ETV Bharat / bharat

ಬ್ಯಾಂಕ್ ಆಫ್ ಬರೋಡಾ ಗೃಹಸಾಲ ಬಡ್ಡಿದರ ಇಳಿಕೆ: ಶೇ 8.40 ರಿಂದ ಆರಂಭ - ಹೊಸದಾಗಿ ಗೃಹ ಸಾಲ

ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್​ಗಳಲ್ಲಿ ಒಂದಾಗಿರುವ ಬ್ಯಾಂಕ್ ಆಫ್ ಬರೋಡಾ ತನ್ನ ಗೃಹಸಾಲದ ಬಡ್ಡಿದರಗಳನ್ನು ಇಳಿಸಿದೆ. ಅಲ್ಲದೆ ಗೃಹಸಾಲದ ಪ್ರೊಸೆಸಿಂಗ್ ಶುಲ್ಕವನ್ನು ಸಹ ಬ್ಯಾಂಕ್ ಸೀಮಿತ ಅವಧಿಗಾಗಿ ಕಡಿಮೆ ಮಾಡಿದೆ.

Bank of Baroda slashes home loan interest

author img

By

Published : Mar 9, 2023, 1:25 PM IST

ಮುಂಬೈ : ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ (ಬ್ಯಾಂಕ್) ಇಂದು ತನ್ನ ಗೃಹ ಸಾಲದ ಬಡ್ಡಿ ದರಗಳನ್ನು 40 ಮೂಲಾಂಶ (bps) ಅಂದರೆ ವರ್ಷಕ್ಕೆ ಶೇ 8.50 ರಷ್ಟು ಕಡಿತಗೊಳಿಸುವುದಾಗಿ ಪ್ರಕಟಿಸಿದೆ. ಇದಲ್ಲದೆ, ಬ್ಯಾಂಕ್ ತನ್ನ MSME ಸಾಲದ ಬಡ್ಡಿ ದರಗಳನ್ನು ಶೇ 8.40 ಕ್ಕೆ ಇಳಿಸಿದೆ. ಎರಡೂ ಆಫರ್‌ಗಳು ಮಾರ್ಚ್ 5, 2023 ರಿಂದ ಜಾರಿಗೆ ಬರುತ್ತವೆ ಮತ್ತು 31 ಮಾರ್ಚ್ 2023 ರವರೆಗೆ ಸೀಮಿತ ಅವಧಿಗೆ ಮಾನ್ಯವಾಗಿರುತ್ತವೆ. ಈ ಬಡ್ಡಿದರಗಳು ಬ್ಯಾಂಕಿಂಗ್ ಉದ್ಯಮದಲ್ಲಿನ ಅತ್ಯಂತ ಕಡಿಮೆ ಮತ್ತು ಸ್ಪರ್ಧಾತ್ಮಕ ಬಡ್ಡಿ ದರಗಳಲ್ಲಿ ಒಂದಾಗಿವೆ.

ಬ್ಯಾಂಕ್ ತನ್ನ ಬಡ್ಡಿದರಗಳನ್ನು ಕಡಿಮೆ ಮಾಡುವುದರ ಜೊತೆಗೆ, ಗೃಹ ಸಾಲಗಳ ಮೇಲಿನ ಪ್ರೊಸೆಸಿಂಗ್ ಶುಲ್ಕಗಳ ಮೇಲೆ ಶೇ 100 ರಷ್ಟು ಮತ್ತು MSME ಸಾಲಗಳ ಮೇಲಿನ ಪ್ರೊಸೆಸಿಂಗ್ ಶುಲ್ಕಗಳ ಮೇಲೆ ಶೇ 50 ರಷ್ಟು ರಿಯಾಯಿತಿ ನೀಡುತ್ತಿದೆ. ಹೊಸದಾಗಿ ಗೃಹ ಸಾಲ ಪಡೆಯಲು ಬಯಸುವವರು ವಾರ್ಷಿಕ ಶೇ 8.50 ದರದಲ್ಲಿ ಸಾಲ ಪಡೆಯಬಹುದು. ಲೋನ್ ವರ್ಗಾವಣೆ ಮತ್ತು ಗೃಹ ಸುಧಾರಣೆ ಸಾಲಗಳಿಗೆ ಸಹ ಇದೇ ಬಡ್ಡಿದರ ಅನ್ವಯಿಸಲಿದೆ. ಆದಾಗ್ಯೂ ವಾಸ್ತವಿಕವಾಗಿ ವಿಧಿಸಲ್ಪಡುವ ಬಡ್ಡಿದರಗಳು ಸಾಲಗಾರನ ಕ್ರೆಡಿಟ್ ಸ್ಕೋರ್‌ ಅನ್ನು ಆಧರಿಸಿರುತ್ತವೆ.

ಈ ಬಗ್ಗೆ ಮಾತನಾಡಿದ ಬ್ಯಾಂಕ್ ಆಫ್ ಬರೋಡಾದ ಕಾರ್ಯನಿರ್ವಾಹಕ ನಿರ್ದೇಶಕ ಅಜಯ್ ಕೆ ಖುರಾನಾ, ಬ್ಯಾಂಕ್ ತನ್ನ ಗೃಹ ಸಾಲದ ಬಡ್ಡಿದರಗಳನ್ನು ಇಳಿಸಲು ಮತ್ತು ಶೇ 8.50ರಷ್ಟು ವಿಶೇಷ ಸೀಮಿತ ಅವಧಿಯ ಕೊಡುಗೆಯನ್ನು ಪರಿಚಯಿಸಲು ಸಂತೋಷಿಸುತ್ತದೆ. ಈ ಕೊಡುಗೆಯು ಮನೆ ಖರೀದಿದಾರರಿಗೆ ಮನೆ ಖರೀದಿಯನ್ನು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿ ಬಡ್ಡಿದರಗಳು ಗಣನೀಯವಾಗಿ ಏರಿಕೆಯಾಗಿವೆ. ಎಂಎಸ್‌ಎಂಇ ವಲಯಕ್ಕೆ ಬಡ್ಡಿದರಗಳ ಕಡಿತವು ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಮತ್ತಷ್ಟು ಉತ್ತೇಜನ ನೀಡಲಿದೆ ಮತ್ತು ಅವರ ಮಹತ್ವಾಕಾಂಕ್ಷೆಗಳಿಗೆ ಹಣಕಾಸು ಬೆಂಬಲ ಒದಗಿಸಲಿದೆ ಎಂದರು.

ಇನ್ನು ಬ್ಯಾಂಕ್ ಆಫ್ ಬರೋಡಾ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಕೂಡ ತುಂಬಾ ಸರಳಗೊಳಿಸಿದೆ. ಬಿಓಬಿ ವರ್ಲ್ಡ್ ಮೊಬೈಲ್ ಬ್ಯಾಂಕಿಂಗ್ ಆ್ಯಪ್​ನಲ್ಲಿ ಲಾಗ್ ಇನ್ ಮಾಡುವ ಮೂಲಕ ಅಥವಾ ಬ್ಯಾಂಕ್‌ನ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಗ್ರಾಹಕರು 30 ನಿಮಿಷಗಳಲ್ಲಿ ಹೋಮ್ ಲೋನ್‌ಗಾಗಿ ಡಿಜಿಟಲ್ ಆಗಿ ಅರ್ಜಿ ಸಲ್ಲಿಸಬಹುದು ಮತ್ತು ಅನುಮೋದನೆ ಪಡೆಯಬಹುದು. ಅರ್ಜಿದಾರರು ಭಾರತದಾದ್ಯಂತ ಬ್ಯಾಂಕ್ ಆಫ್ ಬರೋಡಾದ ಯಾವುದೇ ಶಾಖೆಗಳಿಗೆ ಭೇಟಿ ನೀಡುವ ಮೂಲಕ ಕೂಡ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.

ಬ್ಯಾಂಕ್ ಆಫ್ ಬರೋಡಾ ಗೃಹ ಸಾಲಗಳ ವಿಶೇಷತೆಗಳು

• ಬಡ್ಡಿ ದರಗಳು ವಾರ್ಷಿಕ ಶೇ 8.50 ಸೀಮಿತ ಅವಧಿಗೆ

• ಶೂನ್ಯ ಸಂಸ್ಕರಣಾ ಶುಲ್ಕಗಳು

• ಕನಿಷ್ಠ ದಾಖಲೆಗಳೊಂದಿಗೆ ಗೃಹ ಸಾಲ ಮಂಜೂರು

• 360 ತಿಂಗಳವರೆಗೆ ಮರುಪಾವತಿ ಅವಧಿ

• ಯಾವುದೇ ಪ್ರಿ ಮೇಮೆಂಟ್ ಅಥವಾ ಪಾರ್ಟ್ ಪೇಮೆಂಟ್ ಶುಲ್ಕಗಳಿಲ್ಲ

• ಕೇವಲ 30-ನಿಮಿಷಗಳಲ್ಲಿ ಕೆಲವೇ ಹಂತಗಳಲ್ಲಿ ತ್ವರಿತ ಅನುಮೋದನೆಯೊಂದಿಗೆ ಡಿಜಿಟಲ್ ಹೋಮ್ ಲೋನ್‌

• ಪ್ರಮುಖ ಕೇಂದ್ರಗಳಲ್ಲಿ ಡೋರ್ ಸ್ಟೆಪ್ ಸೇವೆ

*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ

ಇದನ್ನೂ ಓದಿ : Explained: ಗೋಧಿ ದರ ಹೆಚ್ಚಳಕ್ಕೂ ಬಡ್ಡಿದರ ಏರಿಕೆಗೂ ಇದೆ ಸಂಬಂಧ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.