಪತ್ನಿಗೆ ಉತ್ತಮ ಚಿಕಿತ್ಸೆ ಕೊಡಿಸಬಹುದಿತ್ತು ಎಂದು ದೇವಸ್ಯ ಆರೋಪಿಸಿದ್ದಾರೆ. ಫಿಲೋಮಿನಾ ಮಂಗಳವಾರ ಮಧ್ಯರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.